ಧವನ್‌ ಪಕ್ಕೆಲುಬಿಗೆ ಏಟು, ರೋಹಿತ್ ಗೂ ಗಾಯ

Team Udayavani, Jan 18, 2020, 4:48 PM IST

ರಾಜ್‌ ಕೋಟ್‌; ದ್ವಿತೀಯ ಏಕದಿನ ಪಂದ್ಯದ ಬ್ಯಾಟಿಂಗ್‌ ವೇಳೆ ಶಿಖರ್‌ ಧವನ್‌ ಅವರ ಪಕ್ಕೆಲುಬಿಗೆ ಚೆಂಡಿನೇಟು ಬಿದ್ದಿದೆ. ಹೀಗಾಗಿ ಅವರು ಕ್ಷೇತ್ರರಕ್ಷಣೆಗೆ ಇಳಿಯಲಿಲ್ಲ. ಧವನ್‌ ಬದಲು ಯಜುವೇಂದ್ರ ಚಹಲ್‌ ಫಿಲ್ಡಿಂಗ್‌ ನಡೆಸಿದರು.

ಕಾಕತಾಳೀಯವೆಂಬಂತೆ, ಮುಂಬಯಿಯಲ್ಲಿ ರಿಷಭ್‌ ಪಂತ್‌ ಅವರಿಗೆ ಬೌನ್ಸರ್‌ ಎಸೆದು ಏಟು ಮಾಡಿದ ಪ್ಯಾಟ್‌ ಕಮಿನ್ಸ್‌ ಅವರೇ ರಾಜ್‌ ಕೋಟ್‌ ನಲ್ಲಿ ಧವನ್‌ಗೆ ಕಂಟಕವಾಗಿ ಕಾಡಿದರು.

ಪಂದ್ಯದ 10ನೇ ಓವರಿನಲ್ಲಿ ಇವರೆಸೆದ ಬೌನ್ಸರ್‌ ವೇಳೆ ಚೆಂಡು ಧವನ್‌ ಅವರ ಬಲ ಪಕ್ಕೆಲುಬಿಗೆ ಹೋಗಿ ಬಡಿಯಿತು. ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆದರು. ಆದರೆ ನೋವಿನಲ್ಲೇ ಬ್ಯಾಟಿಂಗ್‌ ಮುಂದುವರಿಸಿದರು. ಔಟಾದ ಬಳಿಕ ಸಿಟಿ ಸ್ಕ್ಯಾನ್‌ ನಡೆಸಲಾಯಿತು.

ವಿಶ್ವಕಪ್‌ ವೇಳೆ ಆಸ್ಟ್ರೇಲಿಯ ಎದುರಿನ ಲೀಗ್‌ ಪಂದ್ಯದಲ್ಲೂ ಧವನ್‌ ಗಾಯಾಳಾಗಿದ್ದರು. ನಥನ್‌ ಕೋಲ್ಟರ್‌ ನೈಲ್‌ ಅವರ ಎಸೆತವೊಂದಕ್ಕೆ ಕೈಬೆರಳಿನ ಮೂಳೆ ಮುರಿತಕ್ಕೆ ಸಿಲುಕಿ ಕೂಟದಿಂದಲೇ ಬೇರ್ಪಡುವ ಸಂಕಟಕ್ಕೆ ಸಿಲುಕಿದ್ದರು.

ಫೀಲ್ಡಿಂಗ್ ನಡೆಸುವ ವೇಳೆ ರೋಹಿತ್ ಶರ್ಮಾ ಕೂಡಾ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಚೆಂಡನ್ನು ತಡೆಯಲು ಡೈವ್ ಹಾಕಿದ ಶರ್ಮಾ ನಂತರ ಎಡಗೈಯನ್ನು ಹಿಡಿದುಕೊಂಡು ನೋವಿನಿಂದ ಮೇಲೆದ್ದರು.

ಯಾವುದೇ ಗಂಭೀರ ಪ್ರಮಾಣದ ಗಾಯವಾಗಿಲ್ಲ ಎಂದು ವಿರಾಟ್ ಕೊಹ್ಲಿ ಪಂದ್ಯದ ನಂತರ ತಿಳಿಸಿದ್ದು, ಮುಂದಿನ ಪಂದ್ಯಕ್ಕೆ ರೋಹಿತ್ ಲಭ್ಯವಾಗುವ ನಿರೀಕ್ಷೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...