ಭಾರತ ವನಿತೆಯರಿಗೆ ಮತ್ತೆ ಸೋಲು
Team Udayavani, Mar 27, 2018, 6:00 AM IST
ಮುಂಬಯಿ: ತ್ರಿಕೋನ ವನಿತಾ ಟಿ20 ಸರಣಿಯಲ್ಲಿ ಸತತ ಮೂರನೇ ಪಂದ್ಯದಲ್ಲಿ ಸೋತಿರುವ ಭಾರತ ವನಿತೆಯರು ಫೈನಲಿಗೇರುವ ಅವಕಾಶದಿಂದ ವಂಚಿತರಾಗಿದ್ದಾರೆ. ಸೋಮವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಕ್ಕೆ 36 ರನ್ನುಗಳಿಂದ ಶರಣಾಗಿದೆ. ಈ ಗೆಲುವಿನಿಂದ ಆಸ್ಟ್ರೇಲಿಯ ತಾನಾಡಿದ ಮೂರು ಪಂದ್ಯಗಳಿಂದ ನಾಲ್ಕಂಕ ಪಡೆದಿದ್ದರೆ ಭಾರತ ಇನ್ನೂ ಅಂಕ ಖಾತೆ ತೆರೆಯಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ವನಿತೆಯರು ನಾಲ್ಕು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮಾ. 28ರಂದು ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದರೆ ಮಾ. 29ರಂದು ಭಾರತವು ಇಂಗ್ಲೆಂಡ್ ವಿರುದ್ಧ ಆಡಲಿದೆ. ಸದ್ಯ ತಲಾ ನಾಲ್ಕು ಅಂಕ ಹೊಂದಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಮಾ. 31ರ ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ವನಿತೆಯರು ಬೆತ್ ಮೂನಿ ಮತ್ತು ಎಲಿಸ್ ವಿಲಾನಿ ಅವರ ಅರ್ಧಶತಕದಿಂದಾಗಿ 5 ವಿಕೆಟಿಗೆ 186 ರನ್ ಪೇರಿಸಿತು. ಮೂನಿ 71 ರನ್ ಗಳಿಸಿದ್ದರೆ ವಿಲಾನಿ 10 ಬೌಂಡರಿ ನೆರವಿನಿಂದ 61 ರನ್ ಹೊಡೆದರು.
ಗೆಲ್ಲಲು ಕಠಿನ ಗುರಿ ಪಡೆದ ಭಾರತ ವನಿತೆಯರು ಆರಂಭದಲ್ಲಿಯೇ ಎಡವಿದರು. 26 ರನ್ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಜೆಮಿಮಾ ರಾಡ್ರಿಗಸ್ ಸಹಿತ ಹರ್ಮನ್‌ಪ್ರೀತ್ ಕೌರ್ ಮತ್ತು ಅನುಜಾ ಪಾಟೀಲ್ ಗೆಲ್ಲಲು ಕಠಿನ ಪ್ರಯತ್ನಪಟ್ಟರು. ಆದರೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 150 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾದರು.
ಶಟ್ ಹ್ಯಾಟ್ರಿಕ್
ಸತತ ಮೂರು ಎಸೆತಗಳಲ್ಲಿ ಮಂದನಾ, ಮಿಥಾಲಿ ಮತ್ತು ದೀಪ್ತಿ ಶರ್ಮ ಅವರ ವಿಕೆಟನ್ನು ಹಾರಿಸಿದ ಮೇಗನ್ ಶಟ್ ವನಿತಾ ಟ್ವೆಂಟಿ20ಯಲ್ಲಿ ಆಸ್ಟ್ರೇಲಿಯ ಪರ ಮೊದಲ ಹ್ಯಾಟ್ರಿಕ್ ಸಾಧಿಸಿದ ಗೌರವಕ್ಕೆ ಪಾತ್ರರಾದರು. ವನಿತಾ ಕ್ರಿಕೆಟ್‌ನಲ್ಲಿ ಒಟ್ಟಾರೆ ಇದು 7ನೇ ಹ್ಯಾಟ್ರಿಕ್ ಸಾಧನೆಯಾಗಿದೆ.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯ ವನಿತೆಯರು 5 ವಿಕೆಟಿಗೆ 186; ಭಾರತ ವನಿತೆಯರು 20 ಓವರ್‌ಗಳಲ್ಲಿ 5 ವಿಕೆಟಿಗೆ 150
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಢಾಕಾ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್ ಜಯಭೇರಿ
ರಾಯಲ್ ಕದನ: ಇಲ್ಲಿದೆ ಬೆಂಗಳೂರು-ರಾಜಸ್ಥಾನ ನಡುವಿನ ಸ್ವಾರಸ್ಯಕರ ಅಂಶಗಳು
ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ
ರಜತ್ ಪಾಟೀದಾರ್: ಆರ್ಸಿಬಿಯ ನ್ಯೂ ಸೂಪರ್ಸ್ಟಾರ್
ಕ್ವಾಲಿಫೈಯರ್ 2 : ರಾಯಲ್ ಕದನಕ್ಕೆ ಆರ್ಸಿಬಿ-ರಾಜಸ್ಥಾನ್ ಸಜ್ಜು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ನೆಲ್ಯಾಡಿ: ಕಾರು – ಟಿಪ್ಪರ್ ಢಿಕ್ಕಿ; ಓರ್ವ ಸಾವು
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ