ಎಂ. ಎಸ್‌. ಧೋನಿ ರನೌಟ್‌ ಆಗಿದ್ದಕ್ಕೆ ಬಿಕ್ಕಿಬಿಕ್ಕಿ ಅತ್ತ ಬಾಲಕ!

Team Udayavani, May 20, 2019, 10:26 AM IST

ಚೆನ್ನೈ: ಐಪಿಎಲ್‌ ಟಿ20 ಪಂದ್ಯಾವಳಿಯ ಮುಂಬೈ ಇಂಡಿಯನ್ಸ್‌ ವಿರುದ್ಧದ ಫೈನಲ್‌ನಲ್ಲಿ ಚೆನ್ನೈಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ವಿವಾದಾತ್ಮಕ ರನೌಟ್‌ಗೆ ಬಲಿಯಾಗಿದ್ದರು. ಇದರಿಂದಾಗಿಯೇ ಚೆನ್ನೈ ಕೂಟದಲ್ಲಿ ಸೋಲು ಅನುಭವಿಸುವಂತಾಯಿತು ಎಂಬ ಮಾತು ಈಗಲೂ ಕೇಳಿಬರುತ್ತಿದೆ.

ಧೋನಿ ರನೌಟ್‌ ಆದಾಗ ಅವರ ಅಭಿಮಾನಿಗಳೇನಕರು ದುಃಖೀತರಾಗಿದ್ದರು. ಆಗ ಚೆನ್ನೈ ತಂಡದ ಅಭಿಮಾನಿ ಬಾಲಕನೊಬ್ಬ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೇ 12ರಂದು ಹೈದರಾಬಾದ್‌ನಲ್ಲಿ ಫೈನಲ್‌ ಪಂದ್ಯ ನಡೆದಿತ್ತು. ರೋಚಕ ಜಯದೊಂದಿಗೆ ನಾಲ್ಕನೇ ಬಾರಿಗೆ ಮುಂಬೈ ಚಾಂಪಿಯನ್‌ ಆಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ