ಆಸ್ಟ್ರೇಲಿಯ ವಿರುದ್ಧದ ಮೊದಲ 3 ಏಕದಿನಕ್ಕೆ ಇಂದು ತಂಡ ಪ್ರಕಟ

Team Udayavani, Sep 10, 2017, 7:50 AM IST

ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಮೊದಲ ಮೂರು ಏಕದಿನ ಪಂದ್ಯಗಳಿಗೆ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತೀಯ ತಂಡವನ್ನು ರವಿವಾರ ಆಯ್ಕೆ ಮಾಡಲಿದೆ. ಕೌಂಟಿಯಲ್ಲಿ ಆಡುತ್ತಿರುವ ಆಫ್ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ತಂಡವನ್ನು ಸೇರಿಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆಯಿದೆ.

ನಾಲ್ಕು ಪಂದ್ಯಗಳ ಒಪ್ಪಂದದಂತೆ ಅಶ್ವಿ‌ನ್‌ ಇದೀಗ ಇಂಗ್ಲಿಷ್‌ ಕೌಂಟಿ ವೊರ್ಸೆಸ್ಟರ್‌ಶೈರ್‌ ಪರ ಆಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ ಅಶ್ವಿ‌ನ್‌ ಆಡಿದ್ದಾರೆ. ಇನ್ನೆರಡು ಪಂದ್ಯ ಬಾಕಿ ಉಳಿದಿದೆ. ಅಶ್ವಿ‌ನ್‌ ಅವರ ಮುಂದಿನ ಪಂದ್ಯ ಸೆ. 12ರಿಂದ 15ರ ವರೆಗೆ ಲೆಸೆಸ್ಟರ್‌ಶೈರ್‌ ವಿರುದ್ಧ ಹಾಗೂ ನಾಲ್ಕನೇ ಪಂದ್ಯ ಸೆ. 25ರಿಂದ 28ರ ವರೆಗೆ ಡರ್ಹಾಂ ವಿರುದ್ಧ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ