ಕ್ರಿಕೆಟ್‌ ಆಯಾಮ ಬದಲಿಸಿದ ಐಪಿಎಲ್‌: ಕುಂಬ್ಳೆ

Team Udayavani, Mar 3, 2018, 6:10 AM IST

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ದೇಶದ ಕ್ರಿಕೆಟ್‌ ಆಯಾಮವನ್ನೇ ಬದಲಿಸಿದೆ ಎಂಬುದಾಗಿ ಟೀಮ್‌ ಇಂಡಿಯಾದ ಮಾಜಿ ಕೋಚ್‌, ವಿಶ್ವವಿಖ್ಯಾತ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

“ಈ ಟಿ20 ಕ್ರಿಕೆಟ್‌ ಪಂದ್ಯಾವಳಿಯ ಆರಂಭದಿಂದ ದೇಶದ ಅನೇಕ ಮಂದಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಕೌಶಲ ಪ್ರದರ್ಶನಕ್ಕೊಂದು ವೇದಿಕೆ ಲಭಿಸಿದೆ. ಇದರಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವಾಗ ಎದುರಾಗುವ ಭೀತಿ ಕೂಡ ದೂರಾಗಿದೆ’ ಎಂದು ಕುಂಬ್ಳೆ ಹೇಳಿದರು.

“ಈಗಿನ ಯುವ ಕ್ರಿಕೆಟಿಗರ ಆತ್ಮವಿಶ್ವಾಸ ಬಹಳ ಉನ್ನತ ಮಟ್ಟದ್ದು. ಆ ಕಾಲದಲ್ಲಿ ನಾವು ಇಷ್ಟೊಂದು ಆತ್ಮವಿಶ್ವಾಸ ಹೊಂದಿರಲಿಲ್ಲ. ನಾನು ಜಿಮ್‌ಗೆ ಹೋದದ್ದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿ 9 ವರ್ಷಗಳ ಬಳಿಕ. ಅದೂ ಗಾಯಾಳಾದ್ದರಿಂದ. ಆದರೆ ಇಂದು ಆರಂಭದಲ್ಲೇ ಎಲ್ಲ ಅನುಕೂಲಗಳೂ ಕ್ರಿಕೆಟಿಗರಿಗೆ ಲಭಿಸುತ್ತಿವೆ. ಇದಕ್ಕಾಗಿ ಐಪಿಎಲ್‌ಗೆ ಥ್ಯಾಂಕ್ಸ್‌ ಹೇಳಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಐಪಿಎಲ್‌ ಒಂದು ಉತ್ತಮ ಬುನಾದಿ’ ಎಂದು ದುಬಾೖಯಲ್ಲಿ ನಡೆದ ಶ್ಯಾಮ್‌ ಭಾಟಿಯ ಕ್ರಿಕೆಟ್‌ ಪ್ರಶಸ್ತಿ ಸಮಾರಂಭದ ವೇಳೆ ಕುಂಬ್ಳೆ ಹೇಳಿದರು.

“ಐಪಿಎಲ್‌ ಸುಮಾರು 50 ದಿನಗಳ ಕಾಲ ನಡೆಯುತ್ತದೆ. ಈ ವೇಳೆ ವಿವಿಧ ದೇಶಗಳ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದು ಕೂಡ ವಿಶೇಷ ಅನುಭವ. ತಯಾರಿ, ಕಾರ್ಯ ವಿಧಾನ, ಮಾನಸಿಕ ಸಿದ್ಧತೆಗೆಲ್ಲ ಇದೊಂದು ಪಾಠ. ಮೊದಲಾದರೆ 4 ವರ್ಷಕ್ಕೊಮ್ಮೆ ಆಸ್ಟ್ರೇಲಿಯ, ಇಂಗ್ಲೆಂಡ್‌ ಮೊದಲಾದೆಡೆಗೆ ತೆರಳಿ ಅಲ್ಲಿನ ಆಟಗಾರರೊಂದಿಗೆ ಆಡಬೇಕಿತ್ತು. ಆದರೆ ಐಪಿಎಲ್‌ನಲ್ಲಿ ಪ್ರತಿ ವರ್ಷವೂ ವಿದೇಶಿ ಆಟಗಾರರ ಜತೆ ಹಾಗೂ ವಿರುದ್ಧ ಆಡಬಹುದಾಗಿದೆ’ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...