ಆಸೀಸ್ ಬ್ಯಾಡ್ಮಿಂಟನ್: ಮನು ಅತ್ರಿ-ಸುಮಿತ್ ಔಟ್
Team Udayavani, May 13, 2018, 6:20 AM IST
ಸಿಡ್ನಿ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ಓಪನ್ ಬ್ಯಾಡ್ಮಿಂಟನ್ ಕೂಟದ ಪುರುಷರ ವಿಭಾಗದ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮನು ಅತ್ರಿ-ಸುಮಿತ್ ರೆಡ್ಡಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ಇವರು ಇಂಡೋನೇಶ್ಯದ ಬೆರ್ರಿ ಅಂಗ್ರಿಯವಾನ್-ಹಾರ್ಡಿಯಾಂಟೊ ವಿರುದ್ಧ 17-21, 15-21 ನೇರ ಗೇಮ್ಗಳ ಅಂತರದಿಂದ ಸೋಲು ಅನುಭವಿಸಿದರು.
ಇದರೊಂದಿಗೆ ಕೂಟದಲ್ಲಿ ಭಾರತದ ಹೋರಾಟಕ್ಕೆ ತೆರೆ ಬಿತ್ತು. ಸಮೀರ್ ವರ್ಮ ಹಾಗೂ ಬಿ. ಸಾಯಿ ಪ್ರಣೀತ್ ಶುಕ್ರವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಸೋತಿದ್ದರು.