ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ : ದ್ವಿತೀಯ ಸ್ಥಾನ ಕಾಯ್ದುಕೊಂಡ ಭಾರತ
Team Udayavani, Dec 30, 2020, 11:05 PM IST
ದುಬಾೖ: ಮೆಲ್ಬರ್ನ್ ಪಂದ್ಯ ಗೆದ್ದ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋತರೂ ಆಸ್ಟ್ರೇಲಿಯ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಇನ್ನೊಂದೆಡೆ ಪಾಕಿಸ್ಥಾನ ವಿರುದ್ಧ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ತೃತೀಯ ಸ್ಥಾನದಲ್ಲೇ ಉಳಿದಿದೆ. ಗೆಲುವಿನ ಪ್ರತಿಶತ ಲೆಕ್ಕಾಚಾರದಂತೆ (ಪಿಸಿಟಿ) ತಂಡಗಳ ಸ್ಥಾನವನ್ನು ನಿರ್ಧರಿಸಲಾಗುತ್ತಿದೆ. ಇದರಂತೆ ಆಸ್ಟ್ರೇಲಿಯ 76.6, ಭಾರತ 72.2 ಮತ್ತು ನ್ಯೂಜಿಲ್ಯಾಂಡ್ 66.7 ಪ್ರತಿಶತ ಸಾಧನೆ ದಾಖಲಿಸಿವೆ.
ಆದರೆ ಗೆಲುವಿನ ಅಂಕಗಳ ಲೆಕ್ಕಾಚಾರದಲ್ಲಿ ಭಾರತವೇ ಮುಂದಿದೆ (390). ನ್ಯೂಜಿಲ್ಯಾಂಡ್ ದ್ವಿತೀಯ (360) ಮತ್ತು ಆಸ್ಟ್ರೇಲಿಯ ತೃತೀಯ (322) ಸ್ಥಾನಿಯಾಗಿದೆ. ಆದರೆ ಕೊರೊನಾದಿಂದಾಗಿ ರದ್ದುಗೊಂಡ ಸರಣಿಗಳ ಪ್ರತಿಶತ ಲೆಕ್ಕಾಚಾರವನ್ನು ಪರಿಗಣಿಸುವ ಮೂಲಕ ಐಸಿಸಿ, ಈ ಟೆಸ್ಟ್ ಚಾಂಪಿಯನ್ಶಿಪ್ನ ಮಾನದಂಡವನ್ನು ಬದಲಾಯಿಸಿತ್ತು.