ಇಂದು ಭಾರತ ಟೆಸ್ಟ್ ತಂಡ ಪ್ರಕಟ
Team Udayavani, Jan 19, 2021, 6:30 AM IST
ಹೊಸದಿಲ್ಲಿ: ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸವನ್ನು ಮಂಗಳವಾರ ಮುಗಿಸಲಿರುವ ಭಾರತ, ಇನ್ನು ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಮಂಗಳವಾರ ತಂಡವನ್ನು ಪ್ರಕಟಗೊಳ್ಳಲಿದೆ.
ನಾಯಕ ವಿರಾಟ್ ಕೊಹ್ಲಿ, ವೇಗಿ ಇಶಾಂತ್ ಶರ್ಮ ತಂಡಕ್ಕೆ ಮರಳಲಿದ್ದಾರೆ. ಆದರೆ ಜಸ್‌ಪ್ರೀತ್ ಬುಮ್ರಾ, ಆರ್. ಅಶ್ವಿನ್ ಅವರ ಫಿಟ್‌ನೆಸ್ ನೋಡಿಕೊಂಡು ಸೂಕ್ತ ನಿರ್ಧಾರಕ್ಕೆ ಬರಲು ಆಯ್ಕೆ ಸಮಿತಿ ನಿರ್ಧರಿಸಿದೆ. ಗಾಯಾಳಾಗಿರುವ ಮೊಹಮ್ಮದ್ ಶಮಿ, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ಆಯ್ಕೆಗೆ ಲಭ್ಯರಾಗುವುದಿಲ್ಲ. ಇದು ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ ಆರಿಸಲಿರುವ ಮೊದಲ ತಂಡವೆಂಬುದು ವಿಶೇಷ.