Udayavni Special

ಭಾರತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌!

Team Udayavani, Jan 24, 2021, 7:00 AM IST

ಭಾರತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌!

ಭಾರತದ ವೇಗದ ಬೌಲಿಂಗ್‌ ಎನ್ನುವುದು ಲೆಕ್ಕದ ಭರ್ತಿಗೆ ಎಂಬಂತಿದ್ದ ಕಾಲವದು. ಸ್ಪಿನ್‌ ಚತುಷ್ಟಯರಾದ ಚಂದ್ರಶೇಖರ್‌, ಪ್ರಸನ್ನ, ಬೇಡಿ ಮತ್ತು ವೆಂಕಟರಾಘವನ್‌ ಎದುರಾಳಿಗಳನ್ನು ನಡುಗಿಸುತ್ತಿದ್ದಾಗ ಯಾರಾದರೊಬ್ಬರು ಶಾಸ್ತ್ರಕ್ಕೆಂಬಂತೆ ವೇಗದ ಬೌಲಿಂಗ್‌ ಆರಂಭಿಸಿ ಅಷ್ಟೇ ಬೇಗ ಮರೆಯಾಗಿ ಬಿಡುತ್ತಿದ್ದರು.

ಆದರೆ ಕಾಲ ಬದಲಾಗಿದೆ. ಸ್ಪಿನ್‌ ತವರಾದ ಭಾರತದಲ್ಲಿ ಈಗ ವೇಗಿಗಳೇ ಬಹುಸಂಖ್ಯಾತ ರಾಗಿದ್ದಾರೆ. ಇದಕ್ಕೆ ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯುತ್ತಮ ನಿದರ್ಶನ ಸಿಕ್ಕಿತು.

ಆಸೀಸ್‌ ಪ್ರವಾಸಕ್ಕೂ ಮುನ್ನ ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬಮ್ರಾ ಟೀಮ್‌ ಇಂಡಿಯಾದ ಪ್ರಧಾನ ವೇಗಿಗಳಾಗಿದ್ದರು. ಆದರೆ ಕಾಂಗರೂ ನಾಡಿನ ಪ್ರವಾಸ ಮುಗಿದ ಬಳಿಕ ಈ ಯಾದಿ ಸಂಪೂರ್ಣ ಬದಲಾಗಿತ್ತು. ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಟಿ. ನಟರಾಜನ್‌, ನವದೀಪ್‌ ಸೈನಿ ಹೆಸರು ಮುನ್ನೆಲೆಗೆ ಬಂತು. ಯುವ ವೇಗಿಗಳ ಸಮರ್ಥ ಪಡೆಯೊಂದು ಭವಿಷ್ಯದ ಪಾಲಿನ ಆಶಾಕಿರಣವಾಗಿ ಗೋಚರಿಸಿದೆ.

ಇನ್ನೀಗ ಇಂಗ್ಲೆಂಡ್‌ ಎದುರಿನ ತವರಿನ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. ಎರಡು ತಂಡಗಳಿಗಾಗುವಷ್ಟು ವೇಗದ ಬೌಲರ್ ಇರುವುದರಿಂದ ಆಯ್ಕೆ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ. ಚೇತನ್‌ ಶರ್ಮ ನೇತೃತ್ವದ ಆಯ್ಕೆ ಸಮಿತಿ ತಂಡವನ್ನೇನೋ ಅಂತಿಮಗೊಳಿಸಿದೆ. ಇನ್ನಿರುವುದು ಹನ್ನೊಂದರ ಬಳಗದ ಆಯ್ಕೆ ಕಸರತ್ತು!

ರೇಸ್‌ನಲ್ಲಿ 9 ವೇಗಿಗಳು! :

ಏಶ್ಯದ ಆಚೆ ಟೆಸ್ಟ್‌ ಪಂದ್ಯಗಳನ್ನು ಗೆಲ್ಲಬೇಕಾದರೆ ತಂಡದ ವೇಗದ ಬೌಲಿಂಗ್‌ ವಿಭಾಗ ಸಮರ್ಥವಾಗಿ ರಬೇಕು ಹಾಗೂ ಇದರಲ್ಲಿ ವೆರೈಟಿ ಇರಬೇಕು ಎಂಬುದೊಂದು ಸಾಮಾನ್ಯ ಅನಿಸಿಕೆ. ಎಲ್ಲಕ್ಕಿಂತ ಮಿಗಿಲಾದದ್ದು, ಎದುರಾಳಿಯ 20 ವಿಕೆಟ್‌ಗಳನ್ನು ಉರುಳಿಸುವ ಸಾಮರ್ಥ್ಯ. ಪ್ರಧಾನ ವೇಗಿಗಳ ಗೈರಲ್ಲಿ ಭಾರತದ ಯುವ ಬೌಲರ್ ಕಾಂಗರೂ ನಾಡಿನಲ್ಲಿ ಇದನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದ್ದು ಈಗ ಇತಿಹಾಸ.

ಹೀಗೆ ಟೀಮ್‌ ಇಂಡಿಯಾದ ವೇಗಿಗಳ ಸಂಖ್ಯೆ ಯಲ್ಲಿ ದಿಢೀರ್‌ ಏರಿಕೆಯಾಗಿದೆ. ಒಬ್ಬಿಬ್ಬರಲ್ಲ, ಒಟ್ಟು 9 ಮಂದಿ ಬೌಲರ್ ಏಕಕಾಲದಲ್ಲಿ ತಂಡವನ್ನು ಪ್ರತಿನಿಧಿಸಬಹುದಾದಷ್ಟು ಹೆಚ್ಚಳ ಇದಾಗಿದೆ. ಭಾರ ತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌ ಆಗಿದೆ!

ವೇಗಿಗಳೇಕೆ ಹೆಚ್ಚಿದರು? :

ಭಾರತದಲ್ಲಿ ವೇಗಿಗಳ ಸಂಖ್ಯೆ ದಿಢೀರ್‌ ಹೆಚ್ಚಲು ಮುಖ್ಯ ಕಾರಣ ಕಿರಿಯರ ವಿಶ್ವ ಮಟ್ಟದ ಕೂಟಗಳು. ಮುಖ್ಯವಾಗಿ ಅಂಡರ್‌-19 ಸರಣಿ, ವಿಶ್ವಕಪ್‌ ಇತ್ಯಾದಿ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ವಿಂಡೀಸ್‌ ಮೊದಲಾದ ಫಾಸ್ಟ್‌ ಟ್ರ್ಯಾಕ್‌ ನಾಡಿನಲ್ಲಿ ಆಡಲಾದ ಸರಣಿಗಳ ಪಾಲೂ ದೊಡ್ಡದಿದೆ. ಸಿಕ್ಕಿದ ಅವಕಾಶವನ್ನು ಎಲ್ಲರೂ ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ತಮ್ಮ ಸಾಮರ್ಥ್ಯವನ್ನು ಸೀನಿಯರ್‌ ತಂಡದೊಂದಿಗೂ ಸಾಬೀತು ಪಡಿಸಿದರು. ಈ ಟ್ರೆಂಡ್‌ ಮುಂದುವರಿಯಬೇಕಿದೆ.

ಏಶ್ಯದ ಆಚೆ ಬೇಕಿತ್ತು ಗೆಲುವು :

“ಇದೊಂದು ಆರೋಗ್ಯಕರ ಬೆಳವಣಿಗೆ. ಇದಕ್ಕಾಗಿ ನಾವು ಕಳೆದ ಮೂರು ವರ್ಷಗಳಿಂದ ಯೋಜನೆ ರೂಪಿಸುತ್ತಲೇ ಇದ್ದೆವು. ಏಶ್ಯದ ಆಚೆ ಟೆಸ್ಟ್‌ ಪಂದ್ಯಗಳನ್ನು ಗೆಲ್ಲುವುದು ನಮಗೆ ಮುಖ್ಯವಾಗಿತ್ತು. ಇದೀಗ ಸಾಕಾರಗೊಂಡಿದೆ. ನಮ್ಮ ಮೀಸಲು ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಆವರ್ತನ ಪದ್ಧತಿಗಂತೂ ಇದು ಬಹಳ ಪ್ರಯೋಜನಕಾರಿ’ ಎಂಬುದು ಬೌಲಿಂಗ್‌ ಕೋಚ್‌ ಬಿ. ಅರುಣ್‌ ಹೇಳಿಕೆ.

ಟಾಪ್ ನ್ಯೂಸ್

rahul

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಹ್ಮದಾಬಾದ್‌ ಟೆಸ್ಟ್‌ : ಇಂಗ್ಲೆಂಡ್‌ ಗೆಲುವಿಗೆ ಆಸ್ಟ್ರೇಲಿಯ ಕಾತರ!

ಅಹ್ಮದಾಬಾದ್‌ ಟೆಸ್ಟ್‌ : ಇಂಗ್ಲೆಂಡ್‌ ಗೆಲುವಿಗೆ ಆಸ್ಟ್ರೇಲಿಯ ಕಾತರ!

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

MUST WATCH

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಹೊಸ ಸೇರ್ಪಡೆ

rahul

ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ

astrology

ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ಕಾಂಗ್ರೆಸ್‌ನಲ್ಲಿ ತಳಮಳ : ಸಿದ್ದರಾಮಯ್ಯ ಕೋಪ ತಣಿಸಲು ಹೈಕಮಾಂಡ್‌ ಪ್ರಯತ್ನ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ನಾಳೆಯಿಂದ ಬಜೆಟ್‌ ಅಧಿವೇಶನ : ಸಿ.ಡಿ. ಬಾಂಬ್‌, ಮೀಸಲಾತಿ ಸದ್ದಿನ ನಿರೀಕ್ಷೆ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

ವ್ಯಕ್ತಿ ನಿರ್ಮಾಣವೇ ಸಂಘದ ಪರಮಗುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.