ಭಾರತಕ್ಕೆ 6 ರನ್‌ ರೋಚಕ ಗೆಲುವು


Team Udayavani, Oct 30, 2017, 6:50 AM IST

PTI10_29_2017_000230a.jpg

ಕಾನ್ಪುರ: ಬೃಹತ್‌ ಮೊತ್ತದ ಸೆಣಸಾಟದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್‌ ತಂಡವನ್ನು ಆರು ರನ್ನಿನಿಂದ ಸೋಲಿಸಿದ ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ರೋಹಿತ್‌ ಮತ್ತು ಕೊಹ್ಲಿ ಅವರ ಅಮೋಘ ಶತಕದಿಂದ ಭಾರತ ಆರು ವಿಕೆಟಿಗೆ 337 ರನ್ನುಗಳ ದಾಖಲೆಯ ಮೊತ್ತ ಪೇರಿಸಿದರೆ ನ್ಯೂಜಿಲ್ಯಾಂಡ್‌ ಗೆಲುವಿನ ಸನಿಹಕ್ಕೆ ಬಂದರೂ ಅಂತಿಮ ಹಂತದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರ ದಾಳಿಯಿಂದ ಒತ್ತಡಕ್ಕೆ ಒಳಗಾಗಿ 7 ವಿಕೆಟಿಗೆ 331 ರನ್‌ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲನ್ನು ಕಂಡಿತು.

ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ ಮತ್ತು ಟಾಮ್‌ ಲಾಥಂ ಅವರ ಹೋರಾಟದ ಅರ್ಧಶತಕದಿಂದಾಗಿ ನ್ಯೂಜಿಲ್ಯಾಂಡ್‌ ರೋಚಕ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಬುಮ್ರಾ ಮಾರಕವಾಗಿ ದಾಳಿ ನಡೆಸಿದ್ದರಿಂದ ಭಾರತ ಮೇಲುಗೈ ಸಾಧಿಸುವಂತಾಯಿತು. ಅಂತಿಮ ಓವರಿನಲ್ಲಿ ನ್ಯೂಜಿಲ್ಯಾಂಡ್‌ ಗೆಲುವಿನ 15 ರನ್‌ ಬೇಕಿತ್ತು. ಆದರೆ ಬುಮ್ರಾ ಆ ಓವರಿನಲ್ಲಿ ಕೇವಲ 8 ರನ್‌ ಬಿಟ್ಟುಕೊಟ್ಟು ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ತನ್ನ 10 ಓವರ್‌ಗಳ ದಾಳಿಯಲ್ಲಿ ಅವರು 47 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.ರೋಹಿತ್‌ ಶರ್ಮ ಪಂದ್ಯಶ್ರೇಷ್ಠ ಮತ್ತು ವಿರಾಟ್‌ ಕೊಹ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಸೌಥಿ ಬಿ ಸ್ಯಾಂಟ್ನರ್‌    147
ಶಿಖರ್‌ ಧವನ್‌    ಸಿ ವಿಲಿಯಮ್ಸನ್‌ ಬಿ ಸೌಥಿ    14
ವಿರಾಟ್‌ ಕೊಹ್ಲಿ    ಸಿ ವಿಲಿಯಮ್ಸನ್‌ ಬಿ ಸೌಥಿ    113
ಹಾರ್ದಿಲ್‌ ಪಾಂಡ್ಯ    ಸಿ ಸೌಥಿ ಬಿ ಸ್ಯಾಂಟ್ನರ್‌    8
ಎಂ.ಎಸ್‌. ಧೋನಿ    ಸಿ ಮುನ್ರೊ ಬಿ ಮಿಲೆ°    25
ಕೇದಾರ್‌ ಜಾಧವ್‌    ಸಿ ಗಪ್ಟಿಲ್‌ ಬಿ ಮಿಲೆ°    18
ದಿನೇಶ್‌ ಕಾರ್ತಿಕ್‌    ಔಟಾಗದೆ    4
ಇತರ        8
ಒಟ್ಟು  (50 ಓವರ್‌ಗಳಲ್ಲಿ 6 ವಿಕೆಟಿಗೆ)        337
ವಿಕೆಟ್‌ ಪತನ: 1-29, 2-259, 3-273, 4-302, 5-331, 6-337.
ಬೌಲಿಂಗ್‌:
ಟಿಮ್‌ ಸೌಥಿ        10-0-66-2
ಟ್ರೆಂಟ್‌ ಬೌಲ್ಟ್        10-0-81-0
ಆ್ಯಡಂ ಮಿಲೆ°        10-0-64-2
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌        8-0-57-0
ಮಿಚೆಲ್‌ ಸ್ಯಾಂಟ್ನರ್‌        10-0-58-2
ಕಾಲಿನ್‌ ಮುನ್ರೊ        2-0-10-0

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಕಾರ್ತಿಕ್‌ ಬಿ ಬುಮ್ರಾ    10
ಕಾಲಿನ್‌ ಮುನ್ರೊ    ಬಿ ಚಾಹಲ್‌    75
ಕೇನ್‌ ವಿಲಿಯಮ್ಸನ್‌    ಸಿ ಧೋನಿ ಬಿ ಚಾಹಲ್‌    64
ರಾಸ್‌ ಟಯ್ಲರ್‌    ಸಿ ಜಾಧವ್‌ ಬಿ ಬುಮ್ರಾ    39
ಟಾಮ್‌ ಲಾಥಂ    ರನೌಟ್‌    65
ಹೆನ್ರಿ ನಿಕೋಲ್ಸ್‌    ಬಿ ಕುಮಾರ್‌    37
ಗ್ರ್ಯಾಂಡ್‌ಹೋಮ್‌    ಔಟಾಗದೆ    8
ಮಿಚೆಲ್‌ ಸ್ಯಾಂಟ್ನರ್‌    ಸಿ ಧವನ್‌ ಬಿ ಬುಮ್ರಾ    9
ಟಿಮ್‌ ಸೌಥಿ    ಔಟಾಗದೆ    4
ಇತರ:        20
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ)    331
ವಿಕೆಟ್‌ ಪತನ: 1-44, 2-153, 3-168, 4-247, 5-306, 6-312, 7-326
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        10-0-92-1
ಜಸ್‌ಪ್ರೀತ್‌ ಬುಮ್ರಾ        10-0-47-3
ಹಾರ್ದಿಕ್‌ ಪಾಂಡ್ಯ        5-0-47-0
ಅಕ್ಷರ್‌ ಪಟೇಲ್‌        7-0-40-0
ಕೇಧಾರ್‌ ಜಾಧವ್‌        8-0-54-0
ಯುಜ್ವೇಂದ್ರ ಚಾಹಲ್‌        10-0-47-2
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ
ಸರಣಿಶ್ರೇಷ್ಠ: ವಿರಾಟ್‌ ಕೊಹ್ಲಿ

ಭಾರತದ ಇನ್ನಿಂಗ್ಸ್‌
ರೋಹಿತ್‌, ಕೊಹ್ಲಿ ಶತಕ ಸಂಭ್ರಮ
ಶಿಖರ್‌ ಧವನ್‌ (14) ಅವರನ್ನು ಅಗ್ಗಕ್ಕೆ ಕಳೆದುಕೊಂಡ ಭಾರತಕ್ಕೆ ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ಜೋಡಿಯ ಮ್ಯಾರಥಾನ್‌ ಇನ್ನಿಂಗ್ಸ್‌ ಆಧಾರವಾಯಿತು. ಇವರಿಬ್ಬರೂ ವೈಯಕ್ತಿಕ ಶತಕಗಳೊಂದಿಗೆ ರಂಜಿಸುವ ಜತೆಗೆ, ದ್ವಿತೀಯ ವಿಕೆಟಿಗೆ ದ್ವಿಶತಕದ ಜತೆಯಾಟ ನಡೆಸಿ “ಗ್ರೀನ್‌ಪಾರ್ಕ್‌’ನಲ್ಲಿ ಮೆರೆದರು.

7ನೇ ಓವರಿನ ಆರಂಭದಲ್ಲಿ ಜತೆಯಾದ ರೋಹಿತ್‌-ಕೊಹ್ಲಿ 42ನೇ ಓವರ್‌ ತನಕ ನ್ಯೂಜಿಲ್ಯಾಂಡ್‌ ದಾಳಿಯನ್ನು ದಂಡಿಸುತ್ತ ಸಾಗಿದರು, 2ನೇ ವಿಕೆಟಿಗೆ 230 ರನ್‌ ಪೇರಿಸಿದರು. ಹೀಗಾಗಿ ಭಾರತದ ಮೊತ್ತ 337ರ ತನಕ ಬೆಳೆಯಿತು. ಇದು ಕಾನ್ಪುರದ ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ರನ್‌. 2015ರಲ್ಲಿ ದಕ್ಷಿಣ ಆಫ್ರಿಕಾ 5ಕ್ಕೆ 303 ರನ್‌ ಪೇರಿಸಿದ ದಾಖಲೆ ಪತನಗೊಂಡಿತು.

ಇವರಲ್ಲಿ ಮೊದಲ ಶತಕ ರೋಹಿತ್‌ ಶರ್ಮ ಅವರಿಂದ ದಾಖಲಾಯಿತು. 106 ಎಸೆತಗಳಿಂದ 15ನೇ ಸೆಂಚುರಿ ಪೂರೈಸಿದ ರೋಹಿತ್‌ 147ರ ತನಕ ಬೆಳೆದರು. 138 ಎಸೆತಗಳ ಈ ಬ್ಯಾಟಿಂಗ್‌ ವೈಭವದ ವೇಳೆ 18 ಬೌಂಡರಿ, 2 ಸಿಕ್ಸರ್‌ ಸಿಡಿಯಿತು. ಕಳೆದ ಸಲ ದಕ್ಷಿಣ ಆಫ್ರಿಕಾ ವಿರುದ್ಧ ಕಾನ್ಪುರದಲ್ಲಿ ಆಡಿದ ವೇಳೆ ರೋಹಿತ್‌ 150 ರನ್‌ ಬಾರಿಸಿದ್ದರು. ರವಿವಾರವೂ “ಫ‌ುಲ್‌ ಫ್ಲೋ’ನಲ್ಲಿದ್ದ ರೋಹಿತ್‌, ಇನ್ನೇನು ಈ ಗಡಿ ಮುಟ್ಟಲಿದ್ದಾರೆ ಎನ್ನುವಷ್ಟರಲ್ಲಿ ಸ್ಯಾಂಟ್ನರ್‌ ಮೋಡಿಗೆ ಸಿಲುಕಿದರು.

ಮುಂಬಯಿಯಲ್ಲಿ 121 ರನ್‌ ಮಾಡಿ ಶತಕವೀರರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ಕೊಹ್ಲಿ, ಕಾನ್ಪುರದಲ್ಲಿ 113 ರನ್‌ ಬಾರಿಸಿದರು. ಅವರ 100 ರನ್‌ 96 ಎಸೆತಗಳಲ್ಲಿ ಬಂತು. ಒಟ್ಟು 106 ಎಸೆತ ಎದುರಿಸಿ 9 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದರು. ಈ ಸಾಧನೆಯ ವೇಳೆ ಅವರು ಏಕದಿನದಲ್ಲಿ 9 ಸಾವಿರ ರನ್‌ ಪೂರ್ತಿಗೊಳಿಸಿದರು.

ಆರಂಭದಲ್ಲಿ ರೋಹಿತ್‌-ಕೊಹ್ಲಿ ಎಚ್ಚರಿಕೆಯ ಆಟವಾಡಿದರು. 100 ರನ್ನಿಗೆ 18.4 ಓವರ್‌ ಬೇಕಾಯಿತು. ಕಾನ್ಪುರ ಟ್ರ್ಯಾಕ್‌ ಬ್ಯಾಟಿಂಗಿಗೆ ಸಹಕರಿಸಲಿದೆ ಎಂಬುದು ಖಾತ್ರಿಯಾದ ಬಳಿಕ ಬಿರುಸಿನ ಆಟಕ್ಕಿಳಿದರು. 200 ರನ್‌ 35.1 ಓವರ್‌ಗಳಿಂದ ಹರಿದು ಬಂತು.

ರೋಹಿತ್‌ ನಿರ್ಗಮನದ ಬಳಿಕ ಭಡ್ತಿ ಪಡೆದು ಬಂದ ಹಾರ್ದಿಕ್‌ ಪಾಂಡ್ಯ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 8 ರನ್‌ ಮಾಡಿ ವಾಪಸಾದರು. ಧೋನಿ 17 ಎಸೆತಗಳಿಂದ 25 ರನ್‌ ಬಾರಿಸಿದರೆ (3 ಬೌಂಡರಿ), ಅಂತಿಮ ಎಸೆತದಲ್ಲಿ ಔಟಾದ ಜಾಧವ್‌ 10 ಎಸೆತ ಎದುರಿಸಿ 18 ರನ್‌ ಹೊಡೆದರು (1 ಬೌಂಡರಿ, 1 ಸಿಕ್ಸರ್‌).

ನ್ಯೂಜಿಲ್ಯಾಂಡ್‌ ಪರ ಸೌಥಿ, ಮಿಲೆ° ಮತ್ತು ಸ್ಯಾಂಟ್ನರ್‌ ತಲಾ 2 ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಇಂಡಿಯಾ ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

thumb 3

2022 ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ಥಾನ!

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

arrested

ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

1-rwr

ಭಟ್ಕಳ : ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿಯಾದ ಅಂಬುಲೆನ್ಸ್ ;ರೋಗಿ ಪಾರು

ಎರತಯುಇಒಇಕಜಹಗ್

ಐತಿಹಾಸಿಕ ನೆಲೆಗಳ ಸಂರಕ್ಷ ಣೆ ಅಗತ್ಯ: ಎಡಿಸಿ ಬಾಲಕೃಷ್ಣ

eಟತಯುಯರಹ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.