ಮಹಿಳಾ ಹಾಕಿ ವಿಶ್ವಕಪ್: ಭಾರತ-ಇಂಗ್ಲೆಂಡ್ ಡ್ರಾ
Team Udayavani, Jul 4, 2022, 12:04 AM IST
ಆ್ಯಮ್‌ಸ್ಟೆಲ್ವಿನ್ (ನೆದರ್ಲೆಂಡ್ಸ್): ಇಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತೀಯ ತಂಡ 1-1 ಗೋಲುಗಳಿಂದ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದೆ.
ಈ ಪಂದ್ಯದಲ್ಲಿ ಎರಡೂ ತಂಡಗಳು ಅವಕಾಶಗಳನ್ನು ವ್ಯರ್ಥ ಮಾಡಿಕೊಂಡವು. ಭಾರತದ ಪರ ವಂದನಾ ಕಟಾರಿಯ 28ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಇಂಗ್ಲೆಂಡ್ ಪರ 8ನೇ ನಿಮಿಷದಲ್ಲಿ ಪೆಟರ್ ಇಸಬೆಲ್ಲ ಫೀಲ್ಡ್ ಗೋಲು ಬಾರಿಸಿದ್ದರು.