ಇಂದು ಟೀಮ್ ಇಂಡಿಯಾ ಕ್ರಿಕೆಟ್ ಕೋಚ್ ಸಂದರ್ಶನ
ಶಾಸ್ತ್ರಿಯೇ ಮುಂದುವರಿಯುವ ಸಾಧ್ಯತೆ
Team Udayavani, Aug 16, 2019, 5:57 AM IST
ಮುಂಬಯಿ: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಒಳಗೊಂಡ ತ್ರಿಸದಸ್ಯ ಕ್ರಿಕೆಟ್ ಸಲಹೆ ಸಮಿತಿ (ಸಿಎಸಿ) ಭಾರತೀಯ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಕಿರುಪಟ್ಟಿಯಲ್ಲಿ ಹೆಸರಿಸಲಾಗಿರುವ 6 ಮಂದಿ ಮಾಜಿ ಕ್ರಿಕೆಟಿಗರನ್ನು ಶುಕ್ರವಾರ ಸಂದರ್ಶನ ನಡೆಸಲಿದೆ.
ಹಾಲಿ ಕೋಚ್ ರವಿ ಶಾಸ್ತ್ರಿ, ಆಸ್ಟ್ರೇಲಿಯದ ಟಾಮ್ ಮೂಡಿ, ನ್ಯೂಜಿಲ್ಯಾಂಡಿನ ಮಾಜಿ ಕ್ರಿಕೆಟಿಗ ಮೈಕ್ ಹೆಸನ್, ಭಾರತ ಮಾಜಿ ಕ್ರಿಕೆಟಿಗ ಲಾಲ್ಚಂದ್ ರಜಪೂತ್, ಮುಂಬೈ ಇಂಡಿಯನ್ಸ್ ಮಾಜಿ ಕೋಚ್ ರಾಬಿನ್ ಸಿಂಗ್, ವೆಸ್ಟ್ ಇಂಡೀಸ್ನ ಫಿಲ್ ಸಿಮನ್ಸ್ ಹೆಸರು ಕಿರುಪಟ್ಟಿಯಲ್ಲಿದೆ.
ವೀಡಿಯೋ ಕಾಲ್
ಇವರಲ್ಲಿ ಕೆಲವರ ಸಂದರ್ಶನ ವೀಡಿಯೋ ಕಾಲ್ ಮತ್ತು ಸ್ಕೈಪ್ ಮೂಲಕ ನಡೆಯಲಿದೆ. ರವಿ ಶಾಸ್ತ್ರಿ ಸದ್ಯ ವೆಸ್ಟ್ ಇಂಡೀಸ್ನಲ್ಲಿರುವುದರಿಂದ ಇವರು ಸಂದರ್ಶನಕ್ಕೆ ಹಾಜರಾಗುವುದಿಲ್ಲ.
ಸಿಎಸಿಯಲ್ಲಿರುವ ಉಳಿದಿಬ್ಬರು ಸದಸ್ಯರೆಂದರೆ, ಕರ್ನಾಟಕದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತೂಬ್ಬರು ಮಾಜಿ ಆರಂಭಕಾರ ಅಂಶುಮಾನ್ ಗಾಯಕ್ವಾಡ್.
ಸದ್ಯ ರವಿ ಶಾಸ್ತ್ರಿ ಹೆಸರು ದೊಡ್ಡದಾಗಿ ಕೇಳಿ ಬರುತ್ತಿದೆ. ಇವರನ್ನೇ ಕೋಚ್ ಆಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ರವಿ ಶಾಸ್ತ್ರಿ ಬಗ್ಗೆ ಒಲವು ಹೊಂದಿರುವುದು ರಹಸ್ಯವೇನಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ