ಐಪಿಎಲ್‌ನಲ್ಲೇ ಮುಂದುವರಿಯುವ ಶಕಿಬ್‌

Team Udayavani, Apr 23, 2019, 10:34 AM IST

ಢಾಕಾ: ಬಾಂಗ್ಲಾದೇಶದ ಸ್ಟಾರ್‌ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವಿಶ್ವಕಪ್‌ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳದೆ ಐಪಿಎಲ್‌ನಲ್ಲೇ ಆಟ ಮುಂದುವರಿಸಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧಿಕಾರಿ ಅಕ್ರಮ್‌ ಖಾನ್‌ ಈ ವಿಷಯ ತಿಳಿಸಿದ್ದಾರೆ.

ವಿಶ್ವಕಪ್‌ ಸಿದ್ಧತೆಗಾಗಿ ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ ಶಿಬಿರ ಸೋಮವಾರದಿಂದ ಆರಂಭಗೊಂಡಿದ್ದು, ಶಕಿಬ್‌ ಇದರಲ್ಲಿ ಪಾಲ್ಗೊಳ್ಳಬೇಕಿತ್ತು. ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಸದಸ್ಯನಾಗಿರುವ ಅವರಿಗೆ ಇದರಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿರ ಲಿಲ್ಲವಾದ್ದರಿಂದ ಶಿಬಿರಕ್ಕೆ ಹಾಜ ರಾಗುವಂತೆ ಬಿಸಿಬಿ ಪತ್ರ ಮೂಲಕ ಸೂಚಿಸಿತ್ತು. ಶಕಿಬ್‌ ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು. ಆದರೀಗ ಚಿತ್ರಣ ಬದಲಾಗಿದೆ.

ವಿದೇಶಿ ಕ್ರಿಕೆಟಿಗನ ಸ್ಥಾನದ ನಿರೀಕ್ಷೆ
“ಶಕಿಬ್‌ ಮಂಗಳವಾರ ಬಾಂಗ್ಲಾಕ್ಕೆ ವಾಪಸಾಗಿ ಶಿಬಿರ ವನ್ನು ಸೇರಿಕೊಳ್ಳಬೇಕಿತ್ತು. ಆದರೆ ಹೈದರಾಬಾದ್‌ ತಂಡ ಕ್ಕಿನ್ನು ಅಗ್ರ ಕ್ರಮಾಂಕದ ವಿದೇಶಿ ಕ್ರಿಕೆಟಿಗರೊಬ್ಬರ ಸೇವೆ ಲಭಿಸದ ಕಾರಣ ಈ ಅವಕಾಶ ತನ್ನದಾಗಬಹುದು ಎಂಬುದಾಗಿ ಶಕಿಬ್‌ ಹೇಳಿದರು. ಹೀಗಾಗಿ ಅವರಿಗೆ ಐಪಿಎಲ್‌ನಲ್ಲೇ ಮುಂದುವರಿಯುವಂತೆ ಸೂಚಿಸ ಲಾಯಿತು’ ಎಂದು ಅಕ್ರಮ್‌ ಖಾನ್‌ ಮಾಧ್ಯಮ ಗಳಿಗೆ ತಿಳಿಸಿದರು.  ಶಕಿಬ್‌ ಐಪಿಎಲ್‌ನಲ್ಲಿ ಆಡಿ ಅಭ್ಯಾಸ ನಡೆಸುವುದು ಕೂಡ ಒಳ್ಳೆಯದು ಎಂಬು ದಾಗಿ ಬಾಂಗ್ಲಾದ ಪೇಸ್‌ ಬೌಲಿಂಗ್‌ ಕೋಚ್‌ ಕೋರ್ಟ್ನಿ ವಾಲ್ಶ್ ಹೇಳಿದ್ದಾರೆ.

ಮೇ ಮೊದಲ ವಾರ ಬಾಂಗ್ಲಾ ತಂಡ ಐರ್ಲೆಂಡ್‌ನ‌ಲ್ಲಿ ತ್ರಿಕೋನ ಸರಣಿ ಆಡಲಿದ್ದು, ಈ ವೇಳೆ ಶಕಿಬ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...