ಕ್ರಿಕೆಟ್ ಜಗತ್ತಿಗೆ ಭಾರತವೇ ಬಾಸ್: ಶೋಯೇಬ್ ಅಖ್ತರ್

Team Udayavani, Nov 12, 2019, 3:29 PM IST

ಹೊಸದಿಲ್ಲಿ: ಭಾರತ ತಂಡ ಕ್ರಿಕೆಟ್ ಜಗತ್ತಿಗೆ ಬಾಸ್ ಎಂದು ಪಾಕಿಸ್ಥಾನದ ಮಾಜಿ ವೇಗಿ ಶೋಯೇಬ್ ಅಖ್ತರ್ ಗುಣಗಾನ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಟಿ- ಟ್ವೆಂಟಿ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ರಾವಲ್ಪಿಂಡಿ ಎಕ್ಸ್ ಪ್ರೆಸ್ ಕೊಂಡಾಡಿದ್ದಾರೆ.

ಭಾರತ ಮೊದಲ ಪಂದ್ಯವನ್ನು ಸೋತರೂ ಅದ್ಭುತ ರೀತಿಯಲ್ಲಿ ತಿರುಗೇಟು ನೀಡಿ ಯಾರು ನಿಜವಾದ ಬಾಸ್ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಮೂರನೇ ಟಿ ಟ್ವೆಂಟಿ ಪಂದ್ಯ ರೋಚಕವಾಗಿರುತ್ತದೆ ಎಂದು ಭಾವಿಸಿದ್ದೆ. ಆದರೆ ಭಾರತ ಉತ್ತಮ ತಂಡವಾಗಿ ಹೊರಹೊಮ್ಮಿತು. ಆದರೆ ಬಾಂಗ್ಲಾ ಕ್ರಿಕೆಟಿಗರ ಆಟವನ್ನೂ ನಾವು ಇಲ್ಲಿ ಮೆಚ್ಚಬೇಕು ಎಂದು ಅಖ್ತರ್ ಅಭಿಪ್ರಾಯಪಟ್ಟರು.

ರವಿವಾರ ನಡೆದ ಪಂದ್ಯದಲ್ಲಿ ಭಾರತ 30 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ