ಐಪಿಎಲ್‌ ಉದ್ಘಾಟನೆ: ರಣವೀರ್‌ ಬದಲು ಹೃತಿಕ್‌ಗೆ ವೇದಿಕೆ

Team Udayavani, Apr 3, 2018, 7:00 AM IST

ಮುಂಬಯಿ: ಬಹು ಆಕರ್ಷಣೀಯ ಕ್ರಿಕೆಟ್‌ ಹಬ್ಬ ಐಪಿಎಲ್‌ನ ಉದ್ಘಾಟನಾ ಸಮಾರಂಭ ತಾರಾ ಸಮಾಗಮದಿಂದ ಪ್ರತಿ ಸಾರಿಯೂ ರಂಗೇರುತ್ತದೆ. ಈ ಬಾರಿಯ ಐಪಿಎಲ್‌ ಉದ್ಘಾಟನೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಸ್ಟಾರ್‌ ನಟರಲ್ಲಿ ಸಣ್ಣ ಬದಲಾವಣೆಯಾಗಿದೆ. ಮುಂಬಯಿಯಲ್ಲಿ ಐಪಿಎಲ್‌ ಉದ್ಘಾಟನೆಯ ದಿನ ನಡೆಯುವ ಸಾಂಸ್ಕೃತಿಕ ಸಮಾರಂಭದಲ್ಲಿ ರಣವೀರ್‌ ಸಿಂಗ್‌ ಬದಲು ಹೃತಿಕ್‌ ರೋಶನ್‌ ಕಾಣಿಸಿಕೊಳ್ಳಲಿದ್ದಾರೆ ರಣವೀರ್‌ ಗಾಯಾಳಾಗಿರುವುದೇ ಇದಕ್ಕೆ ಕಾರಣ.

ಈ ಬಗ್ಗೆ ರಣವೀರ್‌ ಸಿಂಗ್‌ ಅವರ ವಕ್ತಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, “ಫ‌ುಟ್‌ಬಾಲ್‌ ಪಂದ್ಯಾಟವೊಂದರ ವೇಳೆ ರಣವೀರ್‌ ಸಿಂಗ್‌ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಹಾಗಾಗಿ ವೈದ್ಯರು ಅವರಿಗೆ ಒಂದು ತಿಂಗಳ ವರೆಗೆ ವಿಶ್ರಾಂತಿ ಸೂಚಿಸಿದ್ದಾರೆ’ ಎಂದಿದ್ದಾರೆ. ವರದಿಯೊಂದರ ಪ್ರಕಾರ ಜನಪ್ರಿಯ ಬಾಲಿವುಡ್‌ ನಟ ಹೃತಿಕ್‌ ರೋಶನ್‌ ಈ ಜಾಗವನ್ನು ತುಂಬಲಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ