ಐಪಿಎಲ್ ಫ್ಯಾನ್‌ ಪಾರ್ಕ್‌ನಲ್ಲಿ ಕ್ರಿಕೆಟ್ ವೀಕ್ಷಣೆ

Team Udayavani, May 11, 2019, 6:05 AM IST

ಮಂಗಳೂರು: ವಿಶಾಖಪಟ್ಟಣದಲ್ಲಿ ಶುಕ್ರವಾರದ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಫ್ಯಾನ್‌ ಪಾರ್ಕ್‌ ಕ್ರಿಕೆಟ್ ವೀಕ್ಷಣೆಯನ್ನು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿತ್ತು. ನೂರಾರು ಮಂದಿ ಕ್ರಿಕೆಟ್ ಪ್ರೇಮಿಗಳು ಮೈದಾನಕ್ಕೆ ಬಂದು ದೊಡ್ಡ ಪರದೆಯಲ್ಲಿ ಕ್ರಿಕೆಟ್ ಆಟವನ್ನು ವೀಕ್ಷಿಸಿದರು.

ಎ. 20ರಂದು ಸಂಜೆ 4 ಗಂಟೆಗೆ ನಡೆದ ರಾಜಸ್ಥಾನ್‌ ರಾಯಲ್ಸ್-ಮುಂಬೈ ಇಂಡಿಯನ್ಸ್‌, ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್-ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪಂದ್ಯ ಮತ್ತು ಎ. 21ರಂದು ಸನ್‌ರೈಸರ್ ಹೈದರಾಬಾದ್‌-ಕೋಲ್ಕತ್ತಾ ನೈಟ್ರೈಡರ್, ರಾತ್ರಿ ನಡೆದ ರಾಯಲ್ ಚಾಲೆಂಜರ್ ಬೆಂಗಳೂರು-ಚೆನ್ನೈ ಸೂಪರ್‌ ಕಿಂಗ್ಸ್‌ ಕ್ರಿಕೆಟ್ ಪಂದ್ಯವನ್ನು ನೆಹರೂ ಮೈದಾನ ದಲ್ಲಿ ಫ್ಯಾನ್‌ ಪಾರ್ಕ್‌ ಮೂಲಕ ವೀಕ್ಷಣೆಗೆ ಆಯೋಜಿಸಲಾಗಿತ್ತು. ಆದರೆ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಆಯೋಜನೆಯನ್ನು ರದ್ದು ಗೊಳಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ