ಮತ್ತೆ ಅಗ್ರಸ್ಥಾನಕ್ಕೇರಲು ಚೆನ್ನೈ ಕಾತರ


Team Udayavani, May 1, 2019, 10:21 AM IST

csk

ಚೆನ್ನೈ: ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ಇನ್ನೊಂದು ಪಂದ್ಯಕ್ಕೆ ಸಜ್ಜಾಗಿವೆ. ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಇತ್ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆೆ.

ಕೂಟದ ಮೊದಲ ಮುಖಾಮುಖೀ ಯಲ್ಲಿ ಚೆನ್ನೈ ಡೆಲ್ಲಿ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಸೋಲಿನ ಸೇಡಿಗೆ ಡೆಲ್ಲಿ ಕಾದು ಕುಳಿತಿದೆ. ಆದರೆ ಡೆಲ್ಲಿಗೆ ಈ ಸವಾಲು ಸುಲಭದ್ದಲ್ಲ. ಚೆನ್ನೈ ತವರಿನಂಗಳದಲ್ಲಿ ಹೆಚ್ಚು ಬಲಿಷ್ಠವಾಗಿದೆ ಮಾತ್ರ ವಲ್ಲದೇ ಅಗ್ರಸ್ಥಾನಕ್ಕೇರಲು ಹಾತೊರೆಯುತ್ತಿದೆ.

ಡೆಲ್ಲಿಗೆ ಯುವ ಆಟಗಾರರ ಬಲ
ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿ ಅಚ್ಚರಿ ಮೂಡಿಸಿರುವ ಡೆಲ್ಲಿ ತಂಡ ಯುವ ಆಟಗಾರರ ದಂಡನ್ನು ಹೊಂದಿದೆ. ನಾಯಕ ಶ್ರೇಯಸ್‌ ಅಯ್ಯರ್‌, ಪೃಥ್ವಿ ಶಾ, ರಿಷಬ್‌ ಪಂತ್‌, ಕಾಗಿಸೋ ರಬಾಡ, ಅಕ್ಷರ್‌ ಪಟೇಲ್‌ ತಂಡದ ಆಸ್ತಿಯಾಗಿದ್ದಾರೆ. ಅನುಭವಿ ಆಟಗಾರ ಶಿಖರ್‌ ಧವನ್‌ ಉತ್ತಮ ಫಾರ್ಮ್ನಲ್ಲಿರುವುದೂ ತಂಡಕ್ಕೆ ಬಲ ನೀಡಿದೆ.

ಬೌಲಿಂಗ್‌ನಲ್ಲಿ ಇಶಾಂತ್‌, ಲಮಿಚಾನೆ, ಮಾರಿಸ್‌ ಉತ್ತಮ ಲಯದಲ್ಲಿದ್ದಾರೆ. ಹೀಗಾಗೀ ಡೆಲ್ಲಿ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರ್ಪಡಿಸಿಕೊಂಡಿದೆ.

ಚೆನ್ನೈ ಬೌಲಿಂಗ್‌ ಹೆಚ್ಚು ಘಾತಕ
ಬ್ಯಾಟಿಂಗ್‌ಗಿಂತ ಚೆನ್ನೈ ಬೌಲಿಂಗ್‌ ಹೆಚ್ಚು ಘಾತಕವಾಗಿದೆ. ತಾಹಿರ್‌, ಚಹರ್‌, ಹರ್ಭಜನ್‌, ಜಡೇಜ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಆದರೆ ಬ್ಯಾಟಿಂಗ್‌ ವೈಫ‌ಲ್ಯದಿಂದಾಗಿ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಯಾರೊಬ್ಬರೂ ಸ್ಥಿರ ಬ್ಯಾಟಿಂಗ್‌ ನಡೆಸುತ್ತಿಲ್ಲ. ವಾಟ್ಸನ್‌ ಒಂದು ಪಂದ್ಯವಾಡಿದರೆ ಮತ್ತೆರಡು ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಕೇದಾರ್‌ ಜಾಧವ್‌, ಅಂಬಾಟಿ ರಾಯುಡು, ರೈನಾ ಕೂಡ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಮತ್ತೆ ಕಾಡಲಿದೆಯೇ ಧೋನಿ ಗೈರು!
ಧೋನಿ ಅನುಪಸ್ಥಿತಿಯಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ತವರಿನಲ್ಲೇ ಚೆನ್ನೈ 46 ರನ್‌ಗಳ ಸೋಲನುಭವಿಸಿತ್ತು. ಡೆಲ್ಲಿ ವಿರುದ್ಧವೂ ಅವರು ಆಡುವುದೂ ಅನುಮಾನವಾಗಿದೆ. ಧೋನಿ ಅನುಪಸ್ಥಿತಿಯಲ್ಲಿ ತಂಡ ಸೋಲುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಗೈರಿನಲ್ಲಿ ಚೆನ್ನೈ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಸೋತಿದೆ.

ಟಾಪ್ ನ್ಯೂಸ್

ಮನಸ್ಮಿತ ಹಾಡು ಹಬ್ಬ : ಜೂನ್‌ನಲ್ಲಿ ತೆರೆಗೆ

ಮನಸ್ಮಿತ ಹಾಡು ಹಬ್ಬ: ಜೂನ್‌ನಲ್ಲಿ ತೆರೆಗೆ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

1-saadasd

ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಕೋಲ್ಕತಾ ಸಜ್ಜು

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

9accident

ಟ್ರ್ಯಾಕ್ಟರ್-ಬೈಕ್ ಢಿಕ್ಕಿ: ತಂದೆ ಮಗ ಸಾವು

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

1-f-sdfsdf

ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

ಹೊಸ ಸೇರ್ಪಡೆ

11waadi

ಸಂವಿಧಾನ ಉಳಿಯದಿದ್ದರೆ ಸೌರ್ಹಾದತೆಗೆ ಧಕ್ಕೆ: ಅಪ್ಪಗೇರೆ

ಹೊರಬಂತು “ಶುಭಮಂಗಳ” ಟೀಸರ್‌

ಹೊರಬಂತು “ಶುಭಮಂಗಳ” ಟೀಸರ್‌

jds

ಸರ್ಕಾರದಿಂದ ರೈತರ ನಿರ್ಲಕ್ಷ್ಯ: ಆಕ್ರೋಶ

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

10protest

20ರಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.