ದಕ್ಷಿಣ ಆಫ್ರಿಕಾ ಏಕದಿನ ತಂಡದಲ್ಲಿ ಮಾರ್ಕೊ ಜಾನ್ಸೆನ್
Team Udayavani, Jan 3, 2022, 5:00 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಜಾನ್ಸೆನ್ ಮೊದಲ ಸಲ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪ್ರವಾಸಿ ಭಾರತದೆದುರಿನ 3 ಪಂದ್ಯಗಳಿಗಾಗಿ ಆರಿಸಲಾದ ತಂಡದಲ್ಲಿ ಜಾನ್ಸೆನ್ಗೆ ಸ್ಥಾನ ಲಭಿಸಿದೆ. ಇತ್ತೀಚೆಗೆ ಟೆಸ್ಟ್ ವಿದಾಯ ಘೋಷಿಸಿದ ಕ್ವಿಂಟನ್ ಡಿ ಕಾಕ್ ತಂಡದಲ್ಲಿದ್ದಾರೆ. ಆದರೆ ಅನುಭವಿ ವೇಗಿ ಅನ್ರಿಚ್ ನೋರ್ಜೆ ಗಾಯದ ಕಾರಣ ಅವಕಾಶ ಪಡೆದಿಲ್ಲ. ತಂಡವನ್ನು ಟೆಂಬ ಬವುಮ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಬೊಂಬಾಟ್ ಆಟ
ದಕ್ಷಿಣ ಆಫ್ರಿಕಾ ತಂಡ: ಟೆಂಬ ಬವುಮ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜ, ಮಾರ್ಕೊ ಜಾನ್ಸೆನ್, ಜಾನೆಮನ್ ಮಲಾನ್, ಸಿಸಾಂಡ ಮಗಾಲ, ಐಡನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ವೇಯ್ನ ಪಾರ್ನೆಲ್, ಆ್ಯಂಡಿಲ್ ಫೆಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೇಜ್ ರಸ್ಸಿ ವಾನ್ ಡರ್ ಡುಸೆನ್, ಕೈಲ್ ವೆರೇಯ್ನ.