ಅಕ್ಷಯ್‌ಗೆ ಅವಕಾಶ ನೀಡಿ: ಹರ್ಭಜನ್‌

Team Udayavani, Sep 9, 2019, 5:58 AM IST

ಮುಂಬಯಿ: ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಆಫ್ಸ್ಪಿನ್ನರ್‌ ಅಕ್ಷಯ್‌ ವಖಾರೆ ಅವರಿಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಬೇಕೆಂದು ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.

“ಕಳೆದ ಅನೇಕ ವರ್ಷಗಳಿಂದ ಪ್ರಥಮ ದರ್ಜೆ ಕ್ರಿಟ್‌ನಲ್ಲಿ ಅಕ್ಷಯ್‌ ವಖಾರೆ ಸ್ಥಿರವಾದ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಇವರು ಪ್ರತಿನಿಧಿಸುವ ವಿದರ್ಭ ತಂಡ ಎರಡು ಬಾರಿ ರಣಜಿ ಟ್ರೋಫಿ ಚಾಂಪಿಯನ್‌ ಆಗಿದೆ. ಶನಿವಾರ ಭಾರತ ಗ್ರೀನ್‌ ವಿರುದ್ಧ 13 ರನ್‌ ನೀಡಿ 5 ವಿಕೆಟ್‌ ಕಿತ್ತದ್ದು ಅವರ ಅದ್ಭುತ ಪ್ರದರ್ಶನ’ ಎಂದು ಭಜ್ಜಿ ಯುವ ಆಫ್ ಸ್ಪಿನ್ನರ್‌ನನ್ನು ಪ್ರಶಂಸಿಸಿದರು.

ಬೆಂಗಳೂರಿನ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಶನಿವಾರ ಮುಕ್ತಾಯಗೊಂಡ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಅಕ್ಷಯ್‌ ವಖಾರೆ, ಇಂಡಿಯಾ ಗ್ರೀನ್‌ ವಿರುದ್ಧ ಘಾತಕ ಬೌಲಿಂಗ್‌ ನಡೆಸಿ ಇಂಡಿಯಾ ರೆಡ್‌ ತಂಡದ ಇನ್ನಿಂಗ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ