ಜೂ. 2ಕ್ಕೆ ಇಂಗ್ಲೆಂಡ್‌ ಪ್ರಯಾಣ : ಟೀಮ್‌ ಇಂಡಿಯಾಕ್ಕೆ ಕ್ವಾರಂಟೈನ್‌ ಟೈಮ್‌

Team Udayavani, May 19, 2021, 6:40 AM IST

ಜೂ. 2ಕ್ಕೆ ಇಂಗ್ಲೆಂಡ್‌ ಪ್ರಯಾಣ : ಟೀಮ್‌ ಇಂಡಿಯಾಕ್ಕೆ ಕ್ವಾರಂಟೈನ್‌ ಟೈಮ್‌

ಹೊಸದಿಲ್ಲಿ : ಇಂಗ್ಲೆಂಡ್‌ ಪ್ರವಾಸ ತೆರಳಲಿರುವ ಟೀಮ್‌ ಇಂಡಿಯಾದ ಪುರುಷ ಮತ್ತು ವನಿತಾ ಆಟಗಾರರು ಬುಧವಾರದಿಂದ ಮುಂಬಯಿಯಲ್ಲಿ ಎರಡು ವಾರಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಮುಂಬಯಿಯ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ ಮುಗಿದ ಬಳಿಕ ತಂಡ ಜೂನ್‌ 2ಕ್ಕೆ ಇಂಗ್ಲೆಂಡ್‌ಗೆ ತೆರಳಲಿದೆ. ಬಳಿಕ ಭಾರತೀಯ ಆಟಗಾರರು ಸೌತಾಂಪ್ಟನ್‌ನಲ್ಲಿ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಇದು ಜೂನ್‌ 12ಕ್ಕೆ ಕೊನೆಗೊಳ್ಳಲಿದೆ. ಈ ಮಧ್ಯೆ ತಂಡವನ್ನು ಸಣ್ಣ ವಿಭಾಗಗಳಾಗಿ ವಿಂಗಡಿಸಿ ಅಭ್ಯಾಸ ನಡೆಸಲು ಅನುಮತಿ ನೀಡಲಾಗಿದೆ.

ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತೀಯ ವನಿತಾ ಆಟಗಾರ್ತಿಯರೂ ಇದೇ ಕ್ವಾರಂಟೈನ್‌ ನಿಯಮ ಪಾಲಿಸಲಿದ್ದಾರೆ. ಮುಂಬಯಿಯಲ್ಲಿ ವಾಸವಿರುವ ತಂಡದ ನಾಯಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಕೋಚ್‌ ರವಿ ಶಾಸಿŒ ಮೊದಲಾದವರು ಶೀಘ್ರ ಮುಂಬಯಿ ಹೊಟೇಲ್‌ಗೆ ಆಗಮಿಸಲಿದ್ದಾರೆ.

ಜತೆಯಾಗಿ ಪ್ರಯಾಣ
ಕೊರೊನಾ ಸೋಂಕು ಹಾವಳಿಯಿಂದಾಗಿ ಇದೇ ಮೊದಲ ಬಾರಿಗೆ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ ತಂಡಗಳು ಜತೆಯಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿವೆ. ನ್ಯೂಜಿಲ್ಯಾಂಡ್‌ ವಿರುದ್ಧ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಆಡಲಾಗುವ ಟೆಸ್ಟ್‌ ಸರಣಿಗಾಗಿ ವಿರಾಟ್‌ ಪಡೆ ಪ್ರಯಾಣಿಸಿದರೆ, ಮಹಿಳಾ ತಂಡ ಇಂಗ್ಲೆಂಡ್‌ನ‌ಲ್ಲಿ ಸೀಮಿತ ಓವರ್‌ಗಳ ಸರಣಿ ಮತ್ತು ಏಕೈಕ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲು ಲಂಡನ್‌ಗೆ ತೆರಳಲಿದೆ.

ಕೊಹ್ಲಿ ಪಡೆ ಜೂ. 18ರಿಂದ ನ್ಯೂಜಿಲ್ಯಾಂಡ್‌ ವಿರುದ್ಧ ಸೌತಾಂಪ್ಟನ್‌ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಆಡಲಿದೆ. ಮಿಥಾಲಿ ರಾಜ್‌ ನೇತೃತ್ವದ ವನಿತಾ ತಂಡ ಜೂನ್‌ 15ರಿಂದ ಏಕೈಕ ಟೆಸ್ಟ್‌ ಮತ್ತು 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ತಂಡ 3 ಟಿ20 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡನ್ನು ಎದುರಿಸುತ್ತದೆ.

ವನಿತಾ ಕ್ರಿಕೆಟ್‌ ತಂಡದ ಆಸ್ಟ್ರೇಲಿಯ ಪ್ರವಾಸ
ಇಂಗ್ಲೆಂಡ್‌ ಪ್ರವಾಸ ಮುಗಿಸಿದ ಬಳಿಕ ಭಾರತದ ವನಿತಾ ಕ್ರಿಕೆಟ್‌ ತಂಡ ಆಸ್ಟ್ರೇಲಿಯಕ್ಕೆ ತೆರಳಲಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಇದೊಂದು ಪೂರ್ಣ ಪ್ರಮಾಣದ ಪ್ರವಾಸವಾಗಿದ್ದು, ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಾಗುವುದು. ಆಗ ಆಸ್ಟ್ರೇಲಿಯ ವಿರುದ್ಧ ಭಾರತ 2006ರ ಬಳಿಕ ಮೊದಲ ಸಲ ಟೆಸ್ಟ್‌ ಪಂದ್ಯವೊಂದನ್ನು ಆಡಿದಂತಾಗುತ್ತದೆ.
ಸೆಪ್ಟಂಬರ್‌ ನಡು ಭಾಗದಲ್ಲಿ ಈ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

tdy-4

ಬಂಧನ ವೇಳೆ ಮಲ್ಯ, ನೀರಜ್‌ ಹೆಸರು ಹೇಳಿದ ವಂಚಕ!

ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು

ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು

tdy-3

ಮೊದಲ ಬಾರಿ ಮಗಳ ಮುಖ ರಿವೀಲ್‌ ಮಾಡಿದ ಪಿಂಕಿ: ವೈರಲ್‌ ಆಯಿತು ಕ್ಯೂಟ್‌ ಮಾಲ್ತಿ ಫೋಟೋ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

tdy-1

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

1-sadsad

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್‌

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

ವನಿತಾ ಟಿ20 ತ್ರಿಕೋನ ಸರಣಿ: ಭಾರತ ತಂಡದ ಅಜೇಯ ಅಭಿಯಾನ

ವನಿತಾ ಟಿ20 ತ್ರಿಕೋನ ಸರಣಿ: ಭಾರತ ತಂಡದ ಅಜೇಯ ಅಭಿಯಾನ

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರುಳಿ ವಿಜಯ್

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

tdy-4

ಬಂಧನ ವೇಳೆ ಮಲ್ಯ, ನೀರಜ್‌ ಹೆಸರು ಹೇಳಿದ ವಂಚಕ!

ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು

ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು

tdy-3

ಮೊದಲ ಬಾರಿ ಮಗಳ ಮುಖ ರಿವೀಲ್‌ ಮಾಡಿದ ಪಿಂಕಿ: ವೈರಲ್‌ ಆಯಿತು ಕ್ಯೂಟ್‌ ಮಾಲ್ತಿ ಫೋಟೋ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

tdy-1

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.