ಚೆನ್ ಯುಫಿ, ಶಿ ಯುಖೀ ತಾರಾ ಆಕರ್ಷಣೆ
Team Udayavani, Mar 16, 2019, 12:30 AM IST
ಹೊಸದಿಲ್ಲಿ: 9ನೇ ಆವೃತ್ತಿಯ “ಯೋನೆಕ್ಸ್ ಸನ್ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿ ಮಾ. 26ರಿಂದ ಇಲ್ಲಿನ “ಕೆ.ಡಿ. ಜಾಧವ್ ಇಂಡೋರ್ ಹಾಲ್ ಆಫ್ ಇಂದಿರಾ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ. ಇಲ್ಲಿ ಮೊದಲ ಬಾರಿಗೆ ಈ ಕೂಟ ನಡೆಯಲಿದ್ದು, ಕಳೆದ ಸತತ 8 ವರ್ಷ “ಸಿರಿ ಫೋರ್ಟ್ ನ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆಯುತ್ತಿತ್ತು.
ಇತ್ತೀಚೆಗಷ್ಟೇ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಚೆನ್ ಯುಫಿ, ಪುರುಷರ ವಿಭಾಗದ ಹಾಲಿ ಚಾಂಪಿಯನ್ ಶಿ ಯುಖಿ ಈ ಕೂಟದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಭಾರತ ಸೈನಾ ನೆಹ್ವಾಲ್, 2017ರ ಚಾಂಪಿಯನ್ ಪಿ.ವಿ. ಸಿಂಧು, 2015ರ ವಿಜೇತ ಕೆ. ಶ್ರೀಕಾಂತ್ ಮೇಲೆ ಭಾರೀ ನಿರೀಕ್ಷೆ ಇರಿಸಿದೆ. ಸಾಯಿ ಪ್ರಣೀತ್, ಪಿ. ಕಶ್ಯಪ್, ಶುಭಂಕರ್ ಡೇ, ಸಮೀರ್ ವರ್ಮ ಕೂಡ ಈ ಕೂಟದಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.
ಚೀನಿ ಆಟಗಾರರ ದಂಡು
350,000 ಡಾಲರ್ ಬಹುಮಾನದ ಈ ಕೂಟದಲ್ಲಿ ಚೀನಿ ಆಟಗಾರರ ದೊಡ್ಡ ದಂಡೇ ಸೇರಲಿದೆ. ವನಿತಾ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ 6 ಮಂದಿ ಚೀನಿ ಆಟಗಾರ್ತಿಯರಿದ್ದಾರೆ. ಹಿ ಬಿಂಗ್ಜಿಯಾವೊ, ಹಾನ್ ಯು, ಲೀ ಕ್ಸುರುಯಿ, ಚೆನ್ ಕ್ಸಿಯೋಕ್ಸಿನ್, ಕೈ ಯನ್ಯಾನ್ ಇವರಲ್ಲಿ ಪ್ರಮುಖರು. 2017ರ ಪುರುಷರ ಸಿಂಗಲ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಕೂಡ ನೆಚ್ಚಿನ ಆಟಗಾರನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ