50 ರನ್ ಕೂಡಾ ಗಳಿಸಲಾಗದೆ ಸೋತ ವಿಂಡೀಸ್ ಮಹಿಳೆಯರು

Team Udayavani, Nov 18, 2019, 9:06 AM IST

ಗಯಾನ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ನಾಲ್ಕನೇ ಟಿ ಟ್ವೆಂಟಿ ಪಂದ್ಯವನ್ನೂ ಗೆದ್ದುಕೊಂಡಿದೆ.

ಇಲ್ಲಿನ ಪ್ರೋವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮಳೆಯಿಂದಾಗಿ ತಲಾ 9 ಓವರ್ ಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಮಹಿಳೆಯರು 9 ಓವರ್ ನಲ್ಲಿ ಏಳು ವಿಕೆಟ್ ಕಳೆದುಕೊಂಡು 50 ರನ್ ಅಷ್ಟೇ ಮಾಡಲು ಸಾಧ್ಯವಾಯಿತು.

10 ರನ್ ಗಳಿಸಿದ ಪೂಜಾ ವಸ್ತ್ರಾಕರ್ ರದ್ದೇ ಅತೀ ಹೆ್ಚ್ಚಿನ ಗಳಿಕೆ.  ವಿಂಡೀಸ್ ಪರ ಮ್ಯಾಥ್ಯೂಸ್ ಮೂರು ವಿಕೆಟ್ ಪಡೆದರು.

51 ರನ್ ಗುರಿ ಪಡೆದ ವಿಂಡೀಸ್ ಕೂಡಾ ರನ್ ಕಲೆಹಾಕಲು ಪರದಾಡಿತು. ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡು 45 ರನ್ ಗಳಿಸಲಷ್ಟೇ ಶಕ್ತವಾಯಿತು. ಅನುಜಾ ಪಾಟೀಲ್ ಎರಡು ವಿಕೆಟ್ ಪಡೆದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ