ಇಂದು ಚೆನ್ನೈ- ಮುಂಬೈ ಬಿಗ್‌ ಮ್ಯಾಚ್‌

ತವರಿನಲ್ಲಿ ಅಜೇಯ ದಾಖಲೆ ಹೊಂದಿರುವ ಚೆನ್ನೈ

Team Udayavani, Apr 26, 2019, 9:56 AM IST

ಚೆನ್ನೈ: ಕೂಟದ ಆರಂಭದಲ್ಲಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಬೀಗುತ್ತಿದ್ದ ಚೆನ್ನೈಗೆ ಮೊದಲ ಆಘಾತವಿಕ್ಕಿದ ಮುಂಬೈ ಇಂಡಿಯನ್ಸ್‌ ಮರು ಪಂದ್ಯಕ್ಕೆ ಸಜ್ಜಾಗಿದೆ. ಶುಕ್ರವಾರ ಚೆನ್ನೈಯ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಇತ್ತಂಡಗಳು ಸೆಣಸಲಿವೆ. ಧೋನಿ ಪಡೆ ಸೇಡು ತೀರಿಸಿಕೊಳ್ಳಲು ಕಾದಿದ್ದರೆ, ರೋಹಿತ್‌ ಬಳಗ ಅಂಕಪಟ್ಟಿಯಲ್ಲಿ ಮೇಲೇರುವ ಕಾತರದಲ್ಲಿದೆ.

ಇವೆರಡೂ ಐಪಿಎಲ್‌ನ ಬಲಿಷ್ಠ ತಂಡಗಳಾದ ಕಾರಣ ಇದನ್ನು “ಬಿಗ್‌ ಮ್ಯಾಚ್‌’ ಎಂದೇ ಪರಿಗಣಿಸಲಾಗಿದೆ. ಇತ್ತಂಡಗಳು 26 ಬಾರಿ ಮುಖಾ ಮುಖೀಯಾಗಿವೆ. ಮುಂಬೈ 15, ಚೆನ್ನೈ 11 ಪಂದ್ಯಗಳನ್ನು ಗೆದ್ದಿವೆ. ಚೆನ್ನೈ ಯನ್ನು ಅತ್ಯಧಿಕ 15 ಬಾರಿ ಸೋಲಿ ಸಿದ ತಂಡವೆಂಬುದು ಮುಂಬೈ ಪಾಲಿನ ಹೆಗ್ಗಳಿಕೆ. ಉಳಿದವರ್ಯಾರೂ ಚೆನ್ನೈಯನ್ನು ಏಳಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮಣಿಸಿಲ್ಲ.

ಈ ಲೆಕ್ಕಾಚಾರದಲ್ಲಿ ಮುಂಬೈ ಮೇಲುಗೈ ಸಾಧಿಸಿದ್ದರೂ ಚೆನ್ನೈಗೆ ಇದು ತವರಿನ ಪಂದ್ಯವಾದ್ದರಿಂದ ಗೆಲುವಿನ ಅವಕಾಶ ಉಜ್ವಲವಾಗಿಯೇ ಇದೆ. ಅಲ್ಲದೇ ಈ ಬಾರಿ ತವರಿನಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಚೆನ್ನೈ ಜೈಕಾರ ಮೊಳಗಿಸಿದೆ. ಈ ದಾಖಲೆ ಮುಂಬೈಗೆ ದೊಡ್ಡ ಸವಾಲಾಗಿ ಪರಿಣಮಿಸಲೂಬಹುದು.

ಮುಂಬೈ ಸಶಕ್ತ ತಂಡ
ಮುಂಬೈ ಬ್ಯಾಟಿಂಗ್‌ ಬಲ ಮಧ್ಯ ಮ ಕ್ರಮಾಂಕದಲ್ಲಿ ಅಡಗಿದೆ. ಆಲ್‌ರೌಂಡರ್‌ ಪಾಂಡ್ಯ ಬ್ರದರ್ ಮತ್ತು ಕೈರನ್‌ ಪೊಲಾರ್ಡ್‌ ದೊಡ್ಡ ಮೊತ್ತ ಪೇರಿಸಲು ಸಮರ್ಥರು. ಡಿ ಕಾಕ್‌, ರೋಹಿತ್‌, ಸೂರ್ಯಕುಮಾರ್‌, ಬೆನ್‌ ಕಟಿಂಗ್‌ ಅಬ್ಬರಿಸಿದರೆ ಮುಂಬೈಗೆ ದೊಡ್ಡ ಮೊತ್ತ ಸಮಸ್ಯೆಯೇನಲ್ಲ. ಬುಮ್ರಾ, ಮಾಲಿಂಗ, ಮಾರ್ಕಾಂಡೆ, ಪಾಂಡ್ಯ ಬ್ರದರ್ ಬೌಲಿಂಗ್‌ ವಿಭಾಗದ ಪ್ರಮುಖರು.

ಫಾರ್ಮ್ಗೆ ಬಂದ ವಾಟ್ಸನ್‌
ಕಳಪೆ ಫಾರ್ಮ್ನಿಂದ ಹೊರಬಂದಿರುವ ಶೇನ್‌ ವಾಟ್ಸನ್‌ ಚೆನ್ನೈ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಹೈದರಾಬಾದ್‌ ವಿರುದ್ಧ 96 ರನ್‌ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. ಮತ್ತೂಬ್ಬ ಆರಂಭಕಾರ ಡು ಪ್ಲೆಸಿಸ್‌ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಆಟಗಾರ. ತಂಡದ ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಜಾಧವ್‌ ವಿಶೇಷ ಯಶಸ್ಸು ಕಂಡಿಲ್ಲ. ಸುರೇಶ್‌ ರೈನಾ ಬ್ಯಾಟ್‌ ಕೂಡ ಸದ್ದುಮಾಡುತ್ತಿಲ್ಲ. ಹೀಗಾಗಿ ಧೋನಿ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ. ಚೆನ್ನೈ ಬೌಲಿಂಗ್‌ ಈ ಬಗ್ಗೆ ಎರಡು ಮಾತಿಲ್ಲ ತಾಹಿರ್‌ 16 ವಿಕೆಟ್‌ ಉರುಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಭಜನ್‌, ಜಡೇಜ, ದೀಪಕ್‌ ಚಹರ್‌, ಮುಂಬಯಿಯವರೇ ಆದ ಶಾದೂìಲ್‌ ಠಾಕೂರ್‌ ಮುಂಬೈಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬಹುದೆಂಬ ನಂಬಿಕೆ ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

  • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...