2ನೇ ಟೆಸ್ಟ್‌: ಮೊದಲ ದಿನ ಭಾರತ,ಆಫ್ರಿಕಾ ಸರಿಸಮ ಸಮರ


Team Udayavani, Jan 14, 2018, 6:00 AM IST

AP1_13_2018_000109B.jpg

ಸೆಂಚುರಿಯನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್‌ ಪಂದ್ಯದ ಮೊದಲದಿನ ಉಭಯ ತಂಡಗಳು ಸಮಬಲದ ಆಟವನ್ನು ಪ್ರದರ್ಶಿಸಿವೆ. ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 6 ವಿಕೆಟ್‌ ಕಳೆದುಕೊಂಡು 269 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ಶನಿವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತ್ತು. ಆದರೆ ನಂತರದ ಹಂತದಲ್ಲಿ ಭಾರತೀಯ ಬೌಲರ್‌ಗಳು ಬಿಗುವಿನ ದಾಳಿಯನ್ನು ನಡೆಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಭದ್ರ ಅಡಿಪಾಯ:
ಮೊದಲನೇ ಟೆಸ್ಟ್‌ನ ಗೆಲುವಿನ ಉತ್ಸಾಹದಲ್ಲಿರುವ ದಕ್ಷಿಣ ಆಫ್ರಿಕಾಗೆ ಆರಂಭಿಕರಿಂದ ಭದ್ರ ಅಡಿಪಾಯ ದೊರೆಯಿತು. ಡೀನ್‌ ಎಲ್ಗರ್‌ ಮತ್ತು ಐಡಮ್‌ ಮಕ್ರìಮ್‌ ಜೋಡಿ ಮೊದಲ ವಿಕೆಟ್‌ಗೆ 85 ರನ್‌ ಬಾರಿಸಿದರು. ಈ ಹಂತದಲ್ಲಿ ಅಶ್ವಿ‌ನ್‌ ಎಸೆತದಲ್ಲಿ ಎಲ್ಗರ್‌(31 ರನ್‌) ವಿಕೆಟ್‌ ಕಳೆದುಕೊಂಡರು.

ಮಕ್ರìಮ್‌, ಆಮ್ಲ ಭರ್ಜರಿ ಆಟ:
2ನೇ ವಿಕೆಟ್‌ಗೆ ಜತೆಯಾದ ಮಕ್ರìಮ್‌ ಮತ್ತು ಹಾಶಿಮ್‌ ಆಮ್ಲ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ತಂಡದ ಮೊತ್ತವನ್ನು 148ಕ್ಕೆ ಏರಿಸಿದರು. 150 ಎಸೆತದಲ್ಲಿ 94 ರನ್‌ ಬಾರಿಸಿದ ಮಕ್ರìಮ್‌ ಸ್ಪಿನ್ನರ್‌ ಅಶ್ವಿ‌ನ್‌ ಎಸೆತದಲ್ಲಿ ಪಾರ್ಥಿವ್‌ ಪಟೇಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ನಂತರ ಬಂದ ಡಿವಿಲಿಯರ್ (20 ರನ್‌) ಹೆಚ್ಚುಹೊತ್ತು ನಿಲ್ಲಲಿಲ್ಲ. ಆಮ್ಲ 82 ರನ್‌ ಬಾರಿಸಿದಾಗ ಹಾರ್ದಿಕ್‌ ಪಾಂಡ್ಯ ಮಾಡಿದ ಆಕರ್ಷಕ ರನೌಟ್‌ಗೆ ಬಲಿಯಾದರು. ಆಮ್ಲ ಆಟದಲ್ಲಿ 14 ಬೌಂಡರಿ ಸೇರಿತ್ತು.

ಕೊನೆಯಲ್ಲಿ ಆಘಾತ:
ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ದಿನದ ಅಂತ್ಯದ ಸಮಯದಲ್ಲಿ ಭಾರತೀಯರು ಆಘಾತ ನೀಡುವಲ್ಲಿ ಯಶಸ್ವಿಯಾದರು. ಆಮ್ಲ ರನೌಟ್‌ಗೆ ಬಲಿಯಾದ ಮರುಕ್ಷಣದಲ್ಲಿಯೇ ಕ್ವಿಂಟನ್‌ ಡಿ ಕಾಕ್‌ ಅಶ್ವಿ‌ನ್‌ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್‌ ನೀಡಿದರು. ಕಾಕ್‌ ಮೊತ್ತ ಶೂನ್ಯ. ನಂತರ ಬಂದ ಫಿಲಾಂಡರ್‌ ಪಾಟೇಲ್‌, ಪಾಂಡ್ಯ ಮಾಡಿದ ರನೌಟ್‌ನಿಂದ ಪೆವಿಲಿಯನ್‌ ಸೇರಿದರು. ಹೀಗಾಗಿ ಈ ಹಂತದಲ್ಲಿ ಭಾರತೀಯ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಇಲ್ಲಿಯವರೆಗೂ ಆತಿಥೇಯರದ್ದೇ ಕಾರುಬಾರಾಗಿತ್ತು.

ಕ್ರೀಸ್‌ನಲ್ಲಿ ಪ್ಲೆಸಿಸ್‌, ಮಹಾರಾಜ್‌:
251 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾಗೆ ದಿನದ ಅಂತ್ಯದಲ್ಲಿ ಪ್ಲೆಸಿಸ್‌ ಮತ್ತು ಕೇಶವ್‌ ಮಹಾರಾಜ್‌ ಟಾನಿಕ್‌ ನೀಡಿದರು. ಪ್ಲೆಸಿಸ್‌ 77 ಎಸೆತದಲ್ಲಿ 3 ಬೌಂಡರಿ ಸೇರಿದಂತೆ ಅಜೇಯ 24 ರನ್‌ ಬಾರಿಸಿದರೆ, ಮಹಾರಾಜ್‌ ಅಜೇಯ 10 ರನ್‌ ಬಾರಿಸಿದ್ದಾರೆ.

ಅಶ್ವಿ‌ನ್‌ ಮ್ಯಾಜಿಕ್‌:
ಕೇಪ್‌ಟೌನ್‌ ಟೆಸ್ಟ್‌ನಲ್ಲಿ ವೇಗಿಗಳದ್ದೇ ಅಬ್ಬರವಾಗಿತ್ತು. ಆದರೆ ಸಂಚುರಿಯನ್‌ ಟೆಸ್ಟ್‌ನಲ್ಲಿ ವೇಗಿಗಳ ಆಟ ನಡೆಯಲಿಲ್ಲ. ಇಲ್ಲಿ ಯಶಸ್ಸು ಸಾಧಿಸಿದ್ದು ಸ್ಪಿನ್ನರ್‌ ಆರ್‌.ಅಶ್ವಿ‌ನ್‌. 31 ಓವರ್‌ ಎಸೆದ ಅಶ್ವಿ‌ನ್‌ 3 ವಿಕೆಟ್‌ ಪಡೆದರು. ವೇಗಿ ಇಶಾಂತ್‌ ಶರ್ಮ 1 ವಿಕೆಟ್‌ ಪಡೆದರು.

ಭುವನೇಶ್ವರ್‌ ಬದಲು ಇಶಾಂತ್‌!
ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ ಜತೆಗೆ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನೂ ನೀಡಿದ್ದ ಭುವನೇಶ್ವರ್‌ ಕುಮಾರ್‌ ಅವರನ್ನು ಸೆಂಚುರಿಯನ್‌ ಟೆಸ್ಟ್‌ ಪಂದ್ಯದಿಂದ ಹೊರಗಿರಿಸಿದ್ದು ಭಾರತ ತಂಡದ ಅಚ್ಚರಿ ಎನಿಸಿದೆ. ಈ ಸ್ಥಾನಕ್ಕೆ ಅನುಭವಿ ವೇಗಿ ಇಶಾಂತ್‌ ಶರ್ಮ ಅವರನ್ನು ಸೇರಿಸಿಕೊಳ್ಳಲಾಯಿತು. ಸೆಂಚುರಿಯನ್‌ ಟ್ರ್ಯಾಕ್‌ “ಎಕ್ಸ್‌ಟ್ರಾ ಬೌನ್ಸ್‌’ ಹೊಂದಿರುವುದೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ.

ಇದನ್ನು ಹೊರತುಪಡಿಸಿ ಭಾರತದ ಆಡುವ ಬಳಗದಲ್ಲಿ ಇನ್ನೂ 2 ಬದಲಾವಣೆಗಳಾಗಿವೆ. ಎಡಗೈ ಆರಂಭಕಾರ ಶಿಖರ್‌ ಧವನ್‌ ಬದಲು ಕೆ.ಎಲ್‌. ರಾಹುಲ್‌ ಆಯ್ಕೆಯಾದರು.
 
ಹಾಗೆಯೇ “ಗಾಯಾಳು’ ಕೀಪರ್‌ ವೃದ್ಧಿಮಾನ್‌ ಸಾಹಾ ಬದಲು ಪಾರ್ಥಿವ್‌ ಪಟೇಲ್‌ ಅವಕಾಶ ಪಡೆದರು. ಅಜಿಂಕ್ಯ ರಹಾನೆ ಈ ಪಂದ್ಯದಲ್ಲೂ ವೀಕ್ಷಕನಾಗಿ ಉಳಿಯಬೇಕಾಯಿತು.

ದಕ್ಷಿಣ ಆಫ್ರಿಕಾ ತಂಡದಲ್ಲಿ ಗಾಯಾಳು ವೇಗಿ ಬದಲು ಟೈಟಾನ್ಸ್‌ನ 21ರ ಹರೆಯದ ವೇಗಿ ಲುಂಗಿ ಎನ್‌ಗಿಡಿ ಊರಿನಂಗಳದಲ್ಲೇ ಟೆಸ್ಟ್‌ಕ್ಯಾಪ್‌ ಧರಿಸಿದರು.

ಸ್ಕೋರ್‌
ದಕ್ಷಿಣ ಆಫ್ರಿಕಾ  269/6
ಎಲ್ಗರ್‌ ಸಿ ವಿಜಯ್‌ ಬಿ ಅಶ್ವಿ‌ನ್‌    31
ಮಕ್ರìಮ್‌ ಸಿ ಪಟೇಲ್‌ ಬಿ ಅಶ್ವಿ‌ನ್‌    94
ಹಾಶಿಮ್‌ ಆಮ್ಲ ರನೌಟ್‌    82
ಎಬಿ ಡಿವಿಲಿಯರ್ ಬಿ ಇಶಾಂತ್‌    20
ಫಾಡು ಪ್ಲೆಸಿಸ್‌ ಅಜೇಯ    25
ಕ್ವಿಂಟನ್‌ ಡಿ ಕಾಕ್‌ ಸಿ ಕೊಹ್ಲಿ ಬಿ ಅಶ್ವಿ‌ನ್‌    0
ಫಿಲಾಂಡರ್‌ ರನೌಟ್‌    0
ಕೇಶವ್‌ ಮಹಾರಾಜ್‌    ಅಜೇಯ    10
ಇತರೆ    7
ವಿಕೆಟ್‌:
1-85, 2-148, 3-199, 4-246, 5-250, 6-251
ಬೌಲಿಂಗ್‌
ಜಸ್‌ಪ್ರೀತ್‌ ಬುಮ್ರಾ    18    4    58    0
ಮೊಹಮ್ಮದ್‌ ಶಮಿ    11    2    46    0
ಇಶಾಂತ್‌ ಶರ್ಮ    16    3    32    1
ಹಾರ್ದಿಕ್‌ ಪಾಂಡ್ಯ    14    4    37    0
ಆರ್‌.ಅಶ್ವಿ‌ನ್‌    31    8    90    3

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.