ಏಕದಿನ: ಕ್ಲೀನ್‌ ಸ್ವೀಪ್‌ ಕಂಟಕದಿಂದ ಪಾರಾದೀತೇ ಭಾರತ?

Team Udayavani, Dec 1, 2020, 10:55 PM IST

ಏಕದಿನ: ಕ್ಲೀನ್‌ ಸ್ವೀಪ್‌ ಕಂಟಕದಿಂದ ಪಾರಾದೀತೇ ಭಾರತ?

ಕ್ಯಾನ್‌ಬೆರಾ: ಸಿಡ್ನಿಯ ಎರಡೂ ಪಂದ್ಯಗಳನ್ನು ಕಳೆದುಕೊಂಡು ಸರಣಿ ಯನ್ನು ಆಸ್ಟ್ರೇಲಿಯಕ್ಕೆ ಒಪ್ಪಿಸಿದ ಭಾರತ ತಂಡಕ್ಕೀಗ ಕ್ಲೀನ್‌ ಸ್ವೀಪ್‌ ಭೀತಿ ಎದುರಾಗಿದೆ. 3ನೇ ಹಾಗೂ ಅಂತಿಮ ಪಂದ್ಯ ಬುಧವಾರ ಕ್ಯಾನ್‌ಬೆರಾದಲ್ಲಿ ನಡೆಯಲಿದ್ದು, ವೈಟ್‌ವಾಶ್‌ ಅವಮಾನದಿಂದ ಪಾರಾಗಲು ಹಾಗೂ ಒಂದಿಷ್ಟು ಪ್ರತಿಷ್ಠೆಯನ್ನು ಗಳಿಸಲು ಇಲ್ಲಿ ಗೆಲ್ಲಲೇಬೇಕಾದ ಅಗತ್ಯವಿದೆ.

ಕ್ಯಾನ್‌ಬೆರಾ ಪಂದ್ಯವನ್ನೂ ಕಳೆದು ಕೊಂಡರೆ ಟೀಮ್‌ ಇಂಡಿಯಾ ಸತತ 2 ಏಕದಿನ ಸರಣಿಗಳಲ್ಲಿ ಕ್ಲೀನ್‌ ಸ್ವೀಪ್‌ ಸಂಕಟಕ್ಕೆ ತುತ್ತಾದಂತಾಗುತ್ತದೆ. ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡಿಗೆ ಪ್ರವಾಸಗೈದಿದ್ದ ಭಾರತ ಅಲ್ಲಿಯೂ 3-0 ಅಂತರದ ಸೋಲಿಗೆ ಗುರಿಯಾಗಿತ್ತು. ಕ್ಯಾನ್‌ಬೆರಾದಲ್ಲಿ ಈ ಮುಖಭಂಗ ತಪ್ಪಬೇಕಿದೆ.

ಬೌಲರ್ ಲೆಕ್ಕ ಭರ್ತಿಗೆ!
ಸಿಡ್ನಿಯ ಎರಡೂ ಪಂದ್ಯಗಳು ಬೃಹತ್‌ ಮೊತ್ತಕ್ಕೆ ಸಾಕ್ಷಿಯಾಗಿದ್ದವು. ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ತಂಡಗಳ ಮೊತ್ತ ಮುನ್ನೂರರ ಗಡಿ ದಾಟಿದೆಯೆಂದರೆ ಅಲ್ಲಿ ಬೌಲರ್ ಲೆಕ್ಕದ ಭರ್ತಿಗೆಂದೇ ಅರ್ಥ. ಇದರ ಇನ್ನೊಂದು ಅರ್ಥವೆಂದರೆ, ಆಸ್ಟ್ರೇಲಿಯದ ಪಿಚ್‌ಗಳನ್ನು ಭಾರತದ ಬ್ಯಾಟಿಂಗ್‌ ಟ್ರ್ಯಾಕ್‌ಗಳಂತೆ ಬದಲಾಯಿಸಲಾಗಿದೆ ಎಂಬುದು. ಇವು ಸಾಂಪ್ರದಾಯಿಕ ಆಸೀಸ್‌ ಟ್ರ್ಯಾಕ್‌ಗಳಲ್ಲವೇ ಅಲ್ಲ. ಭಾರತದಲ್ಲಿ ಸ್ಪಿನ್‌ ಆದರೂ ನಡೆಯುತ್ತದೆ, ಆದರೆ ಕಾಂಗರೂ ನಾಡಿನಲ್ಲಿ ಯಾವ ಬೌಲಿಂಗ್‌ ಕೂಡ ನಡೆಯುತ್ತಿಲ್ಲ. ಇನ್ನು ಕ್ಯಾನ್‌ಬೆರಾ ಹೇಗೋ?!

ವಿರಾಟ್‌ ಕೊಹ್ಲಿಯ ದುರದೃಷ್ಟವೆಂದರೆ, ಅವರು ಪಂದ್ಯ ಗೆಲ್ಲುವುದಿರಲಿ, ಟಾಸ್‌ ಕೂಡ ಗೆಲ್ಲುತ್ತಿಲ್ಲ. ಎರಡರಲ್ಲೂ ಟಾಸ್‌ ಗೆದ್ದ ಫಿಂಚ್‌ ಹಿಂದೆ-ಮುಂದೆ ನೋಡದೆ ಬ್ಯಾಟಿಂಗ್‌ ಆಯ್ದುಕೊಂಡು ಭಾರೀ ಮೊತ್ತದ ಸವಾಲೊಡ್ಡಿದರು. ಭಾರತ ವೇನೂ ಕಳಪೆ ಬ್ಯಾಟಿಂಗ್‌ ನಡೆಸಲಿಲ್ಲ. ಈ ಮೊತ್ತವನ್ನು ಸಮೀಪಿಸಿ ವೀರೋಚಿತ ವಾಗಿಯೇ ಸೋತಿತು, ಆ ಮಾತು ಬೇರೆ.

ಕ್ಯಾನ್‌ಬೆರಾದಲ್ಲಾದರೂ ಭಾರತಕ್ಕೆ ಮೊದಲ ಬ್ಯಾಟಿಂಗ್‌ ಅವಕಾಶ ದೊರೆತರೆ ಅದೆಷ್ಟು ದೊಡ್ಡ ಮೊತ್ತ ಪೇರಿಸೀತು, ಆಸೀಸ್‌ ಇದನ್ನು ಹೇಗೆ ಬೆನ್ನಟ್ಟಿàತು ಎಂಬುದನ್ನು ನೋಡಬಹುದಿತ್ತು.

ಸೈನಿ ಅನುಮಾನ
ಸಿಡ್ನಿಯಲ್ಲಿ ಬೌಲಿಂಗ್‌ ಮ್ಯಾಜಿಕ್‌ ನಡೆಯದು ಎಂಬುದು ನಿಜವಾದರೂ ಭಾರತ ದ್ವಿತೀಯ ಪಂದ್ಯದಲ್ಲೂ ಅದೇ ಬೌಲಿಂಗ್‌ ಕಾಂಬಿನೇಶನ್‌ ನೆಚ್ಚಿಕೊಂಡ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಮುಖ್ಯವಾಗಿ, ಹಾಫ್ ಫಿಟ್‌ ನವದೀಪ್‌ ಸೈನಿ ಅವರನ್ನು ಆಡಿಸುವ ಅನಿವಾರ್ಯತೆ ಏನಿತ್ತು ಎಂಬುದು ಎಲ್ಲರ ಪ್ರಶ್ನೆ.

ರವಿವಾರ ಸೈನಿಯ 10 ಓವರ್‌ ಕೋಟಾವನ್ನು ಮುಗಿಸಲು ಪಾಂಡ್ಯ ಮತ್ತು ಅಗರ್ವಾಲ್‌ ಬರಬೇಕಾಯಿತು. ಶಾರ್ದೂಲ್‌ ಠಾಕೂರ್‌ ಅಥವಾ ಸೈನಿಗಾಗಿ ಬ್ಯಾಕ್‌ಅಪ್‌ ಬೌಲರ್‌ ಆಗಿ ಸೇರ್ಪಡೆಗೊಂಡ “ಯಾರ್ಕರ್‌ ಸೆನ್ಸೇಶನ್‌’ ತಂಗರಸು ನಟರಾಜನ್‌ ಅವರನ್ನು ಕ್ಯಾನ್‌ಬೆರಾದಲ್ಲಿ ಆಡಿಸುವುದು ಜಾಣ ನಿರ್ಧಾರವಾಗಲಿದೆ.

ಹಾಗೆಯೇ ದುಬಾರಿ ಚಹಲ್‌ ಬದಲು ಚೈನಾಮನ್‌ ಕುಲದೀಪ್‌ ಯಾದವ್‌ ಅವರಿಗೊಂದು ಚಾನ್ಸ್‌ ನೀಡಬೇಕಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ವೈಫ‌ಲ್ಯ ಅಚ್ಚರಿಯಲ್ಲ, ದಿಗಿಲು ಹುಟ್ಟಿಸುತ್ತದೆ. ಸ್ಟ್ರೈಕ್‌ ಬೌಲರ್‌ಗಳ ವೈಫ‌ಲ್ಯದಿಂದಾಗಿಯೇ ಎರಡೂ ಪಂದ್ಯಗಳಲ್ಲಿ ಆಸೀಸ್‌ ಆರಂಭಿಕರು ಮೊದಲ ವಿಕೆಟಿಗೆ ಶತಕದ ಜತೆಯಾಟ ದಾಖಲಿಸಿ ಭರ್ಜರಿ ಅಡಿಪಾಯ ನಿರ್ಮಿ ಸಿದ್ದನ್ನು ಮರೆಯುವಂತಿಲ್ಲ. ಇದರಲ್ಲಿ ಫೀಲ್ಡರ್‌ಗಳ ಪಾತ್ರ ಇರುವುದನ್ನು ಒಪ್ಪ ಬೇಕಾಗುತ್ತದೆ.

ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ, ಇದರ ಅಗತ್ಯವೂ ಇಲ್ಲ. ಧವನ್‌-ಅಗರ್ವಾಲ್‌ ಜೋಡಿ 15 ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಮೊತ್ತವನ್ನು ನೂರರ ಗಡಿ ದಾಟಿಸುವುದು ಮೊದಲ ಟಾರ್ಗೆಟ್‌ ಆಗಬೇಕಿದೆ.

ವಾರ್ನರ್‌, ಕಮಿನ್ಸ್‌ ಗೈರು
ಆಸ್ಟ್ರೇಲಿಯದ ಇಬ್ಬರು ಪ್ರಮುಖ ಆಟಗಾರರಾದ ಡೇವಿಡ್‌ ವಾರ್ನರ್‌ ಮತ್ತು ಪ್ಯಾಟ್‌ ಕಮಿನ್ಸ್‌ ಈ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಇದರಿಂದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಆತಿಥೇಯರಿಗೆ ಹಿನ್ನಡೆ ಆಗಲಿದೆ ಎಂಬುದೊಂದು ಲೆಕ್ಕಾಚಾರ. ಆದರೆ ಈಗಾಗಲೇ ಸರಣಿ ಗೆದ್ದಿರುವ ಆಸೀಸ್‌ ಇಂಥ ಆತಂಕಕ್ಕೆ ಒಳಗಾಗುವ ತಂಡವಲ್ಲ. ಆತಿಥೇಯರ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿದೆ. ಸ್ಟೀವನ್‌ ಸ್ಮಿತ್‌ ಅವರ ಸಿಡಿಲಬ್ಬರದ ಅವಳಿ ಶತಕ ಕಾಂಗರೂ ಪಾಲಿಗೆ ಬೋನಸ್‌ ಎಂದೇ ಹೇಳಬೇಕು. ಈ ವಿಕೆಟ್‌ ಬೇಗ ಉರುಳಿದರೆ ಭಾರತಕ್ಕೆ ಅವಕಾಶ ಹೆಚ್ಚು.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಆಸ್ಟ್ರೇಲಿಯ ಬುಧವಾರದ ಪಂದ್ಯವನ್ನೂ ಗೆದ್ದರೆ ಮೊದಲ ಸಲ ಭಾರತವನ್ನು ವೈಟ್‌ವಾಶ್‌ ಮಾಡಿದಂತಾಗುತ್ತದೆ.
– ಇತ್ತಂಡಗಳ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಒಮ್ಮೆ ಮಾತ್ರ ಯಾವುದೇ ಪಂದ್ಯವನ್ನು ಗೆದ್ದಿರಲಿಲ್ಲ. ಅದು 1984ರ ತವರಿನ ಸರಣಿಯಾಗಿತ್ತು. 5 ಪಂದ್ಯಗಳ ಆ ಮುಖಾಮುಖೀಯಲ್ಲಿ ಆಸ್ಟ್ರೇಲಿಯ ಮೂರರಲ್ಲಿ ಜಯ ಸಾಧಿಸಿತ್ತು. 2 ಪಂದ್ಯ ರದ್ದುಗೊಂಡಿತ್ತು.
– ಕ್ಯಾನ್‌ಬೆರಾದ “ಮನುಕಾ ಓವಲ್‌’ನಲ್ಲಿ ಆಡಿದ ಎಲ್ಲ 6 ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಆಸ್ಟ್ರೇಲಿಯ ಜಯ ಸಾಧಿಸಿದೆ. ಇದರಲ್ಲಿ 4 ಏಕದಿನ ಪಂದ್ಯಗಳೂ ಸೇರಿವೆ.
– ಭಾರತ ಕ್ಯಾನ್‌ಬೆರಾದಲ್ಲಿ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿದೆ. 2008ರಲ್ಲಿ ಶ್ರೀಲಂಕಾ ಎದುರು 8 ವಿಕೆಟ್‌ಗಳಿಂದ, 2016ರಲ್ಲಿ ಆಸ್ಟ್ರೇಲಿಯ ವಿರುದ್ಧ 25 ರನ್‌ ಅಂತರದಿಂದ ಎಡವಿದೆ.
– ಆಸ್ಟ್ರೇಲಿಯ ವಿರುದ್ಧದ ಜ. 19ರ ಏಕದಿನ ಪಂದ್ಯವನ್ನು ಜಯಿಸಿದ ಬಳಿಕ ಆಡಿದ ಎಲ್ಲ 5 ಏಕದಿನ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿದೆ. ನ್ಯೂಜಿಲ್ಯಾಂಡ್‌ ವಿರುದ್ಧ 3, ಆಸ್ಟ್ರೇಲಿಯ ವಿರುದ್ಧ 2 ಸೋಲು ಎದುರಾಗಿದೆ. 2007ರ ಬಳಿಕ ಭಾರತ ಸತತ ಐದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋತದ್ದಿಲ್ಲ.

ಸಂಭಾವ್ಯ ತಂಡಗಳು
ಭಾರತ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಶಾದೂìಲ್‌ ಠಾಕೂರ್‌/ಟಿ. ನಟರಾಜನ್‌, ಮೊಹಮ್ಮದ್‌ ಶಮಿ, ಯಜುವೇಂದ್ರ ಚಹಲ್‌/ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಮ್ಯಾಥ್ಯೂ ವೇಡ್‌/ಕ್ಯಾಮರೂನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಸಸ್‌ ಹೆನ್ರಿಕ್ಸ್‌, ಅಲೆಕ್ಸ್‌ ಕ್ಯಾರಿ, ಸೀನ್‌ ಅಬೋಟ್‌/ಆ್ಯಂಡ್ರೂ ಟೈ, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

ಆರಂಭ: ಬೆಳಗ್ಗೆ 9.10 , ಪ್ರಸಾರ: ಸೋನಿ ಟೆನ್‌, ಸೋನಿ ಸಿಕ್ಸ್‌

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.