ಡೆಲ್ಲಿಗೆ ಐದು ವಿಕೆಟ್ ಗೆಲುವು

Team Udayavani, Apr 21, 2019, 6:00 AM IST

ಹೊಸದಿಲ್ಲಿ: ಪಂಜಾಬ್‌ ಎದುರಿನ ಶನಿವಾರದ ಕೋಟ್ಲಾ ಕದನದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 7 ವಿಕೆಟಿಗೆ 163 ರನ್‌ ಗಳಿಸಿದರೆ, ಡೆಲ್ಲಿ ತಂಡವು 19.4 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿ ವಿಜಯಿಯಾಯಿತು.

ಡೆಲ್ಲಿ ಚೇಸಿಂಗ್‌ ವೇಳೆ ಶಿಖರ್‌ ಧವನ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರಿಂದ ಅರ್ಧಶತಕ ದಾಖಲಾಯಿತು. ಅವರಿಬ್ಬರು ದ್ವಿತೀಯ ವಿಕೆಟಿಗೆ 92 ರನ್‌ ಪೇರಿಸಿದ್ದರಿಂದ ಡೆಲ್ಲಿ ಸುಲಭ ಗೆಲುವು ಕಾಣುವಂತಾಯಿತು. ಧವನ್‌ 56 ರನ್ನಿಗೆ ಔಟಾದರೆ ಅಯ್ಯರ್‌ 58 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಒಂದೆಡೆ ವಿಕೆಟ್ ಉರುಳಿತ್ತಿದ್ದರೂ 13ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡ ಗೇಲ್ 37 ಎಸೆತಗಳಿಂದ 69 ರನ್‌ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಅವರ ಎಂದಿನ ಸ್ಫೋಟಕ ಆಟದಲ್ಲಿ 5 ಸಿಕ್ಸರ್‌, 6 ಬೌಂಡರಿ ಒಳಗೊಂಡಿತ್ತು.

ಕೆ.ಎಲ್. ರಾಹುಲ್ (12), ಮಾಯಾಂಕ್‌ ಅಗರ್ವಾಲ್ (2), ಡೇವಿಡ್‌ ಮಿಲ್ಲರ್‌ (7) ಅಗ್ಗಕ್ಕೆ ಔಟಾದರೂ ಗೇಲ್ ತಮ್ಮ ಸಹಜ ಆಟವಾಡುತ್ತ ಹೋದರು. ಗೇಲ್ ನಿರ್ಗಮನದ ಬಳಿಕ ಮನದೀಪ್‌ ಸಿಂಗ್‌ (30), ನಾಯಕ ಆರ್‌. ಅಶ್ವಿ‌ನ್‌ (16) ಮತ್ತು ಹರ್‌ಪ್ರೀತ್‌ ಬ್ರಾರ್‌ (20) ಸೇರಿಕೊಂಡು ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

40 ರನ್ನಿಗೆ 3 ವಿಕೆಟ್ ಕಿತ್ತ ನೇಪಾಲದ ಸ್ಪಿನ್ನರ್‌ ಸಂದೀಪ್‌ ಲಮಿಶಾನೆ ಡೆಲ್ಲಿಯ ಯಶಸ್ವಿ ಬೌಲರ್‌. ಕಾಗಿಸೊ ರಬಾಡ ಮತ್ತು ಅಕ್ಷರ್‌ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ