ಟೆಸ್ಟ್‌ ಸರಣಿ ಸೋತರೂ ಭಾರತ ನಂ. ವನ್‌

Team Udayavani, Sep 13, 2018, 6:40 AM IST

ಲಂಡನ್‌: ಇಂಗ್ಲೆಂಡ್‌ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಸೋತರೂ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂಗ್ಲೆಂಡ್‌ ಈ ಸರಣಿಯನ್ನು 4-1 ಅಂತರದಿಂದ ಗೆದ್ದು ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿರಾಟ್‌ ಕೊಹ್ಲಿ ತಂಡ 125 ಅಂಕಗಳೊಂದಿಗೆ ಈ ಟೆಸ್ಟ್‌ ಸರಣಿ ಯನ್ನು ಆರಂಭಿಸಿತ್ತು. ಆದರೆ ಸರಣಿ ಸೋತ ಬಳಿಕ 10 ಅಂಕ ಕಳೆದುಕೊಂಡು 115 ಅಂಕಕ್ಕೆ ಇಳಿಯಿತು. ಆದರೂ ಭಾರತ ಅಗ್ರಸ್ಥಾನ ಉಳಿಸಿಕೊಂಡಿದೆ. ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿ 4-1 ಟೆಸ್ಟ್‌ಗಳಿಂದ ಭಾರತವನ್ನು ಸೋಲಿಸಿರುವ ಇಂಗ್ಲೆಂಡ್‌ ತಂಡ ರ್‍ಯಾಂಕಿಂಗ್‌ನಲ್ಲೂ ಭಡ್ತಿ ಪಡೆದಿದೆ. 97 ಅಂಕ ದೊಂದಿಗೆ 5ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್‌ ಸರಣಿ ಗೆಲುವಿನ ಬಳಿಕ 105 ಅಂಕದೊಂದಿಗೆ ನ್ಯೂಜಿಲ್ಯಾಂಡ್‌ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದುಕೊಂಡಿದೆ. ಜೋ ರೂಟ್‌ ತಂಡ ದಕ್ಷಿಣ ಆಫ್ರಿಕಾ,ಆಸ್ಟ್ರೇಲಿಯ ತಂಡಗಳಿಂದ ಕೇವಲ ಒಂದು ಅಂಕ ಹಿಂದಿದೆ. ಈ ಎರಡು ತಂಡಗಳು 106 ಅಂಕ ಹೊಂದಿದೆ.ನ್ಯೂಜಿಲ್ಯಾಂಡ್‌ ತಂಡ 102 ಅಂಕ ಹೊಂದಿದೆ. ಐದು ಅಂಕಗಳ ಅಂತರದಲ್ಲಿ ನಾಲ್ಕು ತಂಡಗಳಿದ್ದು ನಿಕಟ ಪೈಪೋಟಿ ನೀಡುತ್ತಿವೆ.

ಟೆಸ್ಟ್‌ ರ್‍ಯಾಂಕಿಂಗ್‌
ತಂಡ    ರೇಟಿಂಗ್‌    ಅಂಕ
ಭಾರ ತ    115         4016
ದ.ಆಫ್ರಿಕಾ     106    3712
ಆಸ್ಟ್ರೇಲಿಯ     106     3499
ಇಂಗ್ಲೆಂಡ್‌     105     4722
ನ್ಯೂಜಿಲೆಂಡ್‌     102    2354
ಶ್ರೀಲಂಕಾ         97    3668
ಪಾಕಿಸ್ಥಾನ     88     1853
ವೆಸ್ಟ್‌ಇಂಡಿಸ್‌     77     2235
ಬಾಂಗ್ಲದೇಶ     67    1268
ಜಿಂಬಾಬ್ವೆ         2     12
         


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ