ಇಂದಿನಿಂದ ಭಾರತ-ಆಸ್ಟ್ರೇಲಿಯ ಮಹಿಳಾ ಟಿ20
Team Udayavani, Dec 9, 2022, 6:45 AM IST
ನವಿ ಮುಂಬೈ: ಇನ್ನೆರಡು ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವನಿತೆಯರ ಟಿ20 ವಿಶ್ವಕಪ್ ಕೂಟವು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಶುಕ್ರವಾರದಿಂದ ಭಾರತವು ಪ್ರವಾಸಿ ಆಸ್ಟ್ರೇಲಿಯ ವನಿತಾ ತಂಡದ ಜತೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಶುಕ್ರವಾರ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಈ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಉತ್ತಮ ನಿರ್ವಹಣೆ ನೀಡುವ ಉತ್ಸಾಹದಲ್ಲಿದೆ. ಆದರೆ ಮೂರು ದಿನಗಳ ಹಿಂದೆ ತಂಡದ ಮುಖ್ಯ ಕೋಚ್ ರಮೇವ್ ಪೊವಾರ್ ಅವರನ್ನು ಹಠಾತ್ ವಜಾ ಮಾಡಿರುವುದು ಆಟಗಾರ್ತಿಯರಿಗೆ ತೀವ್ರ ನೋವಾಗಿದೆ. ಇದೀಗ ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ಆಟಗಾರ್ತಿಯರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಭಾರತವು ಬಲಿಷ್ಠ ಆಸ್ಟೇಲಿಯ ವಿರುದ್ಧ ಕೆಲವು ಪಂದ್ಯಗಳಲ್ಲಿ ಸ್ಪರ್ಧಿಸಿದ್ದರೂ ಗೆಲುವು ದಾಖಲಿಸಲು ವಿಫಲವಾಗಿತ್ತು. ಕಾಮನ್‌ವೆಲ್ತ್ ಗೇಮ್ಸ್‌ನ ಫೈನಲ್‌ನಲ್ಲಿ ಭಾರತವು ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು.
ಟಿ20 ಸರಣಿ ವೇಳಾಪಟ್ಟಿ:
ದಿನ / ಸ್ಥಳ
ಡಿ. 9 ಡಿ.ವೈ. ಪಾಟೀಲ್
ಡಿ. 11 ಡಿ.ವೈ. ಪಾಟೀಲ್
ಡಿ. 14 ಬ್ರಬೋರ್ನ್
ಡಿ. 17 ಬ್ರಬೋರ್ನ್
ಡಿ. 20 ಬ್ರಬೋರ್ನ್