ಇಂಡಿಯನ್‌ ವೆಲ್ಸ್‌ ನಡಾಲ್‌, ಫೆಡರರ್‌ ಮುನ್ನಡೆ

Team Udayavani, Mar 12, 2019, 12:30 AM IST

ಇಂಡಿಯನ್‌ ವೆಲ್ಸ್‌: ವಿಶ್ವದ ನಂ. 2 ಆಟಗಾರ ರಫೆಲ್‌ ನಡಾಲ್‌ ಮತ್ತು ಸ್ವಿಸ್‌ ತಾರೆ ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ತೃತೀಯ ಸುತ್ತು ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ನಂ. ವನ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅನಾರೋಗ್ಯದಿಂದಾಗಿ ಕೂಟದಿಂದ ನಿರ್ಗಮಿಸಿದ್ದಾರೆ.

3 ಬಾರಿಯ “ಇಂಡಿಯನ್‌ ವೆಲ್ಸ್‌’ ಚಾಂಪಿಯನ್‌ ನಡಾಲ್‌ ಅಮೆರಿಕದ ಜೇರ್ಡ್‌ ಡೊನಾಲ್ಡ್‌ಸನ್‌ ಅವರನ್ನು 6-1, 6-1 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಪಂದ್ಯ ಕೇವಲ 72 ನಿಮಿಷಗಳಲ್ಲಿ ಕೊನೆಗೊಂಡಿತು. ಪ್ರಸಕ್ತ ಋತುವಿನಲ್ಲಿ 3ನೇ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ನಡಾಲ್‌, “ಆಸ್ಟ್ರೇಲಿಯನ್‌ ಓಪನ್‌’ ಫೈನಲ್‌ನಲ್ಲಿ ನೊವಾಕ್‌ ಜೊಕೋವಿಕ್‌ ವಿರುದ್ಧ ಸೋಲುನುಭವಿಸಿದ್ದರು. ಮೆಕ್ಸಿಕೊ ಓಪನ್‌ ಪಂದ್ಯಾವಳಿಯಿಂದ ಬಹಳ ಬೇಗ ನಿರ್ಗಮಿಸಿದ್ದರು.

ಮುಂದಿನ ಪಂದ್ಯದಲ್ಲಿ ನಡಾಲ್‌ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ಅವರನ್ನು ಎದುರಿಸಲಿದ್ದಾರೆ. ಅವರು ಸ್ಪೇನಿನ ರಾಬರ್ಟೊ ಕಾರ್‌ಬ್ರಲ್ಲೆಸ್‌ ವಿರುದ್ಧ 6-3, 6-1 ಸೆಟ್‌ಗಳ ಗೆಲುವು ದಾಖಲಿಸಿದರು. ಶಾರ್ಟ್ಸ್ಮನ್‌ ವಿರುದ್ಧ ನಡಾಲ್‌ 6-0 ಗೆಲುವಿನ ದಾಖಲೆ ಹೊಂದಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ರೋಜರ್‌ ಫೆಡರರ್‌ ಜರ್ಮನಿಯ ಪೀಟರ್‌ ಗೊಜೊವಿಕ್‌ ವಿರುದ್ಧ 6-1, 7-5 ನೇರ ಸೆಟ್‌ ಜಯ ಸಾಧಿಸಿದರು. ಫೆಡರರ್‌ ಅವರ ಮುಂದಿನ ಎದುರಾಳಿ ಸ್ವಿಜರ್‌ಲ್ಯಾಂಡಿನವರೇ ಆದ ಸ್ಟಾನಿಸ್ಲಾಸ್‌ ವಾವ್ರಿಂಕ. ಅವರು ಹಂಗೇರಿಯ ಮಾರ್ಟನ್‌ ಫ‌ುಕೊವಿಕ್ಸ್‌ ಅವರನ್ನು ಭಾರೀ ಹೋರಾಟದ ಆನಂತರ 6-4, 6-7 (5-7), 7-5ರಿಂದ ಸೋಲಿಸಿದರು.

ಸೆರೆನಾಗೆ ಉಸಿರಾಟ ತೊಂದರೆ
ವನಿತಾ ಸಿಂಗಲ್ಸ್‌ನಲ್ಲಿ ಗಾರ್ಬಿನ್‌ ಮುಗುರುಜಾ ವಿರುದ್ಧ 6-3, 1-0 ಮುನ್ನಡೆಯಲ್ಲಿದ್ದಾಗ ಉಸಿರಾಟದ ತೊಂದರೆ ಅನುಭವಿಸಿದ ಸೆರೆನಾ ವಿಲಿಯಮ್ಸ್‌ ಪಂದ್ಯವನ್ನು ತ್ಯಜಿಸಿ ಕೂಟದಿಂದ ಹೊರನಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ