ಪ್ಯಾಡಿ ಆಪ್ಟನ್ ರಾಜಸ್ಥಾನ್ ಕೋಚ್
Team Udayavani, Jan 14, 2019, 12:30 AM IST
ಜೈಪುರ: ಪ್ಯಾಡಿ ಆಪ್ಟನ್ ಅವರನ್ನು ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಇದಕ್ಕೂ ಮುನ್ನ ಆಪ್ಟನ್ 2013ರಿಂದ 2015ರ ತನಕ ರಾಜಸ್ಥಾನ್ ತಂಡದ ಕೋಚ್ ಆಗಿದ್ದರು. ತಂಡದ ನಿಷೇಧದ ಬಳಿಕ, 2016 ಮತ್ತು 2017ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಸಹಾಯಕ ಸಿಬಂದಿಯಾಗಿ ನೇಮಕಗೊಂಡರು.
ಐಪಿಎಲ್ನಲ್ಲಷ್ಟೇ ಅಲ್ಲದೇ ಕ್ರಿಕೆಟಿನ ಇನ್ನಿತರ ಟಿ20 ಲೀಗ್ಗಳಲ್ಲೂ ಪ್ಯಾಡಿ ಆಪ್ಟನ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ಮುಖ್ಯವಾದದ್ದು ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್. ಇದರಲ್ಲಿ ಅವರು ಸಿಡ್ನಿ ಥಂಡರ್ ತಂಡದ ಕೋಚ್ ಆಗಿದ್ದರು. ಭಾರತ 2011ರ ವಿಶ್ವಕಪ್ ಗೆಲುವಿನ ವೇಳೆ ಪ್ರಧಾನ ಕೋಚ್ ಗ್ಯಾರಿ ಕರ್ಸ್ಟನ್ ಅವರ ಸಹಾಯಕರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಕೂಡ ಅಪ್ಟನ್ ಅವರದ್ದಾಗಿದೆ.
“ಅಪ್ಟನ್ ಅವರ ಅನುಭವ ಮತ್ತು ಕ್ರಿಕೆಟ್ ಜ್ಞಾನ ಅಪಾರ. ಅವರು ಮರಳಿ ರಾಜಸ್ಥಾನ್ ತಂಡಕ್ಕೆ ಮಾರ್ಗದರ್ಶಕರಾಗುತ್ತಿರುವುದು ಹೆಮ್ಮೆಯ ಸಂಗತಿ’ ಎಂಬುದಾಗಿ ಫ್ರಾಂಚೈಸಿಯ ಮುಖ್ಯಸ್ಥ ಜುಬಿನ್ ಭರೂಚ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ