Udayavni Special

ವಾಂಖೆಡೆಯಲ್ಲಿ ಭಾರತ-ವಿಂಡೀಸ್‌ ಪ್ರಶಸ್ತಿ ಕಾಳಗ

Team Udayavani, Dec 11, 2019, 5:40 AM IST

prashasti-kalaga

ಮುಂಬಯಿ: ಈಗಾಗಲೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿರುವ ಭಾರತ ಮತ್ತು ವೆಸ್ಟ್‌ಇಂಡೀಸ್‌ ಟಿ20 ಸರಣಿಯ ಕಿರೀಟಕ್ಕಾಗಿ ಬುಧವಾರ ವಾಂಖೆಡೆ ಮೈದಾನದಲ್ಲಿ ಸೆಣೆಸಾಟ ನಡೆಸಲಿದೆ. ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಸುಸಜ್ಜಿತ ತಂಡವನ್ನು ರಚಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಈ ಸರಣಿ ಗೆಲುವು ಮುಖ್ಯವಾಗಿದೆ.

ವಾಂಖೆಡೆ ಟಿ20 ಇತಿಹಾಸ
ವಾಂಖೆಡೆಯಲ್ಲಿ ಆಡಿದ ಈ ಹಿಂದಿನ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 5 ಪಂದ್ಯಗಳು ಚೇಸಿಂಗ್‌ ಮಾಡಿದ ತಂಡವೇ ಜಯಭೇರಿ ಬಾರಿಸಿದೆ. ವಾಂಖೆಡೆಯ ಇತಿಹಾಸ ಗಮನಿಸಿದರೆ ವೆಸ್ಟ್‌ಇಂಡೀಸ್‌ ಗೆಲುವಿನ ನೆಚ್ಚಿನ ತಂಡವಾಗಿದೆ. ವಾಂಖೆಡೆಯಲ್ಲಿ ಗರಿಷ್ಠ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ಮುಂದಿದೆ. ಮಾತ್ರವಲ್ಲದೇ 2017ರಲ್ಲಿ ನಡೆದ ಪಂದ್ಯದಲ್ಲಿ ಭಾರತವು ವೆಸ್ಟ್‌ ಇಂಡೀಸ್‌ಗೆ 7 ವಿಕೆಟ್‌ಗಳಿಂದ ಶರಣಾಗಿದೆ.

ಚೇಸಿಂಗ್‌ ಮಾಡುವ ತಂಡವೇ ಗೆಲ್ಲುವ ಸಾಧ್ಯತೆಯಿರುವ ಕಾರಣ ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡುವುದರಲ್ಲಿ ಅನುಮಾನವಿಲ್ಲ.

ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಹಿನ್ನಡೆಯಾದುದು ಕಳಪೆ ಫೀಲ್ಡಿಂಗ್‌ ಮತ್ತು ಬೌಲಿಂಗ್‌. ತಿರುವನಂತಪುರದಲ್ಲಿ ತಂಡದ ಸೋಲಿನ ಬಳಿಕ ಮಾತನಾಡಿದ ನಾಯಕ ಕೊಹ್ಲಿ “ನಾವು ಇದೇ ರೀತಿಯ ಕಳಪೆ ಫೀಲ್ಡಿಂಗ್‌ ಮುಂದುವರಿಸಿದರೆ ಸ್ಕೋರ್‌ಬೋರ್ಡ್‌ನಲ್ಲಿ ಎಷ್ಟೇ ಮೊತ್ತ ಗಳಿಸಿದರೂ ಸಾಕಾಗದು. ಎರಡೂ ಪಂದ್ಯಗಳಲ್ಲಿ ನಮ್ಮ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. ಕ್ಯಾಚ್‌ಗಳನ್ನು ಚೆಲ್ಲಿ ಎದುರಾಳಿಗಳಿಗೆ ಜೀವದಾನ ನೀಡುತ್ತಿದ್ದೇವೆ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಅಮೋಘ ಫೀಲ್ಡಿಂಗ್‌ ನಡೆಸಬೇಕಾದ ಅಗತ್ಯವಿದೆ’ ಎಂದು ತಂಡದ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಕಾರಣಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದೀಪಕ್‌ ಚಹರ್‌ ಅವರ ಸ್ಥಾನಕ್ಕೆ ಮೊಹಮ್ಮದ್‌ ಶಮಿ ಮತ್ತು ವಾಷಿಂಗ್ಟನ್‌ ಸುಂದರ್‌ ಬದಲಿಗೆ ಕುಲದೀಪ್‌ ಯಾದವ್‌ ಅವರನ್ನು ಕಣಕ್ಕಿಳಿಸುವ ಯೋಜನೆಯನ್ನು ಟೀಮ್‌ ಇಂಡಿಯಾ ಇಟ್ಟುಕೊಂಡಿದೆ.

ಐಪಿಎಲ್‌ ಅನುಭವದಿಂದ ವಿಂಡೀಸ್‌ ಬಲಿಷ್ಠ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ವಾಂಖೆಡೆ ಅಂಗಳದಲ್ಲಿ ಆಡಿದ ಅಪಾರ ಅನುಭವವಿರುವ ನಾಯಕ ಪೊಲಾರ್ಡ್‌, ಲೆಂಡ್ಲ್ ಸಿಮನ್ಸ್‌ , ಎವಿನ್‌ ಲೆವಿಸ್‌ ತಂಡದಲ್ಲಿರುವುದು ವಿಂಡೀಸ್‌ಗೆ ಆನೆ ಬಲ ಬಂದಂತಾಗಿದೆ. ಇದರೊಂದಿಗೆ ಶಿಮ್ರನ್‌ ಹೆಟ್‌ಮೈರ್‌ ಮತ್ತು ನಿಕೊಲಸ್‌ ಪೂರನ್‌ ಅವರ ಭರ್ಜರಿ ಬ್ಯಾಟಿಂಗ್‌ ಫಾರ್ಮ್ ಕೂಡ ತಂಡಕ್ಕೆ ಪ್ಲಸ್‌ ಪಾಯಿಂಟ್‌.

ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ದುಬಾರಿ ಎನಿಸಿದ ವಿಂಡೀಸ್‌ ಬೌಲರ್‌ಗಳು ದ್ವಿತೀಯ ಪಂದ್ಯದಲ್ಲಿ ಸುಧಾರಣೆ ಕಂಡು ಬೌಲಿಂಗ್‌ ವಿಭಾಗವನ್ನು ಗಟ್ಟಿಗೊಳಿಸಿದ್ದಾರೆ. ವಿಂಡೀಸ್‌ನ ಪ್ರಮುಖ ಅಸ್ತ್ರವೆಂದರೆ ಸ್ಲೋ ಬೌಲಿಂಗ್‌. ಕಳೆದ ಪಂದ್ಯದಲ್ಲೂ ಇದೇ ರೀತಿ ಸ್ಲೋ ಬೌಲಿಂಗ್‌ ನಡೆಸಿ ಭಾರತದ ಬ್ಯಾಟ್ಸ್‌ ಮನ್‌ಗಳನ್ನು ಕಟ್ಟಿ ಹಾಕಿರುವುದು ಇದಕ್ಕೆ ಉತ್ತಮ ನಿದರ್ಶನ.

ಮೂವರಿಗೆ ತವರಿನ ಪಂದ್ಯ
ಭಾರತದ ಮೂವರು ಆಟಗಾರರಾದ ರೋಹಿತ್‌ ಶರ್ಮ, ಶಿವಂ ದುಬೆ, ಶ್ರೇಯಸ್‌ ಅಯ್ಯರ್‌ ಅವರಿಗೆ ಇದು ತವರಿನ ಪಂದ್ಯವಾಗಿದೆ. ಮುಂಬಯಿ ಮೂಲದ ಈ ಮೂವರು ಆಟಗಾರರು ತವರಿನ ವಾಂಖೆಡೆ ಅಂಗಳದಲ್ಲಿ ಗರಿಷ್ಠ ಲಾಭವೆತ್ತುವ ಅವಕಾಶ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ದುಬೆ 30 ಎಸೆತಗಳಲ್ಲಿ 54 ರನ್‌ ಸಿಡಿಸಿ ಮಿಂಚಿದ್ದರು ಈ ಪಂದ್ಯದಲ್ಲೂ ಅವರ ಬ್ಯಾಟಿಂಗ್‌ ಮೇಲೆ ತಂಡ ಹೆಚ್ಚಿನ ವಿಶ್ವಾಸವಿರಿಸಿದೆ.

ಆದರೆ ರೋಹಿತ್‌ ಮತ್ತು ಅಯ್ಯರ್‌ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫ‌ಲರಾಗಿದ್ದರು. ಈ ಪಂದ್ಯದಲ್ಲಿ ಫಾರ್ಮ್ಗೆ ಮರಳುವ ಅನಿವಾರ್ಯತೆ ಎದುರಾಗಿದೆ.

ಸಂಭಾವ್ಯ ತಂಡಗಳು
ಭಾರತ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಮನೀಷ್‌ ಪಾಂಡೆ/ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌/ ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌/ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌,

ವೆಸ್ಟ್‌ ಇಂಡೀಸ್‌
ಕೈರನ್‌ ಪೊಲಾರ್ಡ್‌ (ನಾಯಕ), ಬ್ರ್ಯಾಂಡನ್‌ ಕಿಂಗ್‌, ನಿಕೊಲಸ್‌ ಪೂರನ್‌, ಶೆಲ್ಡನ್‌ ಕಾಟ್ರೆಲ್‌, ಎವಿನ್‌ ಲೆವಿಸ್‌, ಶಿಮ್ರನ್‌ ಹೆಟ್‌ಮೈರ್‌, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್‌, ಜಾಸನ್‌ ಹೋಲ್ಡರ್‌, ಹೇಡನ್‌ ವಾಲ್ಶ್ ಜೂನಿಯರ್‌, ಕೆಸ್ರಿಕ್‌ ವಿಲಿಯಮ್ಸ್‌/ ಕೀಮೊ ಪೌಲ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

370ನೇ ವಿಧಿ ರದ್ದು; ಮೊದಲ ವರ್ಷಾಚರಣೆ- ಆಗಸ್ಟ್ 4-5ರಂದು ಶ್ರೀನಗರದಲ್ಲಿ ಕರ್ಫ್ಯೂ ಜಾರಿ

370ನೇ ವಿಧಿ ರದ್ದು-ಮೊದಲ ವರ್ಷಾಚರಣೆ; ಆಗಸ್ಟ್ 4 ಮತ್ತು 5ರಂದು ಶ್ರೀನಗರದಲ್ಲಿ ಕರ್ಫ್ಯೂ ಜಾರಿ

ವಿಪಕ್ಷ ನಾಯಕ ಸಿದ್ದರಾಯಯ್ಯ ಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆಗೆ ದಾಖಲು

ವಿಪಕ್ಷ ನಾಯಕ ಸಿದ್ದರಾಯಯ್ಯ ಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆಗೆ ದಾಖಲು

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

Rakhi-1

ಸಂತ್ರಸ್ತೆಗೆ ರಾಖಿ ಕಟ್ಟಿ ಕಾಣಿಕೆ ಕೊಡಲು ಲೈಂಗಿಕ ದೌರ್ಜನ್ಯ ಆರೋಪಿಗೆ ಕೋರ್ಟ್ ಆದೇಶ

ಕನಸು ನಾಳೆ ನನಸು: ಸಕಲ ವೈಭವದಿಂದ ಕಂಗೊಳಿಸುತ್ತಿರುವ ಅಯೋಧ್ಯೆ

ಕನಸು ನಾಳೆ ನನಸು: ಸಕಲ ವೈಭವದಿಂದ ಕಂಗೊಳಿಸುತ್ತಿರುವ ಅಯೋಧ್ಯೆ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

ತುಸು ದೂರ, ಆದರೆ ರಕ್ಷೆಯ ಬಂಧ ಹೆಚ್ಚು ಗಟ್ಟಿ: ಸಚಿನ್‌

ತುಸು ದೂರ, ಆದರೆ ರಕ್ಷೆಯ ಬಂಧ ಹೆಚ್ಚು ಗಟ್ಟಿ: ಸಚಿನ್‌

ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

ಟೆಸ್ಟ್‌ ತಂಡದಿಂದ ಕೈಬಿಟ್ಟಾಗ ನಿವೃತ್ತಿಗೆ ಮುಂದಾಗಿದ್ದ ಬ್ರಾಡ್‌

ಟೆಸ್ಟ್‌ ತಂಡದಿಂದ ಕೈಬಿಟ್ಟಾಗ ನಿವೃತ್ತಿಗೆ ಮುಂದಾಗಿದ್ದ ಬ್ರಾಡ್‌

ಹತ್ತು ತಿಂಗಳಿನಿಂದ ವೇತನ ನೀಡದ BCCI!: 99 ಕೋಟಿ ರೂ. ವೇತನ ಪಾವತಿ ಬಾಕಿ?

ಹತ್ತು ತಿಂಗಳಿನಿಂದ ವೇತನ ನೀಡದ BCCI!: 99 ಕೋಟಿ ರೂ. ವೇತನ ಪಾವತಿ ಬಾಕಿ?

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavaniಹೊಸ ಸೇರ್ಪಡೆ

370ನೇ ವಿಧಿ ರದ್ದು; ಮೊದಲ ವರ್ಷಾಚರಣೆ- ಆಗಸ್ಟ್ 4-5ರಂದು ಶ್ರೀನಗರದಲ್ಲಿ ಕರ್ಫ್ಯೂ ಜಾರಿ

370ನೇ ವಿಧಿ ರದ್ದು-ಮೊದಲ ವರ್ಷಾಚರಣೆ; ಆಗಸ್ಟ್ 4 ಮತ್ತು 5ರಂದು ಶ್ರೀನಗರದಲ್ಲಿ ಕರ್ಫ್ಯೂ ಜಾರಿ

ತಿದ್ದುಪಡಿ ಕಾಯ್ದೆಗೆ ಕಿಸಾನ್‌ ಸಂಘ ವಿರೋಧ

ತಿದ್ದುಪಡಿ ಕಾಯ್ದೆಗೆ ಕಿಸಾನ್‌ ಸಂಘ ವಿರೋಧ

ವಿಪಕ್ಷ ನಾಯಕ ಸಿದ್ದರಾಯಯ್ಯ ಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆಗೆ ದಾಖಲು

ವಿಪಕ್ಷ ನಾಯಕ ಸಿದ್ದರಾಯಯ್ಯ ಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆಗೆ ದಾಖಲು

ಗುಣಮುಖರಾಗಲು ವಿಶೇಷ ಪೂಜೆ

ಗುಣಮುಖರಾಗಲು ವಿಶೇಷ ಪೂಜೆ

ರಾಷ್ಟ್ರೀಯ ಶಿಕ್ಷಣ ನೀತಿ -2020; 1ನೇ ತರಗತಿಯಿಂದ ಕೊಂಕಣಿ ಕಲಿಕೆಗೆ ಅವಕಾಶಕ್ಕೆ ಮನವಿ

ರಾಷ್ಟ್ರೀಯ ಶಿಕ್ಷಣ ನೀತಿ -2020; 1ನೇ ತರಗತಿಯಿಂದ ಕೊಂಕಣಿ ಕಲಿಕೆಗೆ ಅವಕಾಶಕ್ಕೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.