15ರ ಹರೆಯದ ಶಿಫಾಲಿ ಸಾಹಸ: 10 ವಿಕೆಟ್ ಗಳ ಜಯ ಸಾಧಿಸಿದ ಭಾರತ

Team Udayavani, Nov 11, 2019, 9:16 AM IST

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮಹಿಳೆಯರು ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಇನ್ನೂ 15ರ ಹರೆಯದ ಶಿಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಮತ್ತು ದೀಪ್ತಿ ಶರ್ಮಾ ಬೌಲಿಂಗ್ ಸಾಹಸದಿಂದ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು  ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್  ಕೌರ್  ಲೆಕ್ಕಾಚಾರ ಸರಿಯಾಗಿತ್ತು. ವಿಂಡೀಸ್ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಂಡೀಸ್ ಪರ ಹ್ಯಾವ್ಲೇ ಮ್ಯಾಥ್ಯೂ 23, ಚೇಡಾನ್ ನೇಶನ್ 32 ರನ್ ಗಳಸಿದರು. ದೀಪ್ತಿ ಶರ್ಮಾ ನಾಲ್ಕು ಓವರ್ ಗಳಲ್ಲಿ 10 ರನ್ ನೀಡಿ ನಾಲ್ಕು ವಿಕೆಟ್ ಪಡದರು.

ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 10 ಓವರ್ ಗಳಲ್ಲಿ ಜಯ ಸಾಧಿಸಿತು. ಭರ್ಜರಿಯಾಗಿ ಬ್ಯಾಟ್ ಬೀಸಿದ ಶಿಫಾಲಿ ವರ್ಮಾ ಕೇವಲ 35 ಎಸೆತಗಳಿಂದ 69 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಸ್ಮ್ರತಿ ಮಂಧನಾ 30 ರನ್ ಗಳಿಸಿದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ