ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಬಲಾಡ್ಯ:ರಿಜಿಜು

Team Udayavani, Jul 17, 2019, 5:20 AM IST

ಹೊಸದಿಲ್ಲಿ: ವೇಟ್‌ಲಿಫ್ಟಿಂಗ್‌ನಲ್ಲಿ ಚೀನ ಮತ್ತು ಉತ್ತರ ಕೊರಿಯಕ್ಕೆ ಸಡ್ಡು ಹೊಡೆಯುವಷ್ಟು ಬಲಾಢ್ಯವಾಗುವ ಸಾಮರ್ಥ್ಯ ಭಾರತಕ್ಕಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಸಮೋವದ ಅಪಿಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ವಾಪಸಾದ ತಂಡವನ್ನು ಸ್ವಾಗತಿಸುವ ವೇಳೆ ಸಚಿವರು ಭಾರತದ ಕ್ರೀಡಾಪಟುಗಳ ನಿರ್ದಿಷ್ಟವಾಗಿ ವೇಟ್‌ಲಿಫ್ಟರ್‌ಗಳ ಸಾಧನೆಯನ್ನು ಶ್ಲಾ ಸಿದ್ದು, ವೇಟ್‌ಲಿಫ್ಟಿಂಗ್‌ನ ಬಲಾಡ್ಯ ದೇಶವಾಗುವ ಸಾಮರ್ಥ್ಯ ನಮಗಿದೆ ಎಂದಿದ್ದಾರೆ.

ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನ ಯುವ, ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾರತ ಹಲವು ರಾಷ್ಟ್ರೀಯ, ಕಾಮನ್‌ವೆಲ್ತ್‌ ವಿಶ್ವ ಮತ್ತು ಏಶ್ಯಾ ಮಟ್ಟದ ದಾಖಲೆಗಳನ್ನು ಮಾಡಿರುವುದಲ್ಲದೆ ಒಟ್ಟು 35 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಈ 37 ಕ್ರೀಡಾಪಟುಗಳನ್ನು ರಿಜಿಜು ಅಭಿನಂದಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ