ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ನಡಾಲ್‌, ಫೆಡರರ್‌

Team Udayavani, Mar 15, 2019, 12:55 AM IST

ಇಂಡಿಯನ್‌ ವೆಲ್ಸ್‌: ಮಾಜಿ ಚಾಂಪಿಯನ್‌ಗಳಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ವನಿತೆಯರ ವಿಭಾಗದಲ್ಲಿ ಬಿಯಾಂಕಾ ಆ್ಯಂಡ್ರಿಸ್ಕೂ, ಎಲಿನಾ ಸ್ವಿಟೋಲಿನಾ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

ಇಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ನಡಾಲ್‌ ಅರ್ಹತಾ ಆಟಗಾರ, ಸರ್ಬಿಯಾದ ಫಿಲಿಪ್‌ ಕ್ರೆಜಿವೋನಿಕ್‌ ವಿರುದ್ಧ ಒಂದು ಗಂಟೆ, 26 ನಿಮಿಷಗಳ ಹೋರಾಟ ನಡೆಸಿ 6-3, 6-4 ಅಂತರದಿಂದ ಜಯಿಸಿದರು.

2007, 2008 ಹಾಗೂ 2013ರಲ್ಲಿ ಪ್ರಶಸ್ತಿ ಜಯಿಸಿದ ನಡಾಲ್‌ ಕಳೆದ 3 ವರ್ಷಗಳಲ್ಲಿ ಎಂಟರ ಹಂತ ಪ್ರವೇಶಿಸಿದ್ದು ಇದೇ ಮೊದಲು. ಮುಂದಿನ ಪಂದ್ಯದಲ್ಲಿ ಅವರು ರಶ್ಯದ ಕರೆನ್‌ ಕಶನೋವ್‌ ಅವರನ್ನು ಎದುರಿಸಲಿದ್ದಾರೆ. ಕಶನೋವ್‌ 9ನೇ ರ್‍ಯಾಂಕಿನ ಜಾನ್‌ ಇಸ್ನರ್‌ ವಿರುದ್ಧ 6-4, 7-6 (7-1) ಸೆಟ್‌ಗಳಿಂದ ಜಯ ಸಾಧಿಸಿದರು.

6ನೇ ಪ್ರಶಸ್ತಿ ನಿರೀಕ್ಷೆಯಲ್ಲಿರುವ ರೋಜರ್‌ ಫೆಡರರ್‌ ಬ್ರಿಟನ್ನಿನ ಕೈಲ್‌ ಎಡ್ಮಂಡ್‌ ಅವರನ್ನು ಕೇವಲ 64 ನಿಮಿಷಗಳಲ್ಲಿ 6-1, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಇತ್ತೀಚೆಗಷ್ಟೇ 100ನೇ ಪ್ರಶಸ್ತಿ ಗೆದ್ದ ಉತ್ಸಾಹದಲ್ಲಿರುವ ಫೆಡರರ್‌ ಪೋಲೆಂಡ್‌ನ‌  ಹ್ಯೂಬರ್ಟ್‌ ಹರ್ಕಾಝ್ ಅವರನ್ನು ಎದುರಿಸಲಿದ್ದಾರೆ. ಅವರು ಡೆನ್ನಿಸ್‌ ಶಪೊವಲೋವ್‌ಗೆ 7-6 (7-3), 2-6, 6-3 ಅಂತರದಿಂದ ಆಘಾತವಿಕ್ಕಿದರು.ಒಂದು ವೇಳೆ ನಡಾಲ್‌, ಫೆಡರರ್‌ ಕ್ವಾರ್ಟರ್‌ ಪೈನಲ್‌ನಲ್ಲಿ ಗೆಲುವು ದಾಖಲಿಸಿದರೆ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆ ಇದೆ.

*ಮಿಯೋಮಿರ್‌, ಥೀಮ್‌ಗೆ ಜಯ
ಸರ್ಬಿಯಾದ 19 ವರ್ಷದ ಮಿಯೋಮಿರ್‌ ಕೆಮನೋವಿಕ್‌ ಮೊದಲ ಬಾರಿಗೆ ಕೂಟದ ಎಂಟರ ಹಂತ ಪ್ರವೇಶಿಸಿದ್ದಾರೆ. ಇಲ್ಲಿ ಅವರ ಎದುರಾಳಿ ಕೆನಡಾದ ಮಿಲೋಸ್‌ ರಾನಿಕ್‌. ಜಪಾನಿನ ಯೊಶಿಹಿಟೊ ನಿಶಿಯೋಕ ಗಾಯಾಳಾಗಿ ಹಿಂದೆ ಸರಿದ ಕಾರಣ ಕೆಮನೋವಿಕ್‌ ಮುನ್ನಡೆಯುವಂತಾಯಿತು. ಕ್ರೊವೇಶಿಯದ 40 ವರ್ಷದ ಐವೊ ಕಾರ್ಲೊವಿಕ್‌ ಆಟ ಕೊನೆಗೊಂಡಿದೆ. ಅವರು 7ನೇ ಶ್ರೇಯಾಂಕಿಯ ಡೊಮಿನಿಕ್‌ ಥೀಮ್‌ ವಿರುದ್ಧ 4-6, 3-6 ಸೆಟ್‌ಗಳಿಂದ ಪರಾಭವಗೊಂಡರು.

ಮುಗುರುಜಾ ಆಟಕ್ಕೆ ಬ್ರೇಕ್‌
ಕೆನಡಾದ ಯುವ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕೂ ಎರಡು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ ಅವರನ್ನು 6-0, 6-1 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಇಲ್ಲಿ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಜೆಕ್‌ ಗಣರಾಜ್ಯದ ಮಾರ್ಕೆಟಾ ವಾಂಡ್ರೋಸೊವಾ ಅವರನ್ನು 4-6, 6-4, 6-4ರಿಂದ ಹಿಮ್ಮೆಟ್ಟಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ