ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸಿಂಧು, ಸೈನಾ ದ್ವಿತೀಯ ಸುತ್ತಿಗೆ
Team Udayavani, Mar 31, 2017, 7:57 AM IST
ಹೊಸದಿಲ್ಲಿ: ಒಲಿಂಪಿಕ್ ಪದಕ ವಿಜೇತರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಸುಲಭ ಗೆಲುವಿನೊಂದಿಗೆ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.
ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಸಿಂಧು ತನ್ನ ದೇಶದವರೇ ಆದ ಆರುಂಧತಿ ಪಂತವಾನೆ ಅವರನ್ನು 21-17, 21-6 ಗೇಮ್ಗಳಿಂದ ಕೆಡಹಿದರೆ ಸೈನಾ ಅವರು ಚೈನೀಸ್ ತೈಪೆಯ ಚಿಯಾ ಹಸಿನ್ ಲೀ ಅವರನ್ನು 21-10, 21-17 ಗೇಮ್ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಸಿಂಧು ಶ್ರೇಯಾಂಕರಹಿತ ಆಟಗಾರ್ತಿ ಜಪಾನಿನ ಸಯೀನಾ ಕಾವಕಾಮಿ ಅವರನ್ನು ಎದುರಿಸಲಿದ್ದರೆ ಸೈನಾ ಥಾçಲಂಡಿನ ಪೋರ್ನ್ಪಾವೀ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ.
ಇದೇ ವೇಳೆ ಪುರುಷರ ಸಿಂಗಲ್ಸ್ನಲ್ಲಿ 2015ರ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಮೊದಲ ಗೇಮ್ನಲ್ಲಿ 1-8 ಹಿನ್ನಡೆ ಅನುಭವಿಸಿದ್ದರೂ ಚೀನದ ಝಾವೊ ಜನ್ಪೆಂಗ್ ಅವರನ್ನು 21-19, 21-16 ಗೇಮ್ಗಳಿಂದ ಸೋಲಿಸಲು ಯಶಸ್ವಿಯಾದರು. ಅವರು ಮುಂದಿನ ಸುತ್ತಿನಲ್ಲಿ ಒಲಿಂಪಿಕ್ ಕಂಚು ವಿಜೇತ ವಿಕ್ಟರ್ ಆ್ಯಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಅಜಯ್ ಜಯರಾಮನ್ ಕಠಿನ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ