ರೋಡ್ರಿಗಸ್ ಸಾಹಸ: ವಿಂಡೀಸ್ ವಿರುದ್ಧ ಸರಣಿ ಗೆದ್ದ ವನಿತೆಯರು

Team Udayavani, Nov 15, 2019, 8:40 AM IST

ಗಯಾನ: ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯವನ್ನೂ ಗೆದ್ದ ಭಾರತೀಯ ವನಿತೆಯರು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.

ಟಾಸ್ ಗೆದ್ದ ವಿಂಡೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರೂ ಭಾರಿ ನಿರಾಸೆ ಅನುಭವಿಸಿತು. ಚೀಡಾನ್ ನೇಶನ್ ಮತ್ತು ಹೆನ್ರಿ ಬಿಟ್ಟರೆ ಬೇರಾರು ಎರಡಂಕೆಯನ್ನೂ ದಾಟಲಿಲ್ಲ. ಸತತ ವಿಕೆಟ್ ಕಳೆದುಕೊಂಡ ವಿಂಡೀಸ್ 20 ಓವರ್ ನಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 59 ರನ್ ಮಾತ್ರ ಗಳಿಸಿತು.

ಭಾರತದ ಪರ ರಾಧಾ ಯಾದವ್ ನಾಲ್ಕು ಓವರ್ ನಲ್ಲಿ ಕೇವಲ ಆರು ರನ್ ನೀಡಿ ಎರಡು ವಿಕೆಟ್ ಪಡೆದರು.

ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 12 ರನ್ ಆದಾಗ ಶಿಫಾಲಿ ಮತ್ತು ಸ್ಮ್ರತಿ ಮಂಧನಾ ಪೆವಿಲಿಯನ್ ಸೇರಿದರು. ಆದರೆ ನಂತರ ತಂಡದ ಕೈಹಿಡಿದ ಜೆಮಿಮಾ ರೋಡ್ರಿಗಸ್ ಅಜೇಯ 40 ಬಾರಿಸಿ ತಂಡವನ್ನು ಗುರಿ ತಲುಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ