ರೋಚಕ ಪಂದ್ಯ: ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

Team Udayavani, Sep 25, 2022, 10:39 PM IST

ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

ಹೈದರಾಬಾದ್‌: ಸೂರ್ಯಕುಮಾರ್‌ ಯಾದವ್‌ ಮತ್ತು ವಿರಾಟ್‌ ಕೊಹ್ಲಿ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಶೌರ್ಯದಿಂದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ರವಿವಾರದ ಹೈದರಾಬಾದ್‌ ಮುಖಾಮುಖಿಯನ್ನು ಟೀಮ್‌ ಇಂಡಿಯಾ 6 ವಿಕೆಟ್‌ಗಳಿಂದ ಗೆದ್ದಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 7 ವಿಕೆಟಿಗೆ 186 ಪೇರಿಸಿದರೆ, ಭಾರತ 19.5 ಓವರ್‌ಗಳಲ್ಲಿ 4 ವಿಕೆಟಿಗೆ 187 ರನ್‌ ಹೊಡೆದು ಜಯಭೇರಿ ಮೊಳಗಿಸಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಿದ್ದ ಭಾರತ ಆರಂಭಿಕರಿಬ್ಬರನ್ನು 4 ಓವರ್‌ ಆಗುವಷ್ಟರಲ್ಲಿ ಕಳೆದುಕೊಂಡಿತು. ರಾಹುಲ್‌ ಒಂದೇ ರನ್ನಿಗೆ ಆಟ ಮುಗಿಸಿದರೆ, ಸಿಡಿಯವ ಸೂಚನೆ ನೀಡಿದ ನಾಯಕ ರೋಹಿತ್‌ ಶರ್ಮ 17 ರನ್‌ ಮಾಡಿ ಔಟಾದರು. 30 ರನ್ನಿಗೆ 2 ವಿಕೆಟ್‌ ಬಿತ್ತು.

ಈ ಹಂತದಲ್ಲಿ ಜತೆಗೂಡಿದ ವಿರಾಟ್‌ ಕೊಹ್ಲಿ-ಸೂರ್ಯಕುಮಾರ್‌ ಯಾದವ್‌ ಆಸೀಸ್‌ ಬೌಲರ್‌ಗಳ ಮೇಲೆರಗಿ ಹೋದರು. ಇಬ್ಬರೂ ಸಿಡಿಲಬ್ಬರದ ಆಟವಾಡಿದರು. ಹತ್ತರ ಸರಾಸರಿಯಲ್ಲಿ ರನ್‌ ಪೇರಿಸುತ್ತ ಹೋದರು. 62 ಎಸೆತಗಳಲ್ಲಿ 104 ರನ್‌ ಒಟ್ಟುಗೂಡಿತು. ಸೂರ್ಯ ಕೇವಲ 36 ಎಸೆತಗಳಿಂದ 69 ರನ್‌ ಸಿಡಿಸಿದರು. 5 ಫೋರ್‌, 5 ಸಿಕ್ಸರ್‌ ಬಾರಿಸಿ ಭರಪೂರ ರಂಜನೆ ಒದಗಿಸಿದರು.

ಬಳಿಕ ಕೊಹ್ಲಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತಂದುಕೊಂಡರು. ಅಂತಿಮ ಓವರ್‌ನಲ್ಲಿ 11 ರನ್‌ ಅಗತ್ಯವಿದ್ದಾಗ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಭಾರತದ ಸವಾಲವನ್ನು ಸುಲಭಗೊಳಿಸಿದರು. ಕೊಹ್ಲಿ ಕೊಡುಗೆ 48 ಎಸೆತಗಳಿಂದ 63 ರನ್‌ (3 ಬೌಂಡರಿ, 4 ಸಿಕ್ಸರ್‌). ಪಾಂಡ್ಯ ಅಜೇಯ 25 ರನ್‌ ಮಾಡಿದರು.

ಆಸ್ಟ್ರೇಲಿಯ
ಕ್ಯಾಮರಾನ್‌ ಗ್ರೀನ್‌ ಸಿ ರಾಹುಲ್‌ ಬಿ ಭುವನೇಶ್ವರ್‌ 52
ಆರನ್‌ ಫಿಂಚ್‌ ಸಿ ಪಾಂಡ್ಯ ಬಿ ಅಕ್ಷರ್‌ 7
ಸ್ಟೀವನ್‌ ಸ್ಮಿತ್‌ ಸ್ಟಂಪ್ಡ್ ಕಾರ್ತಿಕ್‌ ಬಿ ಚಹಲ್‌ 9
ಗ್ಲೆನ್‌ ಮ್ಯಾಕ್ಸ್‌ವೆಲ್‌ ರನೌಟ್‌ 6
ಜೋಶ್‌ ಇಂಗ್ಲಿಸ್‌ ಸಿ ರೋಹಿತ್‌ ಬಿ ಅಕ್ಷರ್‌ 24
ಟಿಮ್‌ ಡೇವಿಡ್‌ ಸಿ ರೋಹಿತ್‌ ಬಿ ಹರ್ಷಲ್‌ 54
ಮ್ಯಾಥ್ಯೂ ವೇಡ್‌ ಸಿ ಮತ್ತು ಬಿ ಅಕ್ಷರ್‌ 1
ಡೇನಿಯಲ್‌ ಸ್ಯಾಮ್ಸ್‌ ಔಟಾಗದೆ 28
ಪ್ಯಾಟ್‌ ಕಮಿನ್ಸ್‌ ಔಟಾಗದೆ 0
ಇತರ 5
ಒಟ್ಟು (7 ವಿಕೆಟಿಗೆ) 186
ವಿಕೆಟ್‌ ಪತನ: 1-44, 2-62, 3-75, 4-84, 5-115, 6-117, 7-185.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 3-0-39-1
ಅಕ್ಷರ್‌ ಪಟೇಲ್‌ 4-0-33-3
ಜಸ್‌ಪ್ರೀತ್‌ ಬುಮ್ರಾ 4-0-50-0
ಹಾರ್ದಿಕ್‌ ಪಾಂಡ್ಯ 3-0-23-0
ಯಜುವೇಂದ್ರ ಚಹಲ್‌ 4-0-22-1
ಹರ್ಷಲ್‌ ಪಟೇಲ್‌ 2-0-18-1

ಭಾರತ
ಕೆ.ಎಲ್‌. ರಾಹುಲ್‌ ಸಿ ವೇಡ್‌ ಬಿ ಸ್ಯಾಮ್ಸ್‌ 1
ರೋಹಿತ್‌ ಶರ್ಮ ಸಿ ಸ್ಯಾಮ್ಸ್‌ ಬಿ ಕಮಿನ್ಸ್‌ 17
ವಿರಾಟ್‌ ಕೊಹ್ಲಿ ಸಿ ಫಿಂಚ್‌ ಬಿ ಸ್ಯಾಮ್ಸ್‌ 63
ಸೂರ್ಯಕುಮಾರ್‌ ಸಿ ಫಿಂಚ್‌ ಬಿ ಹೇಝಲ್‌ವುಡ್‌ 69
ಹಾರ್ದಿಕ್‌ ಪಾಂಡ್ಯ ಔಟಾಗದೆ 25
ದಿನೇಶ್‌ ಕಾರ್ತಿಕ್‌ ಔಟಾಗದೆ 1
ಇತರ 11
ಒಟ್ಟು (19.5 ಓವರ್‌ಗಳಲ್ಲಿ 4 ವಿಕೆಟಿಗೆ) 187
ವಿಕೆಟ್‌ ಪತನ: 1-5, 2-30, 3-134, 4-182.
ಬೌಲಿಂಗ್‌:
ಡೇನಿಯಲ್‌ ಸ್ಯಾಮ್ಸ್‌ 3.5-0-33-2
ಜೋಶ್‌ ಹೇಝಲ್‌ವುಡ್‌ 4-0-40-1
ಆ್ಯಡಂ ಝಂಪ 4-0-44-0
ಪ್ಯಾಟ್‌ ಕಮಿನ್ಸ್‌ 4-0-40-1
ಕ್ಯಾಮರಾನ್‌ ಗ್ರೀನ್‌ 3-0-14-0
ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-11-0

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.