ಐಪಿಎಲ್‌ ಮುಗಿಸಿದ ಅಲ್ಜಾರಿ ಜೋಸೆಫ್

Team Udayavani, Apr 17, 2019, 6:30 AM IST

ಮುಂಬಯಿ: ಪದಾರ್ಪಣ ಐಪಿಎಲ್‌ ಪಂದ್ಯದಲ್ಲೇ 12 ರನ್ನಿಗೆ 6 ವಿಕೆಟ್‌ ಉರುಳಿಸಿ ದಾಖಲೆ ಸ್ಥಾಪಿಸಿದ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್ ಅವರ ಐಪಿಎಲ್‌ ಋತು ನಿರಾಸೆಯೊಂದಿಗೆ ಕೊನೆಗೊಂಡಿದೆ. ಗಾಯಾಳಾದ ಅವರೀಗ ಕೂಟದಿಂದಲೇ ಹೊರಬಿದ್ದಿದ್ದಾರೆ.

ಆ್ಯಂಟಿಗುವಾದ ಯುವ ವೇಗಿ ಅಲ್ಜಾರಿ ಜೋಸೆಫ್ ಎ. 13ರ ರಾಜಸ್ಥಾನ್‌ ರಾಯಲ್ಸ್‌ ಎದುರಿನ ಪಂದ್ಯದ ವೇಳೆ ಎಡವಟ್ಟು ಮಾಡಿಕೊಂಡಿದ್ದರು. ಬೌಂಡರಿಯತ್ತ ಧಾವಿಸುತ್ತಿದ್ದ ಚೆಂಡನ್ನು ತಡೆಯುವ ವೇಳೆ ಭುಜದ ನೋವಿಗೊಳಗಾಗಿದ್ದರು. ಭುಜದ ಕೀಲು ಜಾರಿದ ಕಾರಣ ಅವರು ಐಪಿಎಲ್‌ನಲ್ಲಿ ಮುಂದುವರಿಯುವುದಿಲ್ಲ ಎಂದು ತಂಡದ ಪ್ರಕಟನೆ ತಿಳಿಸಿದೆ.

ನ್ಯೂಜಿಲ್ಯಾಂಡಿನ ಆ್ಯಡಂ ಮಿಲೆ° ಬದಲು ಅಲ್ಜಾರಿ ಜೋಸೆಫ್ ಮುಂಬೈ ತಂಡ ಸೇರಿಕೊಂಡಿದ್ದರು. ಹೈದರಾಬಾದ್‌ ವಿರುದ್ಧ ಎ. 6ರಂದು ನಡೆದ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶಿಸಿ ಸುದ್ದಿಯಾಗಿದ್ದರು. ಆದರೆ ರಾಜಸ್ಥಾನ್‌ ವಿರುದ್ಧ 3 ಓವರ್‌ಗಳಲ್ಲಿ 53 ರನ್‌ ನೀಡಿ ದುಬಾರಿಯಾದರು. ಈ ಪಂದ್ಯದ ವೇಳೆಯೇ ಜೋಸೆಫ್ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ