2ನೇ ಟೆಸ್ಟ್:ಭಾರತಕ್ಕೆ ಆರಂಭಿಕ ಆಘಾತ ನೀಡಿದ ಟಾಸ್ ಗೆದ್ದ ಇಂಗ್ಲೆಂಡ್
Team Udayavani, Aug 10, 2018, 4:32 PM IST
ಲಂಡನ್: ಇಲ್ಲಿನ ಲಾರ್ಡ್ಸ್ ಅಂಗಳದಲ್ಲಿ ಶುಕ್ರವಾರ ಆರಂಭವಾಗಿರುವ 5 ಪಂದ್ಯ ಗಳ ಸರಣಿಯ 2 ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಟಾಸ್ ಗೆದ್ದು ಭಾರತಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಫೀಲ್ಡಿಂಗಿಗಿಳಿದ ಇಂಗ್ಲೆಂಡ್ ಮೊದಲ ಓವರ್ನಲ್ಲೇ ಮುರಳಿ ವಿಜಯ್ ಅವರನ್ನು ಪೆವಿಲಿಯನ್ಗೆ ಕಳುಹಿಸಿತು. ಅವರು ಶೂನ್ಯಕ್ಕೆ ನಿರ್ಗಮಿಸಿದರು. 6 ನೇ ಓವರ್ನಲ್ಲಿ ಕೆ.ಎಲ್.ರಾಹುಲ್ ಅವರ ವಿಕೆಟ್ ಕಬಳಿಸುವ ಮೂಲಕ ಇನ್ನೊಂದು ಆಘಾತ ನೀಡಿತು. ಎರಡೂ ವಿಕೆಟ್ಗಳನ್ನು ಆಂಡರ್ಸನ್ ಪಡೆದರು.
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಭಾರತ 2 ವಿಕೆಟ್ಗಳ ನಷ್ಟಕ್ಕೆ 11 ರನ್ಗಳಿಸಿದೆ. ನಾಯಕ ಕೊಹ್ಲಿ ಮತ್ತು ಪೂಜಾರ ಕ್ರೀಸ್ನಲ್ಲಿದ್ದಾರೆ.
ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿತ್ತು.