ಐಪಿಎಲ್‌ನ ಕಹಿ ನೆನಪುಗಳು

Team Udayavani, May 12, 2019, 6:00 AM IST

ವಿಶಾಖಪಟ್ಟಣ: 12ನೇ ಆವೃತ್ತಿಯ ಐಪಿಎಲ್‌ ಕೊನೆ ಹಂತಕ್ಕೆ ತಲುಪಿದೆ. ಹಿಂದಿನ ಆವೃತ್ತಿನಂತೆ ಈ ಬಾರಿಯ ಕೂಟ ಕೂಡ ಸಂಭ್ರಮ, ಸಂಕಟ, ನೋವು, ಹತಾಶೆ, ಅಶಿಸ್ತು ಮೊದಲಾದ ನೆನಪುಗಳಿಂದ ಕೂಡಿದೆ. ಐಪಿಎಲ್‌ ಫೈನಲ್‌ ನಡುವೆ ಕೂಟದಲ್ಲಾದ ಕಹಿ ಘಟನೆಗಳ ನೆನಪು ಇಲ್ಲಿದೆ.

ಸಂಕಟಗಳು: ಈ ಬಾರಿಯಾದರೂ ಬೆಂಗಳೂರು ತಂಡ ಕಪ್‌ ಗೆಲ್ಲುತ್ತದೆ ಎಂಬ ಅಭಿಮಾನಿಗಳ ನಂಬಿಕೆ ಮತ್ತೆ ಹುಸಿಯಾಗಿದೆ. ಅತ್ಯಂತ ಕಳಪೆಯಾಟವಾಡಿ ಕೂಟದಿಂದ ತಂಡ ಹೊರಬಿದ್ದಿದೆ. ಮತ್ತೂಂದು ಕಡೆ ಇತಿಹಾಸದಲ್ಲೇ ಮೊದಲ ಬಾರಿ ಫೈನಲ್‌ ತಲುಪುವ ಆಸೆಯಿಂದ ಅತ್ಯುತ್ತಮ ಪ್ರದರ್ಶನ ನೀಡಿ 2ನೇ ಕ್ವಾಲಿಫೈಯರ್‌ವರೆಗೆ ಬಂದ ಡೆಲ್ಲಿ, ಅಲ್ಲಿ ಸೋತು ಹೋಗಿದ್ದು ಅಭಿಮಾನಿಗಳಿಗೆ ಸಂಕಟ ಮೂಡಿಸಿದೆ.

ವಿಪರ್ಯಾಸಗಳು
ಪಂಜಾಬ್‌ ನಾಯಕ ಆರ್‌.ಅಶ್ವಿ‌ನ್‌, ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಜೋಸ್‌ ಬಟ್ಲರ್‌ ಅವರನ್ನು ಮಂಕಡ್‌ ಮಾದರಿಯಲ್ಲಿ ಔಟ್‌ ಮಾಡಿದ್ದು ಭಾರೀ ವಿವಾದ ಹುಟ್ಟು ಹಾಕಿತ್ತು. ಈ ಬಾರಿ ಅಂಪಾಯರ್‌ಗಳಿಂದಲೂ ಕೂಟದುದ್ದಕ್ಕೂ ಕಳಪೆ ಪ್ರದರ್ಶನ ಕಂಡು ಬಂತು. ನೋಬಾಲ್‌ ಗುರುತಿಸುವಲ್ಲಿ ಅಂಪಾಯರ್ ಹಲವು ಬಾರಿ ವಿಫ‌ಲರಾದರು. ಈ ತಪ್ಪಿನಿಂದ ಪಂದ್ಯಗಳ ಫ‌ಲಿತಾಂಶಗಳೇ ಬದಲಾದವು. ಅಂಪಾಯರ್‌ ಮತ್ತು ಆಟಗಾರರ ನಡುವೆ ಭಾರೀ ವಾಗ್ವಾದಗಳೇ ಜರಗಿದವು. ಇವೆಲ್ಲ ವಿಪರ್ಯಾಸಗಳಾಗಿ ದಾಖಲಾದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ