ಭಾರತ ತಂಡದ ಅಯರ್ಲ್ಯಾಂಡ್ ಪ್ರವಾಸ
Team Udayavani, Jan 11, 2018, 10:40 AM IST
ಹೊಸದಿಲ್ಲಿ: ಇಂಗ್ಲೆಂಡಿಗೆ ಪ್ರವಾಸಗೈಯುವ ಮೊದಲು ಭಾರತೀಯ ಕ್ರಿಕೆಟ್ ತಂಡವು ಎರಡು ಟ್ವೆಂಟಿ20 ಪಂದ್ಯಗಳನ್ನಾಡಲು ಅಯರ್ಲ್ಯಾಂಡ್ಗೆ ಪ್ರಯಾಣಿಸಲಿದೆ. 2007ರ ಬಳಿಕ ಇದು ಅಯರ್ಲ್ಯಾಂಡಿಗೆ ಭಾರತದ ಮೊದಲ ಭೇಟಿಯಾಗಲಿದೆ.
ಟ್ವೆಂಟಿ20 ಪಂದ್ಯಗಳು ಜೂ. 27 ಮತ್ತು 29ರಂದು ಡಬ್ಲಿನ್ನಲ್ಲಿ ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಿಳಿಸಿದೆ. ಭಾರತ ಈ ಹಿಂದೆ 2007ರಲ್ಲಿ ಅಯರ್ಲ್ಯಾಂಡಿಗೆ ಪ್ರಯಾಣಿಸಿತ್ತು. ಆಗ ತಂಡವು ಬೆಲ್ಫಾಸ್ಟ್ ನಲ್ಲಿ ಒಂದು ಏಕದಿನ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಭಾರತವು ಡಕ್ವರ್ತ್ ಲೂಯಿಸ್ ನಿಯಮದಡಿ 9 ವಿಕೆಟ್ಗಳಿಂದ ಜಯ ಸಾಧಿಸಿತ್ತು.
ಟ್ವೆಂಟಿ20 ಮಾದರಿಯಲ್ಲಿ ಭಾರತವು ಒಮ್ಮೆ ಮಾತ್ರ ಅಯರ್ಲ್ಯಾಂಡ್ ಜತೆ ಆಡಿತ್ತು. 2009ರ ಟ್ವೆಂಟಿ20 ವಿಶ್ವಕಪ್ ವೇಳೆ ನಾಟಿಂಗಂನಲ್ಲಿ ಉಭಯ ತಂಡಗಳು ಮುಖಾಮುಖೀಯಾಗಿದ್ದವು.
ಅಯರ್ಲ್ಯಾಂಡ್ನಲ್ಲಿ ಎರಡು ಟ್ವೆಂಟಿ20 ಪಂದ್ಯ ಆಡಿದ ಬಳಿಕ ಭಾರತವು ದೀರ್ಘ ಸರಣಿಗಾಗಿ ಇಂಗ್ಲೆಂಡಿಗೆ ಪ್ರಯಾಣಿಸಲಿದೆ. ಈ ಪ್ರವಾಸ ಜುಲೈಯಿಂದ ಸೆಪ್ಟಂಬರ್ವರೆಗೆ ಸಾಗಲಿದೆ. ಈ ವೇಳೆ ತಂಡವು ಐದು ಟೆಸ್ಟ್, ಮೂರು ಏಕದಿನ ಮತ್ತು ಅಷ್ಟೇ ಟ್ವೆಂಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ