ಪ್ರಧಾನ ಸುತ್ತಿಗೆ ಪ್ರಮುಖರ ಪ್ರವೇಶ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌

Team Udayavani, Mar 27, 2019, 7:09 AM IST

w-21

ಹೊಸದಿಲ್ಲಿ: ಸದ್ಯ ಸಾಗುತ್ತಿರುವ “ಇಂಡಿಯಾ ಓಪನ್‌’ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ 8 ಸಿಂಗಲ್ಸ್‌ ಆಟಗಾರರು, 10 ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿವೆ. ಮಂಗಳವಾರ ನಡೆದ ಪಂದ್ಯಗಳಲ್ಲಿ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 3ನೇ ಶ್ರೇಯಾಂಕದ ರಾಹುಲ್‌ ಯಾದವ್‌ ಚಿಟ್ಟಬಿನಾ ಮತ್ತು 4ನೇ ಶ್ರೇಯಾಂಕಿತ ಸಿದ್ದಾರ್ಥ್ ಠಾಕೂರ್‌ ಕಾರ್ತಿಕ್‌ ಜಿಂದಾಲ್‌ ಪ್ರದಾನ ಸುತ್ತಿಗೆ ಮುನ್ನಡೆದರೆ, ಪ್ರಣವ್‌ ಜೆರ್ರಿ ಜೋಪ್ರಾ- ಶಿವಂ ಶರ್ಮ ಜೋಡಿ ಪುರುಷರ ಡಬಲ್ಸ್‌ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಕಾಲಿಟ್ಟಿದ್ದಾರೆ.

ಕಾರ್ತಿಕ್‌ ಜಿಂದಾಲ್‌ ಅರ್ಹತಾ ಸುತ್ತಿನ ಎರಡು ಪಂದ್ಯಗಳಲ್ಲಿ ಪಾವೆಲ್‌ ಕೊಟ್ಟಾರೆಂಕಾ ಮತ್ತು ಭಾರತದವರೇ ಆದ ಶರತ್‌ ಡುನ್ನಾ ಸೋಲಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದರು. ಮೊದಲ ಪಂದ್ಯದಲ್ಲಿ ಅವರು 7ನೇ ಶ್ರೇಯಾಂಕಿತ ಥಾಯ್ಲೆಂಡ್‌ನ‌ ಖೋಸಿಟ್‌ ಫೆಟ್ರಾಡಾಬ್‌ ಅವರನ್ನು ಎದುರಿಸಲಿದ್ದಾರೆ.

ರಾಹುಲ್‌ ಯಾದವ್‌ ಚಿಟ್ಟಬಿನಾ ಭಾರತ ದವರೇ ಆದ ಅನಂತ್‌ ಶಿವಂ ಜಿಂದಾಲ್‌ ಅವರನ್ನು ಅರ್ಹತಾ ಸುತ್ತಿನಲ್ಲಿ 21-14, 21-15 ಗೇಮ್‌ಗಳಿಂದ ಸೋಲಿಸಿದ್ದಾರೆ. ಇದಕ್ಕೂ ಮುನ್ನ ಗುರುಪ್ರತಾಪ್‌ ಸಿಂಗ್‌ ಧಾಲಿವಾಲ್‌ ವಿರುದ್ಧ 21-6, 21-13 ಗೇಮ್‌ಗಳಿಂದ ಜಯಿಸಿದ್ದರು.

ವನಿತಾ ಸಿಂಗಲ್ಸ್‌ನಲ್ಲಿ ರಿತಿಕಾ ಠಾಕೂರ್‌, ಪ್ರಾಶಿ ಜೋಶಿ, ರಿಯಾ ಮುಖರ್ಜಿ ಮತ್ತು ವೈದೇಹಿ ಚೌಧರಿ ಅವರು ಮುನ್ನಡೆದಿದ್ದಾರೆ. ರಿತಿಕಾ ಮೊದಲ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಮಿಯಾ ಬ್ಲಿಚೆಲ್ಟ್ ಅವರನ್ನು ಎದುರಿಸಲಿದ್ದಾರೆ. ಪ್ರಾಶಿ ಜೋಶಿ ಮತ್ತು ವೈದೇಹಿ ಕ್ರಮವಾಗಿ 3ನೇ ಶ್ರೇಯಾಂಕಿತೆ ಹೀ ಬಿಂಗಿjಯೊ ಮತ್ತು 7ನೇ ಶ್ರೇಯಾಂಕಿತೆ ಹಾನ್‌ ಯೂ ಅವರ ವಿರುದ್ಧ ಆಡಲಿದ್ದಾರೆ.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್‌-ಮೊಹಮ್ಮದ್‌ ಮೌನಿಸ್‌ ಹಾಂಕಾಂಗ್‌ನ ತಾಂಗ್‌ ಚಾನ್‌ ಮನ್‌-ನಗ್‌ ತ್ಸು ಯಾ ವಿರುದ್ಧ ಪರಾಭವಗೊಂಡರು. ಈ ಕೂಟದ ಪ್ರಧಾನ ಸುತ್ತು ಬುಧವಾರದಿಂದ ಆರಂಭವಾಗಲಿದ್ದು, 2017ರ ಚಾಂಪಿಯನ್‌ ಪಿ.ವಿ. ಸಿಂಧು, 2015ರ ಚಾಂಪಿಯನ್‌ ಕೆ. ಶ್ರೀಕಾಂತ್‌ ಹಾಗೂ 5ನೇ ಶ್ರೇಯಾಂಕ ಸಮೀರ್‌ ವರ್ಮ ತಮ್ಮ ಆಟವನ್ನು ಆರಂಭಿಸಲಿದ್ದಾರೆ.

ಚೋಪ್ರಾ- ಶರ್ಮಗೆ ಮುನ್ನಡೆ
ಪ್ರಣವ್‌ ಜೆರ್ರಿ ಜೋಪ್ರಾ-ಶಿವಂ ಶರ್ಮ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದವರೇ ಆದ ವಿಕಾಸ್‌ ಚೌಹಾಣ್‌-ಸಂದೀಪ್‌ ಚೌದುರಿ ಜೋಡಿಯನ್ನು ಕೇವಲ 19 ನಿಮಿಷಗಳ ಆಟದಲ್ಲಿ 21-10, 21-5 ಗೇಮ್‌ಗಳಿಂದ ಸೋಲಿಸಿದೆ. ವನಿತಾ ಡಬಲ್ಸ್‌ ವಿಭಾಗದಲ್ಲಿ ಮೇಘಾ ಮೊರ್ಚಾನ ಬೋರಾ-ಮಾನಲಿ ಸಿನ್ಹಾ ಭಾರತದವರೇ ಆದ ಅನಾಮಿಕ ಕಶ್ಯಪ್‌-ಸಂಗಾಮಿತ್ರ ಸಾಯಿಕಿಯಾ ಜೋಡಿಯನ್ನು 24-22, 21-13 ಗೇಮ್‌ಗಳಿಂದ ಸೋಲಿಸಿದರು.

ಟಾಪ್ ನ್ಯೂಸ್

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಮತ್ತೆ ಹಾಜರ್‌ : ಟಿಕೆಟನ್ನು ಮಾಹಿಯೇ ಕೊಡಿಸುವ ನಂಬಿಕೆಯಲ್ಲಿ ಚಾಚಾ

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

MUST WATCH

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

ಹೊಸ ಸೇರ್ಪಡೆ

Mass confinement for poor pregnant women

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

sagara news

ಸಾಲುಮರಗಳ ಕಡಿತಲೆಗೆ ಆಕ್ಷೇಪ ಸಲ್ಲ

23dvg1

ಅನ್ಯಭಾಷೆ ನಾಮಫಲಕ ತೆರವುಗೊಳಿಸದಿದ್ರೆ ಹೋರಾಟ: ರಾಮೇಗೌಡ

covid news

100 ಕೋಟಿ ಡೋಸ್‌ ಐತಿಹಾಸಿಕ ಮೈಲಿಗಲ್ಲು

14shashikala

ಪ್ರಧಾನಿ ಮೋದಿ ಕೈ ಬಲಪಡಿಸಿ: ಶಶಿಕಲಾ ಜೊಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.