ಕಾಮನ್ವೆಲ್ತ್ ಗೇಮ್ಸ್‌ಗೂ ರಾಣಿ ಗೈರು
Team Udayavani, Jun 24, 2022, 6:27 AM IST
ಹೊಸದಿಲ್ಲಿ: ಭಾರತದ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್ ಕಾಮನ್ವೆಲ್ತ್ ಗೇಮ್ಸ್ ಪಂದ್ಯಾವಳಿಯಿಂದಲೂ ಹೊರಗುಳಿಯಲಿದ್ದಾರೆ. ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳದ ಹಿನ್ನೆಲೆಯಲ್ಲಿ ಗೋಲ್‌ಕೀಪರ್ ಸವಿತಾ ಪುನಿಯ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕಿ ಆಗಿರುವವರು ಡಿಫೆಂಡರ್ ದೀಪ್ ಗ್ರೇಸ್ ಎಕ್ಕ.
ಉಳಿದಂತೆ ಮುಂಬರುವ ವಿಶ್ವಕಪ್ ಪಂದ್ಯಾವಳಿಗೆ ಆಯ್ದ ಬಹುತೇಕ ಆಟಗಾರ್ತಿಯರೇ ಇದ್ದಾರೆ. 2 ಬದಲಾವಣೆಯಷ್ಟೇ ಕಂಡುಬಂದಿದೆ. ಬಿಛೂ ದೇವಿ ಖರಿಮಮ್ ಬದಲು ರಜನಿ ಎಟಿಮಾರ್ಪು ಬಂದಿದ್ದಾರೆ. ಮಿಡ್‌ಫಿàಲ್ಡರ್ ಸೋನಿಕಾ ಬದಲು ಫಾರ್ವರ್ಡ್ ಆಟಗಾರ್ತಿ ಸಂಗೀತಾ ಕುಮಾರಿ ಆಯ್ಕೆಯಾಗಿದ್ದಾರೆ.
ಭಾರತ “ಎ’ ವಿಭಾಗದಲ್ಲಿ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಮೊದಲ ಪಂದ್ಯವನ್ನು ಜು. 29ರಂದು ಘಾನಾ ವಿರುದ್ಧ ಆಡಲಿದೆ.
ಕಳೆದ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ಕಂಚಿನ ಪದಕ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ಗೆ ಶರಣಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಪೋಡಿಯಂ ಏರುವ ವಿಶ್ವಾಸ ಹೊಂದಿದೆ.
ಕಾಮನ್ವೆಲ್ತ್ ಗೇಮ್ಸ್ ಜು. 28ರಿಂದ ಆ. 8ರ ತನಕ ನಡೆಯಲಿದೆ. ಇದಕ್ಕೂ ಮೊದಲು ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿ ಸಾಗಲಿದೆ (ಜು. 1-17).
ಭಾರತ ಹಾಕಿ ತಂಡ :
ಗೋಲ್‌ಕೀಪರ್: ಸವಿತಾ ಪುನಿಯ (ನಾಯಕಿ), ರಜನಿ ಎಟಿಮಾರ್ಪು.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕ, ಗುರ್ಜೀತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ.
ಮಿಡ್‌ಫೀಲ್ಡರ್: ನಿಶಾ, ಸುಶೀಲಾ ಚಾನು, ಮೋನಿಕಾ, ನೇಹಾ, ಜ್ಯೋತಿ, ನವಜೋತ್ ಕೌರ್, ಸಲೀಮಾ ಟೇಟೆ.
ಫಾರ್ವರ್ಡ್ಸ್: ವಂದನಾ ಕಟಾರಿಯಾ, ಲಾಲ್ರೆಮಿÕಯಾಮಿ, ನವನೀತ್ ಕೌರ್, ಶರ್ಮಿಳಾ ದೇವಿ, ಸಂಗೀತಾ ಕುಮಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ
ಕಪಿಲ್ದೇವ್ ಸಾರಥ್ಯದ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ರಣಜಿ ಟ್ರೋಫಿ ಫೈನಲ್: ಇನ್ನಿಂಗ್ಸ್ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ
ಅಭ್ಯಾಸ ಪಂದ್ಯ: ಚೇತೇಶ್ವರ್ ಪೂಜಾರ ವಿಫಲ, ರಿಷಭ್ ಪಂತ್ ಯಶಸ್ವಿ
ವಿಂಬಲ್ಡನ್-2022: ಸೆರೆನಾ ವಿಲಿಯಮ್ಸ್ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ
ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ
26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ
‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್
ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ