ತಾಯಿಯಾಗಲಿದ್ದಾರೆ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ
Team Udayavani, Apr 24, 2018, 6:40 AM IST
ನವದೆಹಲಿ: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಶೀಘ್ರ ತಾಯಿಯಾಗಲಿದ್ದಾರೆ. ಸ್ವತಃ ಈ ಸುದ್ದಿಯನ್ನು ಟ್ವೀಟರ್‌ನಲ್ಲಿ ಸಾನಿಯಾ ಮಿರ್ಜಾ ಪ್ರಕಟಿಸಿದ್ದಾರೆ.
ಇವರು ಖ್ಯಾತ ಕ್ರಿಕೆಟಿಗ ಪಾಕಿಸ್ತಾನದ ಶೋಯಿಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಪಾಕ್ ಮಾಜಿ ನಾಯಕನ ಜತೆಗೆ ಮದುವೆಯಾಗಿದ್ದಕ್ಕೆ ಸಾನಿಯಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಇದೆಲ್ಲವನ್ನು ಮೀರಿ ಇವರಿಬ್ಬರು ಮದುವೆಯಾದರು. ಕೆಲ ತಿಂಗಳ ಹಿಂದೆಯಷ್ಟೇ ಕಾರ್ಯಕ್ರಮದಲ್ಲಿ ದಂಪತಿಗಳಿಬ್ಬರು ಮಾತನಾಡಿದ್ದರು. ಹೆಣ್ಣು ಮಗು ಹೊಂದುವ ಕನಸು ಇದೆ ಎಂದಿದ್ದರು. ಆ ಮಗುವಿಗೆ ಮಿರ್ಜಾ ಮಲಿಕ್ ಎಂದು ಹೆಸರಿಡಲಾಗುವುದು ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 2016ರಲ್ಲಿ ಸಾನಿಯಾ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತಕ್ಕೆ ಏರಿದ್ದರು. ಅಲ್ಲದೆ ಅನೇಕ ಕೂಟಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?
ಟೈಟಾನ್ಸ್-ರಾಯಲ್ಸ್; ಐಪಿಎಲ್ ಟೈಟಲ್ಗೆ ಬಿಗ್ ಫೈಟ್
ಮಹಿಳಾ ಟಿ20 ಚಾಲೆಂಜ್: ಸೂಪರ್ ನೋವಾಸ್ಗೆ ಪ್ರಶಸ್ತಿ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ