ಮತ್ತೆ ವನಿತೆಯರ ಕ್ರಿಕೆಟ್: ದ.ಆಫ್ರಿಕಾ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತೀಯ ತಂಡ ಪ್ರಕಟ
Team Udayavani, Feb 27, 2021, 4:05 PM IST
ಮುಂಬೈ: ಕೋವಿಡ್ ಬ್ರೇಕ್ ನಂತರ ಭಾರತೀಯ ಮಹಿಳಾ ಕ್ರಿಕೆಟ್ ಮತ್ತೆ ಅಂತಾರಾಷ್ಟ್ರೀಯ ಕೂಟಕ್ಕೆ ಸಜ್ಜಾಗಿದೆ. ಮುಂದಿನ ತಿಂಗಳಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ.
ಮಿಥಾಲಿ ರಾಜ್ ಏಕದಿನ ತಂಡವನ್ನು ಮುನ್ನಡೆಸಿದರೆ, ಹರ್ಮನ್ ಪ್ರೀತ್ ಕೌರ್ ಉಪನಾಯಕಿಯಾಗಿದ್ದಾರೆ. ಟಿ20 ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಮೃತಿ ಮಂಧನಾ ಉಪ ನಾಯಕಿಯಾಗಿದ್ದಾರೆ.
ಇದನ್ನೂ ಓದಿ:ಅಗ್ರಸ್ಥಾನದಲ್ಲಿ ಭಾರತ; ಹೊರಬಿದ್ದ ಇಂಗ್ಲೆಂಡ್
ಸರಣಿಯಲ್ಲಿ ಐದು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿದೆ. ಮಾರ್ಚ್ ಏಳರಿಂದ ಮಾರ್ಚ್ 23ರ ವರೆಗೆ ಈ ಸರಣಿ ನಡೆಯಲಿದೆ. ಎಲ್ಲಾ ಎಂಟು ಪಂದ್ಯಗಳು ಲಕ್ನೋದಲ್ಲಿ ನಡೆಯಲಿದೆ.
ತಂಡಗಳು
ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂಧನಾ, ಜೆಮಿಮಾ ರೊಡ್ರೀಗಸ್, ಪೂನಂ ರಾವತ್, ಪ್ರಿಯಾ ಪುನಿಯಾ, ಯಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಡಿ.ಹೇಮಲತಾ, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್) ), ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಜುಲಾನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಮ್ ಯಾದವ್, ಸಿ.ಪ್ರತಿಷಾ, ಮೋನಿಕಾ ಪಟೇಲ್
ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕ), ಶಫಾಲಿ ವರ್ಮಾ, ಜೆಮಿಮಾ ರೊಡ್ರೀಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ನುಜ್ಹತ್ ಪರ್ವೀನ್ (ವಿಕೆಟ್ ಕೀಪರ್), ಅಯುಶಿ ರೆಡ್ಡಿ , ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಸಿ.ಪ್ರತ್ಯುಷಾ, ಸಿಮ್ರನ್ ದಿಲ್ ಬಹದ್ದೂರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಇದು ಕಸ್ತೂರಿ ನಿವಾಸದ ಕೈ, ರನ್ ಸಿಡಿಸುತ್ತೇ ಹೊರತು ನಿರಾಸೆ ಮಾಡೋದಿಲ್ಲ’
ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ
ಏಶ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ
ಪಂಜಾಬ್ ಕಿಂಗ್ಸ್ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ
ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ : ರಜತ ಪದಕ ಗೆದ್ದ ದೀಪಕ್ ಪೂನಿಯ