ಭಾರತ-ಪಾಕಿಸ್ಥಾನ ಡೇವಿಸ್‌ ಕಪ್‌ ಟೆನಿಸ್‌

ಸ್ಥಳಾಂತರಿಸಲು ಒಪ್ಪದ ಐಟಿಎಫ್

Team Udayavani, Aug 15, 2019, 5:39 AM IST

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯನ್ನು ಮುಂದೂಡಿ ಅಥವಾ ಸ್ಥಳಾಂತರಿಸಿ ಎಂದು ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ (ಎಐಟಿಎ) ಮಾಡಿದ ಮನವಿಯನ್ನು ವಿಶ್ವ ಟೆನಿಸ್‌ ಫೆಡರೇಶನ್‌ (ಐಟಿಎಫ್)ತಿರಸ್ಕರಿಸಿದೆ.

ಏಶ್ಯ-ಓಶಿಯಾನ ವಲಯ-1 ವಿಭಾಗದ ಈ ಪಂದ್ಯಾವಳಿ ಸೆ. 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದೆ. ಆದರೆ ಕಾಶ್ಮೀರ ಬೆಳವಣಿಗೆ ಬಳಿಕ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಹದಗೆಟ್ಟಿದ್ದು, ಇಸ್ಲಾಮಾಬಾದ್‌ನಲ್ಲಿ ಆಡುವುದು ಸುರಕ್ಷಿತವಲ್ಲ ಎಂಬುದು ಎಐಟಿಎ ಆತಂಕಕ್ಕೆ ಕಾರಣ. ಈ ಪರಿಸ್ಥಿತಿಯನ್ನು ಗಮನಿಸಿ ಕೂಟವನ್ನು ಮುಂದೂಡುವಂತೆ ಅಥವಾ ಸ್ಥಳಾಂತರಿಸುವಂತೆ ಸೂಚಿಸಿತ್ತು. ಇದು ಐಟಿಎಫ್ ಅಸಾಧ್ಯವೆಂದು ಸ್ಪಷ್ಟಪಡಿಸಿದೆ.

ಇನ್ನೂ ವೀಸಾ ಸುದ್ದಿ ಇಲ್ಲ!
ಈ ನಡುವೆ ಭಾರತೀಯ ಡೇವಿಸ್‌ ಕಪ್‌ ತಂಡಕ್ಕೆ ಪಾಕಿಸ್ಥಾನದಿಂದ ವೀಸಾ ಲಭಿಸದಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಜು. 23ರಂದೇ ಭಾರತದಿಂದ ವೀಸಾ ಪತ್ರ ತಲುಪಿದರೂ ಪಾಕ್‌ ಇನ್ನೂ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ