ಇಂಡೋ ಕಿವೀಸ್ 2ನೇ ಟೆಸ್ಟ್: ಮತ್ತೆ ಎಡವಿದ ಕೊಹ್ಲಿ, ಅರ್ಧಶತಕ ಸಿಡಿಸಿದ ಶಾ, ಪೂಜಾರ

Team Udayavani, Feb 29, 2020, 8:58 AM IST

ನ್ಯೂಜಿಲ್ಯಾಂಡ್ : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಶನಿವಾರ ಆರಂಭವಾದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಇಲ್ಲಿನ ಕ್ರೈಸ್ಟ್ ಚರ್ಚ್ ಹಗ್ಲೆ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಆರಂಭಿಕ ಪೃಥ್ವಿ ಶಾ ಭರ್ಜರಿ ಅರ್ಧಶತಕ ಸಿಡಿಸಿ ಜೆಮಿಸನ್ ಗೆ ವಿಕೆಟ್ ಒಪ್ಪಿಸಿದರು. ಮಾಯಾಂಕ್ ಅಗರ್ವಾಲ್ ಕೂಡ ಅಲ್ಪ ಮೊತ್ತಕ್ಕೆ ಔಟಾಗಿದ್ದು 7 ರನ್ ಗಳಿಸುವಷ್ಟರಲ್ಲಿ ಬೋಲ್ಟ್ ಎಸೆತಕ್ಕೆ ಎಲ್ ಬಿ ಬಲೆಗೆ ಬಿದ್ದರು.

ನಂತರ ಬಂದ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಅಜಿಂಕ್ಯಾ ರಹಾನೆ 7 ರನ್ ಗಳಿಸುವಷ್ಟರಲ್ಲಿ ಸೌಥಿ ಎಸೆತದಲ್ಲಿ ರಾಸ್ ಟೇಲರ್ ಗೆ ಕ್ಯಾಚಿತ್ತರು.
ಸದ್ಯ 46 ಓವರ್ ಅಂತ್ಯದ ವೇಳೆಗೆ ಚೇತೇಶ್ವರ ಪೂಜಾರ 50 ಹಾಗೂ ಹನುಮ ವಿಹಾರಿ 18ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲ್ಯಾಂಡ್ ಪರ ಸೌಥಿ ಎರಡು ವಿಕೆಟ್ ಪಡೆದರೆ, ಜೆಮಿಸನ್ ಹಾಗೂ ಬೋಲ್ಟ್ ತಲಾ ಒಂದು ವಿಕೆಟ್ ಗಳಿಸಿದ್ದಾರೆ.

ಭಾರತ: ಪೃಥ್ವಿ ಶಾ, ಮಯಾಂಕ್ ಆಗರ್ವಾಲ್ , ಚೇತೆಶ್ವರ ಪೂಜಾರ, ವಿರಾಟ್ ಕೊಹ್ಲಿ(C), ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್(wk), ರವೀಂದ್ರ ಜಡೇಜಾ, ಉಮೇಶ್ ಯಾದವ್ , ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ

ನ್ಯೂಜಿಲ್ಯಾಂಡ್: ಟಾಮ್ ಲಾಥಮ್ , ಟಾಮ್ ಬ್ಲುಂಡೆಲ್, ಕೇನ್ ವಿಲಿಯಮ್ಸನ್(c) , ರಾಸ್ ಟೇಲರ್ , ಹೆನ್ರಿ ನಿಕೋಲಸ್, ಬಿಜೆ ವಾಟ್ಲಿಂಗ್ (wk) , ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಕೈಲ್ ಜಿಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೋಲ್ಟ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಣಿಪಾಲ: ಎಲ್ಲರೂ ಇಟಲಿಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಾಲಿನಲ್ಲಿ ನಿಂತಿರುವಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಈ ವಿದ್ಯಾರ್ಥಿನಿ, ನಾನು ಇಟಲಿಯಲ್ಲೇ...

  • ಹೊಸದಿಲ್ಲಿ/ವಾಷಿಂಗ್ಟನ್‌: ಕೋವಿಡ್‌ 19 ವಿಚಾರದಲ್ಲಿ ಅಸಡ್ಡೆ ಯಿಂದಲೇ ನಡೆದುಕೊಳ್ಳುತ್ತಿರುವ ಅಮೆರಿಕ ಈಗ ಅದಕ್ಕೆ ಬೆಲೆ ತೆರುತ್ತಿದ್ದು, ಸೋಂಕುಪೀಡಿತರ ಸಂಖ್ಯೆ...

  • ಮಂಗಳೂರು / ಮಣಿಪಾಲ: ಕೋವಿಡ್‌-19 ವಿಸ್ತರಣೆಯನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಶನಿವಾರ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಲಾಕ್‌ಡೌನ್‌ ನಡೆಸುವಂತೆ ಜಿಲ್ಲಾಡಳಿತ...

  • ಜಗತ್ತು ನಿಶ್ಚಲವಾಗಿಬಿಟ್ಟಿದೆ. ಕೋವಿಡ್ 19 ಎಂಬ ಮಹಾರೋಗವು ಸದಾ ಗಿಜುಗುಡುತ್ತಿದ್ದ ಮಹಾನಗರಗಳನ್ನೆಲ್ಲ ಬಿಕೋ ಎನ್ನುವಂತೆ ಮಾಡಿಬಿಟ್ಟಿದೆ. ಕಿಕ್ಕಿರಿದು ತುಂಬಿರುತ್ತಿದ್ದ...

  • ಉಡುಪಿ: ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೋಲಿಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಸಾರ್ವಜನಿಕ...