ಕಿವೀಸ್‌ ಕಟ್ಟಿಹಾಕಿದ ಭಾರತ


Team Udayavani, Oct 26, 2017, 10:24 AM IST

26-24.jpg

ಪುಣೆ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಬೌಲರ್‌ಗಳ ನಿಖರ ದಾಳಿಯಿಂದ ನ್ಯೂಜಿಲ್ಯಾಂಡ್‌ ಮೊತ್ತವನ್ನು 9 ವಿಕೆಟಿಗೆ 230 ರನ್ನಿಗೆ ನಿಯಂತ್ರಿಸಿದ ಭಾರತವು ಆಬಳಿಕ ಶಿಖರ್‌ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರ ಆಕರ್ಷಕ ಅರ್ಧಶತಕದಿಂದಾಗಿ 46 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 232 ರನ್‌ ಪೇರಿಸಿ ಜಯಭೇರಿ ಬಾರಿಸಿತು.ಈ ಗೆಲುವಿನಿಂದ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲದಲ್ಲಿ ನಿಂತಿದೆ. ಸರಣಿ ನಿರ್ಣಾಯಕ ಪಂದ್ಯ ಕಾನ್ಪುರದಲ್ಲಿ ಅ. 29ರಂದು ನಡೆಯಲಿದೆ. 

ರೋಹಿತ್‌ ಶರ್ಮ ಅವರನ್ನು ಬೇಗನೇ ಕಳೆದುಕೊಂಡರೂ ಧವನ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ಬಹಳ ಎಚ್ಚರಿಕೆಯಿಂದ ಕಿವೀಸ್‌ ದಾಳಿಯನ್ನು ಎದುರಿಸಿದರು. ದ್ವಿತೀಯ ವಿಕೆಟಿಗೆ 57 ರನ್ನುಗಳ ಜತೆ ಯಾಟದಲ್ಲಿ ಪಾಲ್ಗೊಂಡ ಅವರಿಬ್ಬರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊಹ್ಲಿ 29 ರನ್‌ ಗಳಿಸಿ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್‌ ಒಪ್ಪಿಸಿದರು. 

ಕೊಹ್ಲಿ ಪತನದ ಬಳಿಕ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಇನ್ನಷ್ಟು ಜವಾಬ್ದಾರಿ ಯಿಂದ ಆಡಲು ಪ್ರಯತ್ನಿಸಿದರು. ಒಂಟಿ ರನ್ನಿಗೆ ಹೆಚ್ಚಿನ ಮಹಣ್ತೀ ನೀಡಿ ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ಮೂರನೇ ವಿಕೆಟಿಗೆ 66 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ತಂಡದ ಗೆಲುವಿನ ಸಾಧ್ಯತೆ ಯನ್ನು ಹೆಚ್ಚಿಸಿದರು. ಉತ್ತಮವಾಗಿ ಆಡುತ್ತಿದ್ದ ಧವನ್‌ ಭರ್ಜರಿ ಹೊಡೆತಕ್ಕೆ ಪ್ರಯತ್ನಿಸಿ ಮಿಲೆ°ಗೆ ವಿಕೆಟ್‌ ಒಪ್ಪಿಸಿದರು. 84 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 68 ರನ್‌ ಗಳಿಸಿದರು.

ಆಬಳಿಕ ದಿನೇಶ್‌ ಕಾರ್ತಿಕ್‌ ಅವರು ಹಾರ್ದಿಕ್‌ ಪಾಂಡ್ಯ ಮತ್ತು ನಾಯಕ ಧೋನಿ ಜತೆಗೆ ಉತ್ತಮ ಜತೆಯಾಟ ನಡೆಸಿ ತಂಡಕ್ಕೆ ಅರ್ಹ ಜಯ ತಂದಕೊಡುವಲ್ಲಿ ಯಶಸ್ವಿಯಾದರು. 92 ಎಸೆತ ಎದುರಿಸಿದ ಅವು 4 ಬೌಂಡರಿ ನೆರವಿನಿಂದ 64 ರನ್‌ ಗಳಿಸಿ ಅಜೇಯರಾಗಿ ಉಳಿದರು. 

ಭುವನೇಶ್ವರ್‌ ನಿಯಂತ್ರಣ
ವೇಗಿ ಭುವನೇಶ್ವರ್‌ ಸಹಿತ ಭಾರತೀಯ ಬೌಲರ್‌ಗಳ ಉತ್ತಮ ಪ್ರಯತ್ನದ ಫ‌ಲವಾಗಿ ನ್ಯೂಜಿಲ್ಯಾಂಡ್‌ ಸಾಧಾರಣ ಮೊತ್ತ ಪೇರಿಸುವಂತಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಆರಂಭದಲ್ಲಿಯೇ ಎಡವಿತು. ಭುವನೇಶ್ವವರ್‌, ಬುಮ್ರಾ ಮತ್ತು ಚಾಹಲ್‌ ಅವರ ನಿಖರ ದಾಳಿಯಿಂದಾಗಿ ರನ್‌ ಗಳಿಸಲು ಒದ್ದಾಡಿದ ಕಿವೀಸ್‌ ಆಟಗಾರರು 27 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ರಾಸ್‌ ಟಯ್ಲರ್‌ ಮತ್ತು ಟಾಮ್‌ ಲಾಥಂ ಮತ್ತೆ ತಂಡವನ್ನು ಆಧರಿಸುವ ಸೂಚನೆ ಇತ್ತರು. ಆದರೆ ಅವರಿಬ್ಬರ ಜತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ. 

ಟಯ್ಲರ್‌ ಮತ್ತು ಲಾಥಂ ನಾಲ್ಕನೇ ವಿಕೆಟಿಗೆ 31 ರನ್‌ ಪೇರಿಸಿದ ಬಳಿಕ ಬೇರ್ಪಟ್ಟರು. ಉತ್ತಮವಾಗಿ ಆಡುತ್ತಿದ್ದ ಟಯ್ಲರ್‌ 21 ರನ್‌ ಗಳಿಸಿದ ವೇಳೆ ಪಾಂಡ್ಯ ಬೌಲಿಂಗ್‌ನಲ್ಲಿ ಔಟಾದರು. ಆಬಳಿಕ ಲಾಥಂ ಮತ್ತು ಹೆನ್ರಿ ನಿಕೋಲ್ಸ್‌ ತಾಳ್ಮೆಯ ಆಟವಾಡಿ ಐದನೇ ವಿಕೆಟಿಗೆ 60 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಲಾಥಂ ಅಕ್ಷರ್‌ ಪಟೇಲ್‌ ಎಸೆತವನ್ನು ತಿಳಿಯಲು ವಿಫ‌ಲರಾಗಿ ಕ್ಲೀನ್‌ಬೌಲ್ಡ್‌ ಆದರು. ಅವರು 62 ಎಸೆತ ಎದುರಿಸಿ ಕೇವಲ 2 ಬೌಂಡರಿ ನೆರವಿನಿಂದ 38  ರನ್‌ ಹೊಡೆದಿದ್ದರು.

ಹೆನ್ನಿ ನಿಕೋಲ್ಸ್‌ ಮತ್ತು ಗ್ರ್ಯಾಂಡ್‌ಹೋಮ್‌ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಆರನೇ ವಿಕೆಟಿಗೆ ಮತ್ತೆ 47 ರನ್ನುಗಳ ಜತೆಯಾಟ ದಾಖಲಾಯಿತು. ಇದರಿಂದ ನ್ಯೂಜಿಲ್ಯಾಂಡ್‌ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ನಿಕೋಲ್ಸ್‌ 62 ಎಸೆತಗಳಿಂದ 42 ರನ್‌ ಹೊಡೆದರು. ಇದು ನ್ಯೂಜಿಲ್ಯಾಂಡ್‌ ಆಟಗಾರನೋರ್ವನ ಶ್ರೇಷ್ಠ  ಇನ್ನಿಂಗ್ಸ್‌ ಆಗಿದೆ. ಗ್ರ್ಯಾಂಡ್‌ಹೋಮ್‌ ಕೇವಲ 40 ಎಸೆತಗಳಲ್ಲಿ 41 ರನ್‌ ಸಿಡಿಸಿ ಜಾಹಲ್‌ಗೆ ವಿಕೆಟ್‌ ಒಪ್ಪಿಸಿದರು. ಬಿಗು ದಾಳಿ ಸಂಘಟಿಸಿದ ಭುವನೇಶ್ವರ್‌ 45 ರನ್ನಿಗೆ 3 ವಿಕೆಟ್‌ ಕಿತ್ತರೆ ಬುಮ್ರಾ ಮತ್ತು ಚಾಹಲ್‌ ತಲಾ ಎರಡು ವಿಕೆಟ್‌  ಪಡೆದರು.

ಸ್ಕೋರ್‌ಪಟ್ಟಿ
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಧೋನಿ ಬಿ ಕುಮಾರ್‌    11
ಕಾಲಿನ್‌ ಮುನ್ರೊ    ಬಿ ಕುಮಾರ್‌    10
ಕೇನ್‌ ವಿಲಿಯಮ್ಸನ್‌    ಎಲ್‌ಬಿಡಬ್ಲ್ಯು ಬಿ ಬುಮ್ರಾ    3
ರಾಸ್‌ ಟಯ್ಲರ್‌    ಸಿ ಧೋನಿ ಬಿ ಪಾಂಡ್ಯ    21
ಟಾಮ್‌ ಲಾಥಂ    ಬಿ ಅಕ್ಷರ್‌    38
ಹೆನ್ರಿ ನಿಕೋಲ್ಸ್‌    ಬಿ ಕುಮಾರ್‌    42
ಗ್ರ್ಯಾಂಡ್‌ಹೋಮ್‌    ಸಿ  ಬುಮ್ರಾ ಬಿ ಚಾಹಲ್‌    41
ಮೈಕಲ್‌ ಸ್ಯಾಂಟ್ನರ್‌    ಸಿ ಕೊಹ್ಲಿ ಬಿ ಬುಮ್ರಾ    29 
ಆ್ಯಡಂ ಮಿಲೆ°    ಎಲ್‌ಬಿಡಬ್ಲ್ಯು ಬಿ ಚಾಹಲ್‌    0
ಟಿಮ್‌ ಸೌಥಿ    ಔಟಾಗದೆ    25
ಟ್ರೆಂಟ್‌ ಬೌಲ್ಟ್    ಔಟಾಗದೆ    2

ಇತರ:        8
ಒಟ್ಟು ( 50 ಓವರ್‌ಗಳಲ್ಲಿ 9 ವಿಕೆಟಿಗೆ)    230
ವಿಕೆಟ್‌ ಪತನ: 1-20, 2-25, 3-27, 4-58, 5-118, 6-165, 7-188, 8-188, 9-220

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    10-0-45-3
ಜಸ್‌ಪ್ರೀತ್‌ ಬುಮ್ರಾ        10-2-38-2
ಕೇದಾರ್‌ ಜಾಧವ್‌        8-0-31-0
ಹಾರ್ದಿಕ್‌ ಪಾಂಡ್ಯ        4-0-23-1
ಅಕ್ಷರ್‌ ಪಟೇಲ್‌        10-1-54-1
ಯುಜ್ವೇಂದ್ರ ಚಾಹಲ್‌        8-1-36-2

ಭಾರತ
ರೋಹಿತ್‌ ಶರ್ಮ ಸಿ ಮುನ್ರೊ ಬಿ ಸೌಥಿ    7
ಶಿಖರ್‌ ಧವನ್‌     ಸಿ ಟಯ್ಲರ್‌ ಬಿ ಮಿಲೆ°    68
ವಿರಾಟ್‌ ಕೊಹ್ಲಿ     ಸಿ ಲಾಥಂ ಬಿ ಗ್ರ್ಯಾಂಡ್‌ಹೋಮ್‌    29
ದಿನೇಶ್‌ ಕಾರ್ತಿಕ್‌    ಔಟಾಗದೆ    64
ಹಾರ್ದಿಕ್‌ ಪಾಂಡ್ಯ     ಸಿ ಮಿಲೆ° ಬಿ ಸ್ಯಾಂಟ್ನರ್‌    30
ಎಂಎಸ್‌  ಧೋನಿ     ಔಟಾಗದೆ    18

ಇತರ        16
ಒಟ್ಟು (46 ಓವರ್‌ಗಳಲ್ಲಿ 4 ವಿಕೆಟಿಗೆ)    232
ವಿಕೆಟ್‌ ಪತನ: 1-22, 2-79, 3-145. 4-204

ಬೌಲಿಂಗ್‌: 
ಟಿಮ್‌ ಸೌಥಿ        9-1-60-1
ಟ್ರೆಂಟ್‌ ಬೌಲ್ಟ್        10-0-54-0 
ಆ್ಯಡಂ ಮಿಲೆ°        8-1-21-1 
ಮೈಕಲ್‌ ಸ್ಯಾಂಟ್ನರ್‌        10-0-38-1 
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    7-0-40-1
ಕಾಲಿನ್‌ ಮುನ್ರೊ        2-0-12-0 
ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌

ಟಾಪ್ ನ್ಯೂಸ್

1-fgdfg

ಹೊರಟ್ಟಿಗೆ ಮಣೆ: ಬಿಜೆಪಿ ಟಿಕೆಟ್ ವಂಚಿತ ಮೋಹನ ಲಿಂಬಿಕಾಯಿ ತೀವ್ರ ಅಸಮಾಧಾನ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

19arrest

ಕ್ಷುಲ್ಲಕ ಕಾರಣಕ್ಕೆ ಕೊಲೆಗೈದ ಸೈಕೋ ಕಿಲ್ಲರ್‌ ಬಂಧನ

army

ಕಾಶ್ಮೀರದಲ್ಲಿ ಈ ವರ್ಷ 26 ವಿದೇಶಿ ಭಯೋತ್ಪಾದಕರ ಸಂಹಾರ

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

ನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

1-f-ffs

ಬಿಬಿಎಂಪಿ ಚುನಾವಣೆ : ಮೇ 28ಕ್ಕೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕಾರಿಣಿ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಲಕ್ನೋ ನಾಯಕ ಕೆ.ಎಲ್.ರಾಹುಲ್

ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಲಕ್ನೋ ನಾಯಕ ಕೆ.ಎಲ್.ರಾಹುಲ್

will come back stronger says Gautam gambhir

ಮತ್ತಷ್ಟು ಬಲಿಷ್ಠರಾಗಿ ಮರಳುತ್ತೇವೆ..: ಲಕ್ನೋ ತಂಡ ಮೆಂಟರ್ ಗೌತಮ್ ಗಂಭೀರ್

thumb 6

ಒಂದು ಶತಕ ಹಲವು ದಾಖಲೆ: ಸಾಧನೆಗಳ ಮೈಲಿಗಲ್ಲು ನೆಟ್ಟ ರಜತ್ ಪಾಟೀದಾರ್

ಏಷ್ಯನ್‌ ಕಪ್‌ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಏಷ್ಯನ್‌ ಕಪ್‌ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್‌

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

24

ಮೇಲ್ಸೇತುವೆಯೂ ಇಲ್ಲ -ಚತುಷ್ಪಥವೂ ಇಲ್ಲ!

22appeal

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಜೆಡಿಎಸ್‌ ಮನವಿ

21releft

ಜಲಕ್ಷಾಮ: ಪರಿಹಾರಕ್ಕೆ ಆಗ್ರಹಿಸಿ ಸಭೆ ಬಹಿಷ್ಕಾರ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

1-fgdfg

ಹೊರಟ್ಟಿಗೆ ಮಣೆ: ಬಿಜೆಪಿ ಟಿಕೆಟ್ ವಂಚಿತ ಮೋಹನ ಲಿಂಬಿಕಾಯಿ ತೀವ್ರ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.