3 ರನ್ನಿನಿಂದ ಗೆದ್ದು ನಾಲ್ಕಕ್ಕೇರಿದ ಮುಂಬೈ


Team Udayavani, May 18, 2018, 6:55 AM IST

pti5162018000236a.jpg

ಮುಂಬಯಿ: ಐಪಿಎಲ್‌ ಲೀಗ್‌ ಹಂತ ಮುಗಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್‌ ತಂಡದ ಪ್ರಗತಿಯ ಗ್ರಾಫ್ ಏರುವುದು 2018ರಲ್ಲೂ ಕಂಡುಬಂದಿದೆ. ಬುಧವಾರ ರಾತ್ರಿ ತವರಿನ ವಾಂಖೇಡೆಯಲ್ಲಿ ಏರ್ಪಟ್ಟ “ಬಿಗ್‌ ಫೈಟ್‌’ ವೇಳೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ 3 ರನ್‌ ಸೋಲುಣಿಸುವಲ್ಲಿ ಯಶಸ್ವಿಯಾದ ರೋಹಿತ್‌ ಪಡೆ ಮತ್ತೆ 4ನೇ ಸ್ಥಾನಕ್ಕೇರಿದೆ. ಪಂಜಾಬ್‌ ಆರಕ್ಕೆ ಕುಸಿದಿದೆ.

ಇದೊಂದು ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 8ಕ್ಕೆ 186 ರನ್‌ ಗಳಿಸಿದರೆ, ಪಂಜಾಬ್‌ 5ಕ್ಕೆ 183 ರನ್‌ ಮಾಡಿ ಸ್ವಲ್ಪದರಲ್ಲೇ ಎಡವಿತು. ಬಹುಮೂಲ್ಯ ಎರಡಂಕವನ್ನು  
ಕಳೆದುಕೊಂಡಿತು. 7 ವಿಕೆಟ್‌ ನೆರವಿನಿಂದ ಅಂತಿಮ 2 ಓವರ್‌ಗಳಲ್ಲಿ 23 ರನ್‌ ತೆಗೆಯುವ ಸವಾಲು ಪಂಜಾಬ್‌ ಮುಂದಿತ್ತು. 90ರ ಗಡಿ ದಾಟಿದ್ದ ರಾಹುಲ್‌ ಕ್ರೀಸ್‌ನಲ್ಲಿದ್ದುರಿಂದ ಪಂಜಾಬ್‌ಗ ಉತ್ತಮ ಅವಕಾಶವಿತ್ತು. ಆದರೆ 19ನೇ ಓವರ್‌ ಎಸೆದ ಬುಮ್ರಾ ಕೇವಲ 6 ರನ್‌ ನೀಡಿ ರಾಹುಲ್‌ ವಿಕೆಟ್‌ ಹಾರಿಸುವುದರೊಂದಿಗೆ ಮುಂಬೈಗೆ ಮೇಲುಗೈ ಒದಗಿಸಿದರು. ಅಂತಿಮ ಓವರ್‌ ಮೆಕ್ಲೆನಗನ್‌ ಪಾಲಾಯಿತು. ಪಂಜಾಬ್‌ಗ 17 ರನ್‌ ಅಗತ್ಯವಿತ್ತು. ಯುವರಾಜ್‌ ವೈಫ‌ಲ್ಯ ಮುಂದುವರಿಯಿತು. ಅವರು 3ನೇ ಎಸೆತದಲ್ಲಿ ಔಟಾದ ಬಳಿಕ ಅಕ್ಷರ್‌ ಪಟೇಲ್‌ ಸಿಕ್ಸರ್‌, ಮನೋಜ್‌ ತಿವಾರಿ ಬೌಂಡರಿ ಬಾರಿಸಿದರೂ ತಂಡ ದಡ ತಲುಪಲಿಲ್ಲ.

ಪೊಲಾರ್ಡ್‌, ಬುಮ್ರಾ ಸಾಹಸ
“ಕಳೆದ ಕೆಲವು ವರ್ಷಗಳಿಂದ ಇಂಥದೊಂದು ಪರಿಸ್ಥಿತಿ ಮರುಕಳಿಸುತ್ತಿದೆ. ನಾವು ಕೊನೆಯ ಹಂತದಲ್ಲಿ ತೀವ್ರ ಒತ್ತಡದ ನಡುವೆಯೂ ಗೆಲುವಿನ ಲಯ ಸಾಧಿಸಿ ಮೇಲೆದ್ದು ಬರುತ್ತಿದ್ದೇವೆ. ಇದು ಕೂಡ ಇಂಥದೇ ಒಂದು ಸನ್ನಿವೇಶ. ನಾವೀಗ ಪ್ಲೇ-ಆಫ್ ರೇಸ್‌ನಲ್ಲಿದ್ದೇವೆ ಎಂಬುದೇ ಅತ್ಯಂತ ಖುಷಿಯ ಸಂಗತಿ…’ ಎಂದು ಮುಂಬೈ ತಂಡದ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ.

“ಇದೊಂದು ದೊಡ್ಡ ಮೊತ್ತದ ಫೈಟ್‌ ಆಗಿತ್ತು. ನಡುವಲ್ಲಿ ನಮ್ಮ ಬ್ಯಾಟಿಂಗ್‌ ತುಸು ನಿಧಾನಗೊಂಡಿತು. ಇಲ್ಲವಾದರೆ ಇನ್ನೂ 15-20 ರನ್‌ ಗಳಿಸಬಹುದಿತ್ತು. ಪೊಲಾರ್ಡ್‌ ಪ್ರಯತ್ನಕ್ಕೊಂದು ಸಲಾಂ. ಅವರು ಯಾವತ್ತೂ ನಮ್ಮ ಪಾಲಿನ ಮ್ಯಾಚ್‌ ವಿನ್ನರ್‌. ಅವರಿಗೆ ಮತ್ತೂಂದು ಅವಕಾಶ ನೀಡಬೇಕೆಂದು ನಾವು ಯೋಚನೆ ಮಾಡುತ್ತಲೇ ಇದ್ದೆವು. ಪಂಜಾಬ್‌ ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಬಗ್ಗೆ ಎರಡು ಮಾತಿಲ್ಲ. ಇಂಥ ಸಂದರ್ಭದಲ್ಲಿ ಎಷ್ಟೇ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳುವುದೂ ಕಠಿನವಾಗುತ್ತದೆ. ಆದರೆ ನಮ್ಮ ಬೌಲರ್‌ಗಳು ಇದರಲ್ಲಿ ಅಮೋಘ ಯಶಸ್ಸು ಸಾಧಿಸಿದರು. ಬುಮ್ರಾಗೆ ಸ್ಪೆಷಲ್‌ ಅಭಿನಂದನೆಗಳು ಸಲ್ಲಬೇಕು’ ಎಂದರು.

ಅದೃಷ್ಟವೇ ಕೈ ಹಿಡಿಯಬೇಕು
“ಈ ಸಂದರ್ಭದಲ್ಲಿ ಎಲ್ಲ ಕಡೆಯೂ ಶೂನ್ಯ ಆವರಿಸಿದಂತಾಗಿದೆ’ ಎಂದು ತೀವ್ರ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ ಪಂಜಾಬ್‌ ನಾಯಕ ಆರ್‌. ಅಶ್ವಿ‌ನ್‌.”ನಾವು ಯಶಸ್ವಿ ಚೇಸಿಂಗ್‌ನತ್ತ ಸಾಗುತ್ತಿದ್ದೆವು. ನಮ್ಮದು ವೃತ್ತಿಪರ ಬ್ಯಾಟಿಂಗ್‌ ಲೈನ್‌ಅಪ್‌ ಆಗಿತ್ತು. ರಾಹುಲ್‌ ಅಮೋಘ ಲಯದಲ್ಲಿದ್ದರು. ಆದರೆ ಕೊನೆಯಲ್ಲಿ ಇದು ವರ್ಕ್‌ಔಟ್‌ ಆಗದೇ ಹೋಯಿತು. ಬುಮ್ರಾ ತಾನೆಷ್ಟು ಅಪಾಯಕಾರಿ ಬೌಲರ್‌ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದರು. ನಮಗಿನ್ನು ಅದೃಷ್ಟವೇ ಕೈ ಹಿಡಿಯಬೇಕು…’ ಎಂದರು.

ಸ್ಕೋರ್‌ಪಟ್ಟಿ
* ಮುಂಬೈ ಇಂಡಿಯನ್ಸ್‌    8 ವಿಕೆಟಿಗೆ 186
* ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ.ಎಲ್‌. ರಾಹುಲ್‌    ಸಿ ಕಟಿಂಗ್‌ ಬಿ ಬುಮ್ರಾ    94
ಕ್ರಿಸ್‌ ಗೇಲ್‌    ಸಿ ಕಟಿಂಗ್‌ ಬಿ ಮೆಕ್ಲೆನಗನ್‌    18
ಆರನ್‌ ಫಿಂಚ್‌    ಸಿ ಹಾರ್ದಿಕ್‌ ಬಿ ಬುಮ್ರಾ    46
ಮಾರ್ಕಸ್‌ ಸ್ಟೊಯಿನಿಸ್‌    ಸಿ ಇಶಾನ್‌ ಬಿ ಬುಮ್ರಾ    1
ಅಕ್ಷರ್‌ ಪಟೇಲ್‌    ಔಟಾಗದೆ    10
ಯುವರಾಜ್‌ ಸಿಂಗ್‌    ಸಿ ಲೆವಿಸ್‌ ಬಿ ಮೆಕ್ಲೆನಗನ್‌    1
ಮನೋಜ್‌ ತಿವಾರಿ    ಔಟಾಗದೆ    4
ಇತರ        9
ಒಟ್ಟು  (20 ಓವರ್‌ಗಳಲ್ಲಿ 5 ವಿಕೆಟಿಗೆ)        183
ವಿಕೆಟ್‌ ಪತನ: 1-34, 2-145, 3-149, 4-167, 5-172.
ಬೌಲಿಂಗ್‌:
ಮಿಚೆಲ್‌ ಮೆಕ್ಲೆನಗನ್‌        4-0-37-2
ಜಸ್‌ಪ್ರೀತ್‌ ಬುಮ್ರಾ        4-0-15-3
ಹಾರ್ದಿಕ್‌ ಪಾಂಡ್ಯ        4-0-42-0
ಕೃಣಾಲ್‌ ಪಾಂಡ್ಯ        4-0-36-0
ಮಾಯಾಂಕ್‌ ಮಾರ್ಕಂಡೆ        3-0-34-0
ಬೆನ್‌ ಕಟಿಂಗ್‌        1-0-15-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಆ್ಯಂಡ್ರೂé ಟೈ ಐಪಿಎಲ್‌ ಋತುವೊಂದರಲ್ಲಿ ಅತ್ಯಧಿಕ 3 ಸಲ ಪಂದ್ಯವೊಂದರಲ್ಲಿ 4 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದರು. ಆದರೆ ಈ ಎಲ್ಲ ಸಂದರ್ಭದಲ್ಲೂ ಅವರ ತಂಡ ಸೋಲನುಭವಿಸಿತು!

ಟೈ ಐಪಿಎಲ್‌ನಲ್ಲಿ ಅತ್ಯಧಿಕ ಸಲ 4 ಪ್ಲಸ್‌ ವಿಕೆಟ್‌ ಕಿತ್ತವರ ಯಾದಿಯಲ್ಲಿ 3ನೇ ಸ್ಥಾನ ಅಲಂಕರಿಸಿದರು. ಸುನೀಲ್‌ ನಾರಾಯಣ್‌ (7), ಲಸಿತ ಮಾಲಿಂಗ (5) ಮೊದಲೆರಡು ಸ್ಥಾನದಲ್ಲಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಐಪಿಎಲ್‌ನಲ್ಲಿ 2ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷ ವಾಂಖೇಡೆ ಪಂದ್ಯದಲ್ಲೇ ಹೈದರಾಬಾದ್‌ ವಿರುದ್ಧ 24ಕ್ಕೆ 3 ವಿಕೆಟ್‌ ಉರುಳಿಸಿ ಮೊದಲ ಸಲ ಪಂದ್ಯಶ್ರೇಷ್ಠರಾಗಿದ್ದರು.

ಪಂಜಾಬ್‌ ರನ್‌ ಅಂತರದಲ್ಲಿ 2ನೇ ಸಣ್ಣ ಸೋಲನ್ನು ಅನುಭವಿಸಿತು (3 ರನ್‌). 2016ರಲ್ಲಿ ಆರ್‌ಸಿಬಿ ವಿರುದ್ಧ ಒಂದು ರನ್ನಿನಿಂದ ಸೋತದ್ದು ಪಂಜಾಬ್‌ನ ಈವರೆಗಿನ ಅತೀ ಸಣ್ಣ ಅಂತರದ ಸೋಲು.

ಕೆ.ಎಲ್‌. ರಾಹುಲ್‌ 94 ರನ್‌ ಬಾರಿಸಿದರು. ಇದು ಚೇಸಿಂಗ್‌ ವೇಳೆ ಪರಾಭವಗೊಂಡ ತಂಡದ ಪರ ದಾಖಲಾದ 8ನೇ 90 ಪ್ಲಸ್‌ ಗಳಿಕೆಯಾಗಿದೆ. ರಾಹುಲ್‌ ರಾಜಸ್ಥಾನ್‌ ವಿರುದ್ಧದ ಚೇಸಿಂಗ್‌ ವೇಳೆ ಅಜೇಯ 95 ರನ್‌ ಮಾಡಿದ್ದರು. ಇದರೊಂದಿಗೆ ರಾಹುಲ್‌ ಐಪಿಎಲ್‌ನ ವಿಫ‌ಲ ಚೇಸಿಂಗ್‌ ವೇಳೆ 2 ಸಲ 90 ಪ್ಲಸ್‌ ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆನಿಸಿದರು.
 
ರಾಹುಲ್‌-ಫಿಂಚ್‌ 111 ರನ್‌ ಜತೆಯಾಟ ನಡೆಸಿದರು. ಇದು ಚೇಸಿಂಗ್‌ ವೇಳೆ ಪರಾಭವಗೊಂಡ ತಂಡದ ಪರ ದಾಖಲಾದ 3ನೇ ಅತೀ ದೊಡ್ಡ ಜತೆಯಾಟ. ಇದಕ್ಕೂ ಮುನ್ನ ಗೌತಮ್‌ ಗಂಭೀರ್‌-ರಾಬಿನ್‌ ಉತ್ತಪ್ಪ ರಾಜಸ್ಥಾನ್‌ ವಿರುದ್ಧ 121 ರನ್‌; ಗೇಲ್‌-ಕೊಹ್ಲಿ 2016ರ ಫೈನಲ್‌ನಲ್ಲಿ ಮೊದಲ ವಿಕೆಟಿಗೆ 114 ರನ್‌ ಒಟ್ಟುಗೂಡಿಸಿದ್ದರು.

ರಾಹುಲ್‌ ಚೇಸಿಂಗ್‌ ವೇಳೆ ಐಪಿಎಲ್‌ ಋತುವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಸ್ಥಾಪಿಸಿದರು (482). 2016ರಲ್ಲಿ ಡೇವಿಡ್‌ ವಾರ್ನರ್‌ 468 ರನ್‌ ಹೊಡೆದದ್ದು ಈವರೆಗಿನ ದಾಖಲೆಯಾಗಿತ್ತು.

ರಾಹುಲ್‌ ಈ ಐಪಿಎಲ್‌ನಲ್ಲಿ 652 ರನ್‌ ಬಾರಿಸಿದರು. ಇದು ಐಪಿಎಲ್‌ ಋತುವೊಂದರಲ್ಲಿ ಪಂಜಾಬ್‌ ಕ್ರಿಕೆಟಿಗನ ಅತ್ಯುತ್ತಮ ಸಾಧನೆಯಾಗಿದೆ. 2008ರಲ್ಲಿ 616 ರನ್‌ ಹೊಡೆದ ಶಾನ್‌ ಮಾರ್ಷ್‌ ದಾಖಲೆ ಪತನಗೊಂಡಿತು.

ರಾಹುಲ್‌ ಐಪಿಎಲ್‌ ಸರಣಿಯೊಂದರಲ್ಲಿ 3ನೇ ಅತ್ಯಧಿಕ ರನ್‌ ಹೊಡೆದರು (652). 2016ರಲ್ಲಿ ವಿರಾಟ್‌ ಕೊಹ್ಲಿ 973 ರನ್‌, 2014ರಲ್ಲಿ ರಾಬಿನ್‌ ಉತ್ತಪ್ಪ 660 ರನ್‌ ಹೊಡೆದು ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.