ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಸೈನಾ, ಪ್ರಣಯ್ ಗೆಲುವಿನ ಆರಂಭ
Team Udayavani, Jan 13, 2022, 5:20 AM IST
ಹೊಸದಿಲ್ಲಿ: “ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ಸೈನಾ ನೆಹ್ವಾಲ್, ಪ್ರಣಯ್, ಲಕ್ಷ್ಯ ಸೇನ್ ದ್ವಿತೀಯ ಸುತ್ತು ತಲುಪಿದ್ದಾರೆ.
ಜೆಕ್ ಗಣರಾಜ್ಯದ ಎದುರಾಳಿ ತೆರೆಝಾ ಸ್ವಬಿಕೋವಾ ದ್ವಿತೀಯ ಗೇಮ್ ವೇಳೆ ಗಾಯಾಳಾಗಿ ಪಂದ್ಯ ತ್ಯಜಿಸಿದ ಕಾರಣ ಸೈನಾಗೆ ಮುನ್ನಡೆ ಲಭಿಸಿತು. ಆಗ ಸೈನಾ 22-20, 1-0 ಮುನ್ನಡೆಯಲ್ಲಿದ್ದರು.
ಸೈನಾ ದೀರ್ಘ ಕಾಲದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಆಡಲಿಳಿದಿದ್ದರು. ಇವರ ಮುಂದಿನ ಎದುರಾಳಿ ಭಾರತದವರೇ ಆದ ಮಾಳವಿಕಾ ಬನ್ಸೋಡ್. ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಆತಿಥೇಯ ನಾಡಿನ ಸಮಿಯಾ ಇಮಾದ್ ಫಾರೂಖಿ ಅವರನ್ನು 21-18, 21-9ರಿಂದ ಹಿಮ್ಮೆಟ್ಟಿಸಿದರು.
ಲಕ್ಷ್ಯ, ಪ್ರಣಯ್ ಮುನ್ನಡೆ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್. ಪ್ರಣಯ್ ಸ್ಪೇನ್ನ ಪಾಬ್ಲೊ ಅಬಿಯನ್ ಅವರನ್ನು 21-14, 21-7 ಅಂತರದಿಂದ ಹಿಮ್ಮೆಟಿಸಿದರು. ಲಕ್ಷ್ಯಸೇನ್ ಈಜಿಪ್ಟ್ ನ ಅದಾಮ್ ಹತೇಮ್ ಎಲ್ಗಮಲ್ ಅವರನ್ನು 21-15, 21-7ರಿಂದ ಮಣಿಸಿದರು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ